ಸೀಲ್ ಡೌನ್ ತೆರವಿಗೆ ಆಗ್ರಹಿಸಿ ಬಿಜೆಪಿ ಮುಖಂಡನ ರಂಪಾಟ : ಗೋವಿಂದ ಪ್ರಭು ಸೇರಿ 30 ಮಂದಿಯ ವಿರುದ್ದ ಎಫ್ ಐಆರ್ ದಾಖಲು

0

ಬಂಟ್ವಾಳ : ಕೊರೊನಾ ಸೋಂಕಿನಿಂದ ತತ್ತರಿಸಿರುವ ಬಂಟ್ವಾಳದ ಕಸಬಾ ಏರಿಯಾವನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ. ಆದ್ರೆ ಬಿಜೆಪಿಯ ಕೆಲ ನಾಯಕರೇ ಸೀಲ್ ಡೌನ್ ತೆರವು ಮಾಡುವಂತೆ ತಹಶೀಲ್ದಾರ್ ಹಾಗೂ ಪೊಲೀಸರ ಜೊತೆಗೆ ರಂಪಾಟ ನಡೆಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲೀಗ 30 ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿಬೀಳಿಸಿರುವ ಬಂಟ್ವಾಳದ ಕಸಬಾದಲ್ಲಿ ಬರೋಬ್ಬರಿ 9 ಮಂದಿಗೆ ಕೊರೊನಾ ಸೋಂಕು ಕಾಣಸಿಕೊಂಡಿದೆ. ಮಾತ್ರವಲ್ಲ 3 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಕಸಬಾ ಪ್ರದೇಶವನ್ನು ಕಳೆದೊಂದು ತಿಂಗಳಿನಿಂದಲೂ ಸೀಲ್ ಡೌನ್ ಮಾಡಿದೆ. ಆದ್ರೀಗ ಬಂಟ್ವಾಳ ಪುರಸಭೆಯ ಹಿರಿಯ ಸದಸ್ಯ ಗೋವಿಂದ ಪ್ರಭು ಸೇರಿದಂತೆ ಹಲವರು ಸೀಲ್ ಡೌನ್ ತೆರವು ಮಾಡುವಂತೆ ಕಾವಲಿದ್ದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಗೋವಿಂದ ಪ್ರಭು ಅವರ ರಂಪಾಟ ಹೆಚ್ಚಾಗುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರ ಮೇಲೂ ಹರಿಹಾಯ್ದಿದ್ದಾರೆ. ತಹಶೀಲ್ದಾರ್ ಅವರು ಕಾನೂನು ಪ್ರಕಾರ ಸೀಲ್ ಡೌನ್ ಮಾಡಲಾಗಿದೆ ಎಂದು ಮನವರಿಕೆ ಮಾಡಿದ್ರೂ ಕೂಡ ಗೋವಿಂದ ಪ್ರಭು ರಂಪಾಟ ನಡೆಸಿದ್ದಾರೆ. ಅಂತಿಮವಾಗಿ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ನಿಯೋಜಿಸಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು ನೀಡಿದ ದೂರಿನ ಆಧಾರದ ಮೇಲೆ ಬಂಟ್ವಾಳ ನಗರ ಠಾಣೆಯ ಪೊಲೀಸರು ಇದೀಗ 30 ಮಂದಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಡಳಿತ ಪಕ್ಷದ ಮುಖಂಡರೇ ಇದೀಗ ರಂಪಾಟ ನಡೆಸಿರೋದು ಸಾರ್ವಜನಿಕ ವಲಯದಲ್ಲಿ ಬಾರೀ ಚರ್ಚೆಗೆ ಗ್ರಾಸವಾಗಿದೆ.

https://youtu.be/HNtGiuucuro
Leave A Reply

Your email address will not be published.