ಬೆಂಗಳೂರು : ಸ್ಯಾಂಡಲ್ ವುಡ್ ಹಿರಿಯ ನಟ, ಮಾಜಿ ಸಚಿವ, ಸೊರಬ ಕ್ಷೇತ್ರದ ಶಾಸಕರಾದ ಕುಮಾರ ಬಂಗಾರಪ್ಪ ಅವರ ಮಗಳ ನಿಶ್ಚಿತಾರ್ಥ ಸಮಾರಂಭದ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರ ಮೊಮ್ಮಗಳಾಗಿರುವ ಲಾವಣ್ಯ ಅವರು ಇತ್ತೀಚಿಗಷ್ಟೇ ವಿಕ್ರಮಾದಿತ್ಯರ ಜೊತೆಗೆ ಉಂಗುರ ಬದಲಾಯಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ನಡೆದ ಅದ್ದೂರಿ ನಿಶ್ಚಿತಾರ್ಥದ ಕೆಲ ಸಂತೋಷದ ಕ್ಷಣದ ಪೋಟೋಗಳನ್ನು ಕುಮಾರ ಬಂಗಾರಪ್ಪ ಅವರು ಪೋಸ್ಟ್ ಮಾಡಿದ್ದಾರೆ.

ಮುದ್ದಿನ ಮಗಳ ನಿಶ್ವಿತಾರ್ಥದ ಪೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲಿರುವಂತೆ ನವ ಜೋಡಿಗಳ ಮೇಲೆಯೂ ಇರಲಿ ಎಂದು ಬರೆದುಕೊಂಡಿದ್ದಾರೆ.

ಕುಮಾರ ಬಂಗಾರಪ್ಪ ಅವರು ಪೋಟೋವನ್ನು ಪೋಸ್ಟ್ ಮಾಡುತ್ತಿದ್ದಂತೆಯೇ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.
