jio – facebook ಬಿಗ್ ಡೀಲ್ : ಬರೋಬ್ಬರಿ 43,574 ಕೋಟಿಗೆ ಜಿಯೋದ ಶೇ.9.99 ಷೇರು ಶೇರು ಖರೀದಿ

0

ಮುಂಬೈ : ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿಯೇ ಹೊಸ ಅಲೆಯನ್ನು ಸೃಷ್ಟಿಸಿರೋ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ಜಿಯೋ ಟೆಲಿಕಾಂ ಸಂಸ್ಥೆ ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿದೆ. ಇದೀಗ ಬೆಳವಣಿಗೆಯೊಂದರಲ್ಲಿ ಜಿಯೋ ತನ್ನ ಶೇ.9.99 ರಷ್ಟು ಷೇರುಗಳನ್ನು ಇದೀಗ ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್ ಬುಕ್ ಗೆ ಬರೋಬ್ಬರಿ 43,574 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ.

2016 ರಲ್ಲಿ ಭಾರತದಲ್ಲಿ ಕಾರ್ಯಾರಂಭ ಮಾಡಿರೋ ಜಿಯೋ ಭಾರತದ ಡಿಜಿಟಲ್ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಬರೆದಿತ್ತು. ಅತೀ ಕಡಿಮೆ ದರದಲ್ಲಿ ಜನರಿಗೆ ಟೆಲಿಕಾಂ ಸೇವೆಯನ್ನು ಒದಗಿಸಿದ ಕೀರ್ತಿಗೆ ಪಾತ್ರವಾಗಿದೆ.

ದೇಶದಲ್ಲಿ ಅತೀ ಹೆಚ್ಚು ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಸೆಳೆಯೋ ಮೂಲಕ ಉಚಿತವಾಗಿ ಡಾಟಾ ಹಾಗೂ ಕರೆ ಸೌಲಭ್ಯವನ್ನೂ ಕೂಡ ಗ್ರಾಹಕರಿಗೆ ಒದಗಿಸಿದೆ. ಇದೀಗ ತನ್ನ ಶೇರುಗಳನ್ನು ದಾಖಲೆಯ ಮೊತ್ತಕ್ಕೆ ಸೇಲ್ ಮಾಡೋ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದಿದೆ.

ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್​ ಇಂಡಿಯಾದ ಕನಸು ಕಂಡಿದ್ದಾರೆ. ಸುಲಭ ಜೀವನ ನಡೆಸುವುದು ಮತ್ತು ಸುಲಭವಾಗಿ ಉದ್ಯಮ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶಗಳು. ಕೊರೋನಾ ವೈರಸ್​ ಕಡಿಮೆ ಆದ ನಂತರ ಭಾರತ ಆರ್ಥಿಕವಾಗಿ ಸಬಲವಾಗಲಿದೆ.

ಭಾರತದ ಆರ್ಥಿಕತೆ ಮೇಲೆ ಈ ಒಪ್ಪಂದ ಪ್ರಮುಖ ಬದಲಾವಣೆಗೆ ಕಾರಣವಾಗಲಿದೆ. ಭಾರತದ ಡಿಜಿಟಲ್​ ಸರ್ವೋದಯದ ಕನಸು ಕಂಡು ನಾವು ಜಿಯೋ ಆರಂಭಿಸಿದ್ದೆವು. ಇಡೀ ಜಗತ್ತು ಡಿಜಿಟಲೀಕರಣವಾಗಿದೆ. ಈ ವೇಳೆ ಭಾರತೀಯರೂ ಡಿಜಿಟಲ್​ ಯುಗದಲ್ಲಿ ಮುಂದೆ ಬರಬೇಕು ಎಂಬುದು ನಮ್ಮ ಆಶಯವಾಗಿತ್ತು.

ಈಗ ಈ ವಿಚಾರದಲ್ಲಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಫೇಸ್​ಬುಕ್​ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಆರ್​​ಐಎಲ್​ ಮುಖ್ಯಸ್ಥ ಮುಕೇಶ್​ ಅಂಬಾನಿ ಹೇಳಿದ್ದಾರೆ.

ಇನ್ನು ಜಿಯೋ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ಫೇಸ್ ಬುಕ್ ಮುಖ್ಯಸ್ಥ ಮಾರ್ಕ್​ ಜುಕರ್​ಬರ್ಗ್​ ಕೂಡ ಖುಷಿಯಾಗಿದ್ದಾರೆ. ಡಿಜಿಟಲ್ ಯುಗ ಬೆಳೆಯುತ್ತಿರುವ ಕಾಲದಲ್ಲಿ ಫೇಸ್ ಬುಕ್ ಜಿಯೋ ಜೊತೆಗೆ ಮಾಡಿಕೊಂಡಿರುವ ಒಪ್ಪಂದ ಬಹಳ ಮಹತ್ವವನ್ನು ಪಡೆದುಕೊಂಡಿದೆ ಎಂದಿದ್ದಾರೆ.

Leave A Reply

Your email address will not be published.