ಸ್ಯಾಂಡಲ್ ವುಡ್ ನಲ್ಲಿ ಈಗ ಮುದ್ದು ಮುದ್ದು ಮಕ್ಕಳದೇ ಸುದ್ದಿ. ಒಂದೆಡೆ ರಾಕಿಂಗ್ ಸ್ಟಾರ್ ಯಶ್ ಮಕ್ಕಳ ವಿಡಿಯೋ,ಪೋಟೋ ಸದ್ದು ಮಾಡ್ತಿದ್ದರೇ ಇನ್ನೊಂದೆಡೆ ಜ್ಯೂನಿಯರ್ ಚಿರು ಪೋಟೋಸ್ ಪ್ರತಿನಿತ್ಯ ಸುದ್ದಿಯಾಗುತ್ತೆ. ಈಗಾಗಲೇ ಸ್ಯಾಂಡಲ್ ವುಡ್ ಮಂದಿಯ ಪ್ರೀತಿ ಗಳಿಸಿರುವ ಜ್ಯೂನಿಯರ್ ಚಿರುಗೆ ಈಗ ಮತ್ತೊಂದು ಆಕರ್ಷಕ ನಿಕ್‌ನೇಮ್ ಸಿಕ್ಕಿದೆ.

ಪತಿ ಅಗಲಿಕೆಯನ್ನು ಮುದ್ದು ಮಗನ ಮುಖ ನೋಡಿ ಮರೆಯುವ ಪ್ರಯತ್ನ ಮಾಡ್ತಿರೋ ನಟಿ ಹಾಗೂ ನ್ಯೂ ಮಮ್ಮಿ ಮೇಘನಾ ರಾಜ್ ಆಗಾಗ ಮಗನ ಸ್ಪೆಶಲ್ ಪೋಟೋಸ್ ಹಂಚಿಕೊಂಡು ಖುಷಿ ಪಡ್ತಾರೆ.

ಮೊನ್ನೆಯಷ್ಟೇ ಇದು ಮಿರಾಕಲ್ ನ ಸಮಯ ಎಂಬ ಕ್ಯಾಪ್ಸನ್ ಜೊತೆ ಮೇಘನಾ ರಾಜ್ ತಮ್ಮ ಮಗ ತಮ್ಮ ಬೆರಳನ್ನು ಗಟ್ಟಿಯಾಗಿ ಹಿಡಿದ ಪೋಟೋ ಹಂಚಿಕೊಂಡಿದ್ದರು.

ಈ ಪೋಟೋಗೆ ಸಾವಿರಾರು ಅಭಿಮಾನಿಗಳು ಕಮೆಂಟ್ ಮಾಡಿದ್ದು, ಕೆಲವರು ಮಗುವಿನ ಜೊತೆ ಸುಖವಾಗಿರಿ ಎಂದು ಹರಿಸಿದ್ದರು.

ಇನ್ನು ಮೇಘನಾ ಹಂಚಿಕೊಂಡ ಈ ಹೃದಯಸ್ಪರ್ಶಿ ಪೋಟೋವನ್ನು ಮೇಘನಾ ಪ್ರೀತಿಯ ಸ್ನೇಹಿತೆ ಹಾಗೂ ನಟಿ ನಜ್ರಿಯಾ ನಾಜಿಮ್ ಶೇರ್ ಮಾಡಿಕೊಂಡಿದ್ದು ಮುದ್ದಾದ ಹಾಗೂ ಪ್ರೀತಿಯ ನಿಕ್ ನೇಮ್ ವೊಂದನ್ನು ಜ್ಯೂನಿಯರ್ ಚಿರುಗೆ ನೀಡಿದ್ದಾರೆ.

ಮೇಘನಾ ಶೇರ್ ಮಾಡಿರುವ ಪೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ನಜ್ರಿಯಾ ನಾಜಿಮ್, My lil Chumbaakk ಎಂದು ಕ್ಯಾಪ್ಸನ್ ನೀಡಿದ್ದಾರೆ.

ಅಲ್ಲದೇ ಹಾರ್ಟ್ ಹಾಗೂ ಲವ್ ಇಮೋಜಿಗಳನ್ನು ಹಾಕಿ ಶೇರ್‌ಮಾಡಿಕೊಂಡಿದ್ದಾರೆ. ನಜ್ರಿಯಾ ನಾಜಿಮ್ ಕೊಟ್ಟಿರುವ ಈ ನಿಕ್ ನೇಮ್ ಎರಡನೆಯದ್ದಾಗಿದ್ದು ಈಗಾಗಲೇ ಜ್ಯೂನಿಯರ್ ಚಿರು ಗೆ ಅವರ ಅಜ್ಜ ಸುಂದರ ರಾಜ್ ಚಿಂಟು ಎಂದು ನಿಕ್‌ನೇಮ್ ಇಟ್ಟಿದ್ದಾರಂತೆ.

ನಜ್ರಿಯಾ ನಜೀಮ್ ಫೇಮಸ್ ಮಲೆಯಾಳಂ ಹಾಗೂ ತಮಿಳು ನಟಿಯಾಗಿದ್ದು ಆಕೆ ಆಂಕ್ಯರಿಂಗ್ ಮೂಲಕ ತಮ್ಮಕೆರಿಯರ್ ಆರಂಭಿಸಿದ್ದಾರೆ.

ಮೇಘನಾ ಹಾಗೂ ನಜ್ರಿಯಾ ನಡುವೆ ಹಲವು ವರ್ಷಗಳ ಸ್ನೇಹವಿದ್ದು ಸಾಕಷ್ಟು ಭಾರಿ ಮೇಘನಾ ನಿವಾಸಕ್ಕೆ ನಜ್ರಿಯಾ ಭೇಟಿ ನೀಡಿದ್ದು ಮೇಘನಾ ಹೆರಿಗೆ ನಂತರವೂ ಮೇಘನಾ ಭೇಟಿಗೆ ಆಗಮಿಸಿದ್ದರು.