ತುಪ್ಪ ತಿಂದರೆ ಕೊಬ್ಬು ಹೆಚ್ಚಾಗಿ ಬೊಜ್ಜು ಬೆಳೆಯುತ್ತದೆ ಎಂದು ಅದರ ಸೇವನೆಯನ್ನೇ ಕೈಬಿಟ್ಟಿದ್ದೀರಾ ? ಹಾಗಾದರೆ ನಿಮ್ಮ ದೇಹ ಅತ್ಯಾವಶ್ಯಕ ಪೋಷಣೆಯಿಂದ ದೂರವಿದೆ ಎಂದರ್ಥ.

ಮನೋಸ್ಥೈರ್ಯ, ಬುದ್ಧಿಶಕ್ತಿಯನ್ನು ಹೆಚ್ಚಿಸುವ ಇದರ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ. ಉತ್ತಮ ಸಂತಾನ, ದೃಷ್ಟಿ, ಸೌಂದರ್ಯ ಲಭ್ಯವಾಗುತ್ತದೆ. ನಮ್ಮ ಮೆದುಳಿನ ಪೋಷಣೆಗೆ ತುಪ್ಪ ಅತ್ಯಗತ್ಯ.
ಇದನ್ನೂ ಓದಿ: ನೆಲ್ಲಿಕಾಯಿ ತಿನ್ನಿ ಕೊರೊನಾದಿಂದ ದೂರವಿರಿ ! ಹಸಿರು ಹೊನ್ನಿನ ಮಹತ್ವ ನಿಮಗೆ ಗೊತ್ತಾ?

ಆಸಿಡಿಟಿ ಸಮಸ್ಯೆಯನ್ನು ತುಪ್ಪ ಪರಿಹರಿಸುತ್ತದೆ. ರಕ್ತ, ಮಾಂಸ ಖಂಡಗಳು, ಮೂಳೆಗಳ ಬೆಳವಣಿಗೆಗೆ ನೆರವಾಗುತ್ತದೆ. ಮುಖಕ್ಕೆ ಇತರ ಕ್ರೀಮ್ ಹಚ್ಚುವ ಬದಲು ನಿತ್ಯ ತುಪ್ಪವನ್ನು ಲೇಪಿಸುವುದರಿಂದ ಮೊಡವೆ ಸಮಸ್ಯೆ ದೂರವಾಗುತ್ತದೆ. ಕಲೆಗಳು ಮಾಯವಾಗುತ್ತದೆ.
ಇದನ್ನೂ ಓದಿ: ದಿನಕ್ಕೆರಡು ಏಲಕ್ಕಿ ತಿಂದ್ರೆ ಲಾಭವೇನು ಗೊತ್ತಾ ?

ಊಟದ ಆರಂಭದಲ್ಲಿ ಇದನ್ನು ಸೇವಿಸಬೇಕು, ಆಹಾರದೊಂದಿಗೆ ತಿನ್ನಬೇಕು. ಪಿತ್ತ, ಅಜೀರ್ಣ, ವಾಂತಿ ಬೇಧಿ ಸಮಸ್ಯೆಯಿದ್ದರೆ ವೈದ್ಯರ ಸಲಹೆ ಪಡೆದೇ ಸೇವಿಸಿ.

(Ghee Benefits)