ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಜನರ ಕೈಯಲ್ಲಿ ಹಣದ ಹರಿವು ಕಡಿಮೆಯಾಗುತ್ತಲೇ ಕ್ರಿಡಿಟ್ ಕಾರ್ಡ್ ಮೊರೆ ಹೋಗಿದ್ದರು. ಆದ್ರೀಗ ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಗ್ ಶಾಕ್ ಕೊಟ್ಟಿವೆ.

ಲಾಕ್ ಡೌನ್ ಆದೇಶ ಜಾರಿಯಾಗುತ್ತಲೇ ಕ್ರೆಡಿಟ್ ಕಾರ್ಡ್ ಬಳಕೆ ಜಾಸ್ತಿಯಾಗಿದೆ. ಆದರೆ ಹಣದ ಮರುಪಾವತಿಯ ಪ್ರಮಾಣ ತೀರಾ ಕಡಿಮೆಯಾಗಿದೆ.

ಹೀಗಾಗಿ ಖಾಸಗಿ ಸ್ವಾಮ್ಯದ ಬ್ಯಾಂಕುಗಳಾದ ಆಕ್ಸಿಸ್, ಕೋಟಕ್ ಮಹೇಂದ್ರಾ ಸೇರಿದಂತೆ ಹಲವು ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಬಳಕೆಯ ಮಿತಿಯ ಮೇಲೆ ನಿಯಂತ್ರಣ ಹೇರಿದ್ದು, ಶೇ.30 ರಿಂದ ಶೇ.90ರಷ್ಟು ಕ್ರೆಡಿಟ್ ಕಾರ್ಡ್ ಬಳಕೆಯ ಮಿತಿಯನ್ನು ಕಡಿತ ಮಾಡಿವೆ.

ಆಕ್ಸಿಸ್ ಬ್ಯಾಂಕ್ ಈ ಹಿಂದೆಯಿದ್ದ ಕ್ರೆಡಿಟ್ ಕಾರ್ಡ್ ಮಿತಿಯನ್ನು 50,000 ಕ್ಕೆ ಇಳಿಕೆ ಮಾಡಿದ್ರೆ, ಕೋಟಕ್ ಮಹೀಂದ್ರಾ ಬ್ಯಾಂಕ್ 75,000 ರೂಪಾಯಿಯಿಂದ 45,000 ರೂಪಾಯಿಗೆ ಇಳಿಕೆ ಮಾಡಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಬಂಧಿಯಾಗಿರೋ ಜನರೆಲ್ಲಾ ಕ್ರೆಡಿಟ್ ಕಾರ್ಡ್ ಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದರು. ಇದೀಗ ಬ್ಯಾಂಕುಗಳು ಕ್ರೆಡಿಟ್ ಕಾರ್ಡುಗಳ ಕ್ರೆಡಿಟ್ ಲಿಮಿಟ್ ಮೇಲೆ ನಿರ್ಬಂಧ ಹೇರಿರೋದು ಗ್ರಾಹಕರಿಗೆ ನಿರಾಸೆಯನ್ನು ತಂದೊಡ್ಡಿದೆ.