ಕಠಿಣವಾದ ನೈಟ್ ಕರ್ಪ್ಯೂ…! ಅಗತ್ಯವಿದ್ದೆಡೆ ಲಾಕ್ ಡೌನ್…!!

ಬೆಂಗಳೂರು: ರಾಜ್ಯದಲ್ಲಿ ಬ್ರಿಟನ್ ಕೊರೋನಾ ವೈರಸ್ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಜಿಲ್ಲೆಗಳಲ್ಲಿ ಲಾಕ್ ಡೌನ್ ಹಾಗೂ ನೈಟ್ ಕರ್ಪ್ಯೂ ಜಾರಿಯ ಮುನ್ಸೂಚನೆ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ನಗರದಲ್ಲಿ ಸದ್ಯ ಮೂರು ಬ್ರಿಟನ್ ಮಾದರಿಯ ಕರೋನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಆದರೆ ವೇಗವಾಗಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.

ಹೀಗಾಗಿ ಬಿಬಿಎಂಪಿ ಕಠಿಣ ನಿಯಮ ರೂಪಿಸುವಂತಿದೆ. ಇನ್ನು ಕರೋನಾ ಹರಡುವಿಕೆಯನ್ನು ತಪ್ಪಿಸಲು ರಾಜ್ಯದಲ್ಲಿ ಶಿಸ್ತು ಬದ್ಧವಾದ ನೈಟ್ ಕರ್ಪ್ಯೂ ಜಾರಿ ಅವಶ್ಯಕತೆ ಇದೆ.

ನೈಟ್ ಕರ್ಪ್ಯೂ ಜಾರಿ ಕೇವಲ ಸರ್ಕಾರದ ಕೆಲಸ ಮಾತ್ರವಲ್ಲ. ಜನರಿಗೂ ಜವಾಬ್ದಾರಿ ಇದೆ.‌ಜನರು ಇದಕ್ಕೆ ಸಹಕರಿಸಬೇಕು ಎಂದಿದ್ದಾರೆ.

ಸಧ್ಯ ಸಂಪೂರ್ಣ ರಾಜ್ಯವನ್ನು ಲಾಕ್ ಡೌನ್ ಮಾಡುವ ಅಗತ್ಯವಿಲ್ಲ. ಪ್ರಕರಣಗಳ ಸಂಖ್ಯೆ ಆಧರಿಸಿ ಅಗತ್ಯ ಬಿದ್ದರೇ ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲು ಅವಕಾಶ ಇದೆ.ಸಿಎಂ ಜೊತೆ ಚರ್ಚಿಸಿದ ಬಳಿಕ ಈ ನೈಟ್ ಕರ್ಪ್ಯೂ ಹಾಗೂ ಲಾಕ್ ಡೌನ್ ವಿಚಾರಕ್ಕೆ ಸ್ಪಷ್ಟತೆ ಸಿಗಲಿದೆ ಎಂದಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಗೆ ಕಳೆದ ‌ಒಂದು ತಿಂಗಳಿನಲ್ಲಿ ಸಾವಿರಾರು ಜನರು ಬ್ರಿಟನ್,ಇಂಗ್ಲೆಂಡ್ ನಿಂದ ಹಿಂತಿರುಗಿದ್ದು ರಾಜ್ಯದಲ್ಲೂ ಮತ್ತೊಮ್ಮೆ ಬ್ರಿಟನ್ ವೈರಸ್ ದಾಳಿ ಜೋರಾಗುವ ಸಾಧ್ಯತೆ ಇರೋದರಿಂದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಒತ್ತಡ ಹೆಚ್ಚಿದೆ.

ಇನ್ನೊಂದೆಡೆ ಸರ್ಕಾರವೇ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ವಿಚಾರದಲ್ಲಿ ಗೊಂದಲದಲ್ಲಿದ್ದು ಒಬ್ಬ ಸಚಿವರು ನೈಟ್ ಕರ್ಪ್ಯೂ ಇದೇ ಎಂದ್ರೇ ಇನ್ನೊಬ್ಬ ಸಚಿವರು ಕರ್ಪ್ಯೂ ಇಲ್ಲ ಎನ್ನುತ್ತಿದ್ದು, ಸಿಎಂ ಘೋಷಣೆ ಬಳಿಕ ವಿಚಾರ ಸ್ಪಷ್ಟವಾಗಲಿದೆ.

Comments are closed.