ಟಿ20 ವಿಶ್ವಕಪ್ : ಶ್ರೀಲಂಕಾಗೆ ಸೋಲಿನ ರುಚಿ ತೋರಿಸಿದ ಭಾರತೀಯ ವನಿತೆಯರು

0

ಮೆಲ್ಬೋರ್ನ್ : ಟಿ20 ವಿಶ್ವಕಪ್ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು 7 ವಿಕೆಟ್ ಗಳ ಅಂತರದಿಂದ ಬಗ್ಗು ಬಡಿದ ಭಾರತೀಯ ವನಿತೆಯರು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡಕ್ಕೆ ದೀಪ್ತಿ ಶರ್ಮಾ ಆರಂಭಿಕ ಆಘಾತ ನೀಡಿದ್ರು. 2 ರನ್ ಗಳಿಸಿ ಆಡುತ್ತಿದ್ದ ಉಮೇಶಾ ತಿಮಾಶಿನಿ ಬಲಿ ಪಡೆದ್ರೆ 12 ರನ್ ಗಳಿಸಿದ್ದ ಹರ್ಷಿತಾ ಮಾದೇವಿಗೆ ರಾಜೇಶ್ವರಿ ಗಾಯಕ್ ವಾಡ್ ಬೌಲ್ಡ್ ಮಾಡಿದ್ರು. ನಾಯಕಿ ಚಾಮಿರಾ ಅತ್ತಪತ್ತು 33 ರನ್ ಗಳಿಸಿ ಆಡುತ್ತಿದ್ರೆ, ನಂತರ ಬಂದ ಬ್ಯಾಟ್ಸ್ ಮನ್ ಗಳು ನಿರಾಸೆ ಅನುಭವಿಸಿದ್ರು. ಕವೀಶ್ ದಿಲ್ಹಾರಿ 25 ರನ್ ಸಿಡಿಸಿ ತಂಡಕ್ಕೆ ಒಂದಿಷ್ಟು ಹೊತ್ತು ನೆರವಾದ್ರು. ರಾಧಾ ಯಾದವ್ ಹಾಗೂ ರಾಜೇಶ್ವರಿ ಗಾಯಕ್ ವಾಡ್ ಮಾರಕ ದಾಳಿಗೆ ಶ್ರೀಲಂಕಾ ಆಟಗಾರರು ತತ್ತರಿಸಿ ಹೋದ್ರು. ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 113 ರನ್ ಗಳಿಸಿತ್ತು, ಸುಲಭ ಮೊತ್ತವನ್ನು ಬೆನ್ನತ್ತಿದ ಭಾರತ ತಂಡಕ್ಕೆ ಆರಂಭಿಕರಾದ ಸ್ಮೃತಿ ಮಂದಾನ ಹಾಗೂ ಸೈಫಾಲಿ ವರ್ಮಾ ಭರ್ಜರಿ ಆರಂಭವೊದಗಿಸಿದ್ರು. ಸ್ಮೃತಿ ಮಂದಾನ 17 ರನ್ ಗಳಿಸಿ ಔಟಾದ್ರೆ ಶಿಫಾಲಿ ವರ್ಮಾ ಭರ್ಜರಿ 47 ರನ್ ಗಳಿಸಿದ್ರು. ಇನ್ನು ಹರ್ಮನ್ ಪ್ರಿತ್ ಕೌರ್ 15, ಜಾಮಿಯಾ ರೋಡ್ರಿಗಸ್ ಹಾಗೂ ದೀಪ್ತಿ ಶರ್ಮಾ ತಲಾ 15 ರನ್ ಗಳಿಸಿದ್ದಾರೆ. ಭಾರತ 14.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ. ಈ ಮೂಲಕ ಭಾರತ ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

ಸಂಕ್ಷಿಪ್ತ ಸ್ಕೋರ್ :
ಶ್ರೀಲಂಕಾ :
ಉಮೇಶಾ ತಹಿಮಾಶಿನಿ 2 (5), ಚಾಮಿರಾ ಅತ್ತಪತ್ತು 33 (24), ಹರ್ಷಿತಾ ಮಾದೇವಿ (12 (17), ಹನ್ಸಿಮಾ ಕರುಣಾರತ್ನೆ 7 (19), ಹಾಸಿನಿ ಪೆರೆರಾ 7 (9), ಶಶಿಕಲಾ ಸಿರಿವರ್ಧನೆ 13 (12), ನಿಲ್ಕಶಿ ಡಿಸಿಲ್ವಾ 8 (12), ಅನುಷ್ಕಾ ಸಂಜೀವಿನಿ 1 (3), ಕವಿಶಾ ದಿಲ್ಹಾರಿ 25 (16), ರಾಧಾ ಯಾದವ್ 23/4, ರಾಜೇಶ್ವರಿ ಗಾಯಕ್ ವಾಡ್ 18/2, ದೀಪ್ತಿ ಶರ್ಮಾ 16/1, ಶಿಖಾ ಪಾಂಡೆ 35/1, ಪೂನಂ ಯಾದವ್ 20/1
ಭಾರತ : ಶಿಫಾಲಿ ವರ್ಮಾ 47 (34), ಸ್ಮೃತಿ ಮಂದಾನ 17 (12), ಹರ್ಮನ್ ಪ್ರೀತ್ ಕೌರ್ 15 (14), ಜೆಮಿಯಾ ರೋಡ್ರಿಗಸ್ 15 (15), ದೀಪ್ತಿ ಶರ್ಮಾ 15 (13). ಉದೇಶ್ಕಾ ಪ್ರಬೋದಿನಿ 13/1, ಶಶಿಕಲಾ ಸಿರಿವರ್ಧನೆ 42/1

Leave A Reply

Your email address will not be published.