ಬುಧವಾರ, ಜೂನ್ 18, 2025
HomeBreakingನಾಳೆಯಿಂದ ರಾಜ್ಯದ ಶಾಲೆ -ಕಾಲೇಜುಗಳಿಗೆ ದಸರಾ ರಜೆ : ಯಡಿಯೂರಪ್ಪ ಆದೇಶ

ನಾಳೆಯಿಂದ ರಾಜ್ಯದ ಶಾಲೆ -ಕಾಲೇಜುಗಳಿಗೆ ದಸರಾ ರಜೆ : ಯಡಿಯೂರಪ್ಪ ಆದೇಶ

- Advertisement -

ಬೆಂಗಳೂರು : ವಿದ್ಯಾಗಮ ಯೋಜನೆಯ ಹಿನ್ನೆಲೆಯಲ್ಲಿ ರಾಜ್ಯದ ಶಾಲಾ – ಕಾಲೇಜುಗಳಿಗೆ ದಸರಾ ರಜೆ ರದ್ದು ಮಾಡಲಾಗಿತ್ತು. ಆದ್ರೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಕ್ಟೋಬರ್ 31ರ ವರೆಗೆ ರಾಜ್ಯದ ಶಾಲೆ-ಕಾಲೇಜುಗಳಿಗೆ ದಸರಾ ರಜೆ ಘೋಷಣೆ ಮಾಡಿದ್ದಾರೆ.

Alvas1

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೋವಿಡ್-19 ಸೋಂಕಿನ ಹಿನ್ನಲೆಯಲ್ಲಿ ಸದ್ಯಕ್ಕೆ ಶಾಲೆಗಳನ್ನು ಪ್ರಾರಂಭಿಸದಿರಲು ಮತ್ತು ವಿದ್ಯಾಗಮ ಕಾರ್ಯಕ್ರಮವನ್ನು ಸಹ ಸ್ಥಗಿತಗೊಳಿಸಲು ಈಗಾಗಲೇ ಆದೇಶಿಸಿದ್ದರು. ಆದರೆ ರಾಜ್ಯದ ಶಿಕ್ಷಕರಿಗೆ ಬೇಸಿಗೆ ರಜೆಯನ್ನು ರದ್ದುಗೊಳಿಸಿದ್ದರ ವಿರುದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಅ.30ರವರೆಗೆ ಮೂರು ವಾರಗಳ ಮಧ್ಯಂತರ ರಜೆಯನ್ನು ಘೋಷಿಸಿ ಆದೇಶ ಹೊರಡಿಸಲಾಗಿದೆ.

Vidhana Soudha

ಹಲವಾರು ಶಿಕ್ಷಕರು ಸಹ ಕೋವಿಡ್-19 ಸೋಂಕಿಗೆ ಒಳಗಾಗಿರುವುದನ್ನ ಮಾಧ್ಯಮದ ಮೂಲಕ ಗಮನಿಸಿದ್ದೇನೆ. ಆದ್ದರಿಂದ ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರುಗಳ ಆರೋಗ್ಯದ ಹಿತದೃಷ್ಠಿಯಿಂದ ಶಆಲೆಗಳಿಗೆ ದಿನಾಂಕ 12-10-2020ರಿಂದ ಮೂರು ವಾರಗಳ ಕಾಲ ಅಂದರೆ ದಿನಾಂಕ 30-10-2020ರವರೆಗೆ ಮದ್ಯಂತರ ರಜೆ ಘೋಷಿಸಿ ಆದೇಶ ಹೊರಡಿಸಲು ಹಿರಿಯ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿರುತ್ತೇನೆ ಎಂಬುದಾಗಿ ತಿಳಿಸಿದ್ದಾರೆ.

School Holiday
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular