ಚಿಕ್ಕಮಗಳೂರು : ಆನೆ ದಂತ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ನಾಲ್ವರು ಪೊಲೀಸರು ಬಂಧಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ವಸ್ತಾರೆಯಲ್ಲಿ ನಡೆದಿದೆ. ಬಂಧಿತರರನ್ನು ಶೃಂಗೇರಿ ಮೂಲದ ಶಬರೀಶ್, ಯೋಗೇಶ್, ವಿಜಯ್, ಮಧುಸೂದನ್ ಎಂದು ಗುರುತಿಸಲಾಗಿದೆ.

ಆನೆದಂತ ಚೋರರನ್ನು ಬಂಧಿಸುತ್ತಿದ್ದಂತೆಯೇ ಪೊಲೀಸರ ಮೇಲೆ ಪ್ರಭಾವಿಗಳು ಒತ್ತಡ ಹೇರಿದ್ದಾರೆ. ಮಾತ್ರವಲ್ಲ ದಂತಚೋರರು ಆರ್ಟಿಫೀಶಿಯಲ್ ದಂತ ಅಂತಾ ಡ್ರಾಮಾ ಮಾಡಿದ್ದಾರೆ. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಉಆಗಿದ್ದಾರೆ. ಆರೋಪಿಗಳಿಂದ ಆನೆ ದಂತ, ಸೆಲಾರಿಯೋ ಕಾರನ್ನು ವಶಪಡಿಸಿಕೊಂಡಿರೋ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.