ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಳಿಗ್ಗೆ 105 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ರೆ, ಸಂಜೆಯ ಹೆಲ್ತ್ ಬುಲೆಟಿನ್ ನಲ್ಲಿ 138ಕ್ಕೆ ಏರಿಕೆಯಾಗಿದೆ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಸಂಜೆಯವ ವೇಳೆಗೆ 3 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕರಾವಳಿಗೆ ಮತ್ತೆ ಆತಂಕ ಶುರುವಾಗಿದೆ.

ಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ 45 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದ್ರೀಗ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ 47ಕ್ಕೆ ಏರಿಕೆಯಾಗಿದೆ. ಹಾಸನ ಜಿಲ್ಲೆಯಲ್ಲಿ 18 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ರಾಯಚೂರು ಜಿಲ್ಲೆಯಲ್ಲಿ 10 ಮಂದಿಗೆ ಕೊರೊನಾ ಸೋಂಕು ಕಾಣಸಿಕೊಂಡಿದೆ.

ಉಳಿದಂತೆ ತುಮಕೂರಿನಲ್ಲಿ 8, ಮಂಡ್ಯ 8, ವಿಜಯಪುರ 7, ಬೀದರ್ ನಲ್ಲಿ 6, ಚಿಕ್ಕಮಗಳೂರು 5, ಬೆಂಗಳೂರು ನಗರ 5, ಬೆಂಗಳೂರು ಗ್ರಾಮಾಂತರ 4, ಮಂಡ್ಯ 3, ಉಡುಪಿ 3, ದಾವಣಗೆರೆ 3, ಹಾವೇರಿ 3, ಶಿವಮೊಗ್ಗ 2, ಧಾರವಾಡ 2, ಯಾದಗಿರಿ 2, ದಕ್ಷಿಣ ಕನ್ನಡ 1, ಬಾಗಲಕೋಟೆ 1, ಬೆಳಗಾವಿ 1, ಚಿತ್ರದುರ್ಗ1, ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಓರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.