ನವದೆಹಲಿ : ಪ್ರಧಾನ ಮಂತ್ರಿ ಉಜ್ವಲ ಯೋಜನೆ (Ujjwala Yojana 2.0): ದೇಶದಲ್ಲಿನ ಬಡವರು, ಮಧ್ಯಮ ವರ್ಗದವರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಇದೀಗ ದೇಶದ ಜನತೆಗೆ ಕೇಂದ್ರ ಸರ್ಕಾರ ಮತ್ತೊಂದು ಶುಭ ಸುದ್ದಿ ನೀಡಿದೆ. ಇನ್ನೂ 75 ಲಕ್ಷ ಜನರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲು ನಿರ್ಧರಿಸಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ನೀಡುವ ಉದ್ದೇಶಕ್ಕಾಗಿ 1650 ಕೋಟಿ ರೂ. ಇ-ಕೋರ್ಟ್ ಈ ಮೊತ್ತವನ್ನು 2ನೇ ಹಂತಕ್ಕೆ ಖರ್ಚು ಮಾಡಿದೆ. ಈ ಬಗ್ಗೆ ಕೇಂದ್ರ ಕೆಲ ದಿನಗಳ ಹಿಂದೆ ಘೋಷಣೆ ಮಾಡಿತ್ತು.

ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸುವ ಯೋಜನೆಯ ಕುರಿತು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದು ಮೂರು ವರ್ಷಗಳವರೆಗೆ ಇರುತ್ತದೆ. ಅಂದರೆ 2023-24 ರಿಂದ 2025-26 ರವರೆಗೆ 75 ಲಕ್ಷ ಹೊಸ ಗ್ಯಾಸ್ ಸಂಪರ್ಕಗಳನ್ನು ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಬಹಿರಂಗಪಡಿಸಿದ್ದಾರೆ.
ಉಜ್ವಲ ಯೋಜನೆ 2.O ಅಂಗವಾಗಿ ಫಲಾನುಭವಿಗಳಿಗೆ ಮೊದಲ ರೀಫಿಲ್ ಮತ್ತು ಸ್ಟವ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಉಜ್ವಲ ಯೋಜನೆಯಡಿ 14.2 ಕೆಜಿ ಗ್ಯಾಸ್ ಸಿಲಿಂಡರ್ ಮೇಲೆ ರೂ.200 ಸಬ್ಸಿಡಿ ಲಭ್ಯ ಇರಲಿದೆ.
ಇದನ್ನೂ ಓದಿ : ಮದುವೆಯಾದ ಎಲ್ಲಾ ದಂಪತಿಗಳಿಗೆ ಸರಕಾರ ಕೊಡುತ್ತೆ 10 ಸಾವಿರ ರೂ. : ಈ ಯೋಜನೆ ನಿಮಗೆ ಗೊತ್ತಾ ?
ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 200 ರೂ. ಹಾಗೂ ಈ ಉಜ್ವಲ ಫಲಾನುಭವಿಗಳಿಗೆ ಸಹಾಯಧನ 400 ರೂ. ಸಿಗಲಿದೆ. ವರ್ಷಂಪ್ರತಿ 12 ಗ್ಯಾಸ್ ಸಿಲಿಂಡರ್‌ಗಳನ್ನು ಉಜ್ವಲ ಯೋಜನೆಯಡಿ ಪಡೆಯಬಹುದಾಗಿದೆ. ಹೊಸ ಸಂಪರ್ಕದ ಮೂಲಕ ಉಜ್ವಲ ಯೋಜನೆಯ ಫಲಾನುಭವಿಗಳ ಸಂಖ್ಯೆ 10.35 ಕೋಟಿ ತಲುಪಲಿದೆ.

ಆದರೆ ಭಾರತದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗುತ್ತಿದ್ದರೂ ಕೂಡ ಇನ್ನೂ ಹಲವು ಕುಟುಂಬಗಳು ಗ್ಯಾಸ್ ಸಿಲಿಂಡರ್ ಯೋಜನೆಯಿಂದ ವಂಚಿತವಾಗಿವೆ. ಪ್ರತಿ 14.2 ಕೆಜಿ ಗ್ಯಾಸ್ ಸಿಲಿಂಡರ್ ಸಂಪರ್ಕಕ್ಕೆ ಕೇಂದ್ರಕ್ಕೆ 2200 ರೂ. ಅಥವಾ 5ಕೆಜಿ ಸಿಂಗಲ್ ಬಾಟಲ್ ಸಂಪರ್ಕಕ್ಕೆ ರೂ. 1300 ತೆಗೆದುಕೊಳ್ಳಲಾಗುತ್ತದೆ.
ಇದನ್ನೂ ಓದಿ : ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್ : ಮಾರುಕಟ್ಟೆಯಲ್ಲಿ ಬಾರೀ ಇಳಿಕೆ ಕಂಡ ಬಂಗಾರದ ಬೆಲೆ
ದೇಶದ ಎಲ್ಲಾ ಗ್ರಾಮೀಣ ಮತ್ತು ಹಿಂದುಳಿದ ಸಮುದಾಯಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಉಜ್ವಲ ಯೋಜನೆ ಆರಂಭಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಮೊದಲು ಮೇ 1, 2016 ರಂದು ಉತ್ತರ ಪ್ರದೇಶದಲ್ಲಿ ಆರಂಭಿಸಿದ್ದಾರೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ : ಅರ್ಜಿಸಲ್ಲಿಸಲು ಅರ್ಹತೆ ಏನು ?
ಇನ್ನು ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಮಹಿಳೆಯರ ಹೆಸರಿನಲ್ಲಿ ಮಾತ್ರವೇ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.
ಜೊತೆಗೆ ಕುಟುಂಬದ ವಾರ್ಷಿಕ ಆದಾಯ ರೂ. ಒಂದು ಲಕ್ಷಕ್ಕಿಂತ ಕಡಿಮೆ ಇರಬೇಕು. ನಿಮ್ಮ ಕುಟುಂಬವು ಮತ್ತೊಂದು LPG ಸಂಪರ್ಕವನ್ನು ಹೊಂದಿರಬಾರದು. ಇದಕ್ಕಾಗಿ ಅರ್ಜಿದಾರರ ಪಡಿತರ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ಕುಟುಂಬದ ಮುಖ್ಯಸ್ಥರ ಎಲ್ಲ ಆಧಾರ್ ಕಾರ್ಡ್ ಗಳು ಅಗತ್ಯವಾಗಿವೆ. ಬ್ಯಾಂಕ್ ಖಾತೆ ಹೊಂದಿರಬೇಕು.
Free LPG connection Good news for poor and middle class free gas for 75 lakh families