ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಕಿನ ಅಬ್ಬರದ ನಡುವಲ್ಲೇ ಡೆಲ್ಟಾ ಪ್ಲಸ್ ವೈರಸ್ ಸೋಂಕು ಕಾಣಿಸಿಕೊಂಡಿದೆ. ಮೈಸೂರು ಜಿಲ್ಲೆಯಲ್ಲಿ ಮತ್ತೆ ಮೂವರಲ್ಲಿ ಡೆಲ್ಟಾ ಪ್ಲಸ್ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿದೆ.
ಕೊರಿನಾ ಎರಡನೇ ಅಲೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಇದರಿಂದಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುವ ಮುನ್ನವೇ ಮಾರಕ ಡೆಲ್ಟಾ ಪ್ಲಸ್ ರಾಜ್ಯಕ್ಕೆ ಕಾಲಿಟ್ಟಿದೆ. ಮೈಸೂರಿನಲ್ಲಿ ನಿನ್ನೆ ಯುವಕನೋರ್ವನಿಗೆ ಡೆಲ್ಟಾ ಪ್ಲಸ್ ಸೋಂಕು ಇರುವುದು ದೃಢಪಟ್ಟಿತ್ತು. ಇದೀಗ ಮತ್ತೆ ಮೂವರಿಗೆ ಡೆಲ್ಟಾ ಪ್ಲಸ್ ಇರೋದು ದೃಢಪಟ್ಟಿರುವ ಕುರಿತು ನಿಮ್ಹಾನ್ಸ್ ಲ್ಯಾಬ್ ದೃಢಪಡಿಸಿದೆ.
ಯುವಕನಿಗೆ ಡೆಲ್ಟಾ ಪ್ಲಸ್ ಸೋಂಕಿನ ಲಕ್ಷಣ ಪತ್ತೆಯಾದ ಬೆನ್ನಲ್ಲೇ ಸುಮಾರು 40 ಮಂದಿಯ ಸ್ವಾಬ್ ಗಳನ್ನು ಲ್ಯಾಬ್ ಗೆ ಕಳುಹಿಸಲಾ ಗಿತ್ತು. ಈ ಪೈಕಿ ಮೂವರಿಗೆ ಸೋಂಕು ಇರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಬೆಂಗಳೂರಿನ ಓರ್ವ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಮೈಸೂರಿನಲ್ಲಿ ಕೊರೊನಾ ಸೋಂಕಿನ ಜೊತೆಗೆ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಕೊರೊನಾ ಮೂರನೇ ಅಲೆಯ ನಡುವಲ್ಲೇ ಡೆಲ್ಟಾ ಪ್ಲಸ್ ಸೋಂಕು ಕಾಣಿಸಿಕೊಂಡಿರುವುದು ಆತಂಕವನ್ನು ಮೂಡಿಸಿದೆ.