ಮೊನ್ನೆ ಮೊನ್ನೆ ಅರೆಬೆತ್ತಲೆಯಾಗಿ ವಧುವಿನ ಬಟ್ಟೆ-ಆಭರಣ ತೊಟ್ಟು ಪೋಟೋಶೂಟ್ ಮಾಡಿಸಿಕೊಂಡಿದ್ದ ಹೆಣ್ಣುಮಗಳು ಮತ್ತೊಂದು ಹೆಜ್ಜೆ ಮುಂದೇ ಹೋಗಿದ್ದು, ಮಧುಮಂಚದಲ್ಲಿ ಮೊದಲ ರಾತ್ರಿಯ ಕಾನ್ಸೆಪ್ಟ್ ಪೋಟೋಶೂಟ್ ನಲ್ಲಿ ಪಾಲ್ಗೊಳ್ಳುವ ಮೂಲಕ ಮತ್ತೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಹಿಂದೆ ಕೇರಳ ಮೂಲದ ಜೋಡಿಯೊಂದು ಋಷಿದಂಪತಿಗಳ ಕಾನ್ಸೆಪ್ಟ್ ನಲ್ಲಿ ಅಶ್ಲೀಲವಾಗಿ ಪೋಟೋಶೂಟ್ ನಡೆಸುವ ಮೂಲಕ ಹಿಂದೂಧರ್ಮಿಯರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೇ ಜೋಡಿಯ ಪೈಕಿ ಹೆಣ್ಣುಮಗಳು ಮತ್ತೊಮ್ಮೆ ಕೇರಳ ಶೈಲಿಯ ಆಭರಣಗಳನ್ನು ತೊಟ್ಟು ಅರ್ಧ ಸೀರೆ, ಇನ್ನರ್ಧ ಝೀನ್ಸ್ ಚಡ್ಡಿತೊಟ್ಟು ಪೋಟೋಶೂಟ್ ಮಾಡಿಸಿಕೊಂಡಿದ್ದಳು.

ವಧುವಿನ ಶೃಂಗಾರದಲ್ಲಿ ಮದ್ಯದ ಬಾಟಲಿ, ಸಿಗರೇಟು ಹಿಡಿದು ನಡೆಸಿದ ಪೋಟೋಶೂಟ್ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಈ ಪೋಟೋಗಳಿಗೆ ಸಂಪ್ರದಾಯಸ್ಥರಿಂದ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ವಧುವಿನ ಗೆಟಪ್ ನಲ್ಲಿ ಮದ್ಯಸೇವನೆ, ಸ್ಮೋಕಿಂಗ್ ಎಲ್ಲವೂ ನಂಬಿಕೆಗಳಿಗೆ ಎಸಗಿದ ಅಪಚಾರ ಎಂಬ ಕಮೆಂಟ್ ಕೇಳಿಬಂದಿತ್ತು.

ಇದೀಗ ಅದೇ ಹೆಣ್ಣುಮಗಳು ಮತ್ತೊಂದು ಹೆಜ್ಜೆ ಮುಂದೇ ಹೋಗಿದ್ದು, ಮೊದಲ ರಾತ್ರಿಯ ಮಂಚದ ಮೇಲೆ ಅರೆಬೆತ್ತಲಾಗಿ ಕೂತು, ಮಾದಕ ನೋಟ ಬೀರುತ್ತಿರುವ ಪೋಟೋ ತೆಗೆಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಟೋ ವೈರಲ್ ಆಗಿದೆ.

ಪೋಟೋಶೂಟ್ ಹೆಸರಿನಲ್ಲಿ ಸಭ್ಯತೆಯ ಚೌಕಟ್ಟನ್ನು ದಾಟುವ ಪ್ರಯತ್ನ ನಡೆದಿದೆ ಎಂದು ಹಲವರು ಒತ್ತಾಯಿಸಿದ್ದು, ಈ ರೀತಿಯ ಸಾಮಾಜಿಕ ಸ್ವಾಸ್ಥ್ಯ ಕದಡುವ ಪೋಟೋಶೂಟ್ ಗಳಿಗೆ ಕಡಿವಾಣ ಹಾಕಬೇಕೆಂದ ಒತ್ತಡವೂ ಕೇಳಿಬಂದಿದೆ.