ನವದೆಹಲಿ : ಕೇಂದ್ರ ಸರ್ಕಾರ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸಹಾಯಧನವನ್ನ ನೀಡ್ತಿದ್ದು, ನೀವು ಎಲ್‌ಪಿಜಿ ಗ್ಯಾಸ್ ಕಾಯ್ದಿರಿಸಿದಾಗ ಮತ್ತು ಅದನ್ನ ಪಾವತಿಸುವಾಗ ಈ ಸಬ್ಸಿಡಿ ಮೊತ್ತ ನಿಮ್ಮ ಬ್ಯಾಂಕ್ ಖಾತೆಗೆ ಬಂದು ಸೇರುತ್ತೆ.
ಹೌದು, ಕೇಂದ್ರವು ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುತ್ತೆ ಅನ್ನೋದು ಗೊತ್ತಿರುವ ವಿಚಾರವೇ ಅಲ್ವಾ? ನೀವು ಎಲ್‌ಪಿಜಿ ಗ್ಯಾಸ್ ಕಾಯ್ದಿರಿಸಿ ಅದನ್ನ ಪಾವತಿಸಿದಾಗ ಈ ಸಬ್ಸಿಡಿ ಮೊತ್ತ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತೆ. ಆದ್ರೆ, ಸಬ್ಸಿಡಿ ಇಲ್ಲದೆ ಎಲ್ಪಿಜಿ ಸಿಲಿಂಡರ್ʼಗಳ ಮೇಲೆ ರಿಯಾಯಿತಿ ಪಡೆಯಬೋದು ಅನ್ನೋದು ನಿಮ್ಗೆ ಗೊತ್ತಾ?

ಸಬ್ಸಿಡಿ ರಹಿತ ಸಿಲಿಂಡರ್‌ಗಳಿಗೆ ಸರ್ಕಾರ ಸಬ್ಸಿಡಿ ನೀಡದಿದ್ರು, ತೈಲ ಕಂಪನಿಗಳಾದ ಹಿಂದೂಸ್ತಾನ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಭಾರತ್ ಪೆಟ್ರೋಲಿಯಂ ಅಂತಹ ಗ್ರಾಹಕರಿಗೆ ಆನ್‌ಲೈನ್ ಪಾವತಿಗಳಿಗೆ ರಿಯಾಯಿತಿ ನೀಡ್ತೀವೆ.
ಸರ್ಕಾರದ ಡಿಜಿಟಲ್ ಪಾವತಿ ಪಾವತಿ ಅಭಿಯಾನವನ್ನ ಉತ್ತೇಜಿಸಲು ತೈಲ ಕಂಪನಿಗಳು ಈ ವಿನಾಯಿತಿ ನೀಡುತ್ತಿವೆ. ಅಂದ್ಹಾಗೆ, ತೈಲ ಕಂಪನಿಗಳು ಗ್ರಾಹಕರಿಗೆ ಈ ರಿಯಾಯಿತಿಗಳನ್ನ ಕ್ಯಾಶ್‌ಬ್ಯಾಕ್, ತ್ವರಿತ ರಿಯಾಯಿತಿ, ಕೂಪನ್ ಇತ್ಯಾದಿಗಳಲ್ಲಿ ನೀಡುತ್ವೆ ಅನ್ನೋದು ಗಮನಾರ್ಹ.
ನೀವು ರಿಯಾಯತಿ ಪಡೆಯಬೇಕು ಅಂದ್ರೆ, ಎಲ್ಪಿಜಿ ಸಿಲಿಂಡರ್ ಬುಕ್ ಮಾಡಿದ್ಮೇಲೆ ಡೆಲಿವರಿ ಬಾಯ್‌ಗಳಿಗೆ ಹಣ ಪಾವತಿಸಬೇಡಿ. ಅಂದ್ರೆ, ಹೆಚ್ಚಿನ ಜನರು ಸಿಲಿಂಡರ್‌ಗಳನ್ನು ತಲುಪಿಸಲು ತಮ್ಮ ಮನೆಗಳಿಗೆ ಬರುವ ಡೆಲಿವರಿ ಬಾಯ್‌ಗಳಿಗೆ ಹಣವನ್ನ ನೀಡಲು ಬಯಸುತ್ತಾರೆ. ಆದ್ರೆ, ನೀವು ರಿಯಾಯಿತಿಯ ಲಾಭವನ್ನ ಪಡೆಯಲು ಬಯಸಿದರೆ ನೀವು ಯಾವಾಗ್ಲೂ ಡಿಜಿಟಲ್ ಪಾವತಿಯನ್ನ ಆರಿಸಿಕೊಳ್ಳಿ.
ಗ್ಯಾಸ್ ಸಿಲಿಂಡರ್ ಕಾಯ್ದಿರಿಸಿದ ನಂತರ, ನೀವು ಜನಪ್ರಿಯ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್‌ಗಳಾದ ಮೊಬೈಲ್ ಅಪ್ಲಿಕೇಶನ್, ಪೇಟಿಎಂ, ಫೋನ್ ಪೇ, ಯುಪಿಐ, ಭೀಮಾ ಆಪ್, ಗೂಗಲ್ ಪೇ, ಮೊಬಿಕ್ವಿಕ್, ಫ್ರೀ-ಚಾರ್ಜ್ ಇತ್ಯಾದಿಗಳ ಮೂಲಕ ಪಾವತಿಸಬಹುದು. ಇದು ನಿಮಗೆ ರಿಯಾಯಿತಿಯ ಲಾಭವನ್ನ ನೀಡುತ್ತೆ. ಈ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ನೀವು ಮೊದಲು ಸಿಲಿಂಡರ್ʼನ್ನ ಕಾಯ್ದಿರಿಸಿ ಪಾವತಿಸಿದಾಗ, ನೀವು ಉತ್ತಮ ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು. ಹೌದು, Paytm ಕೆಲವೊಮ್ಮೆ ತನ್ನ ಗ್ರಾಹಕರಿಗೆ 500 ರೂ.ಗಳ ಕ್ಯಾಶ್‌ಬ್ಯಾಕ್ ನೀಡಿದ ಉದಾಹರಣೆಯೂ ಇದೆ.
ಆನ್‌ಲೈನ್ ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಮತ್ತು ಎಲೆಕ್ಟ್ರಾನಿಕ್ಸ್ ವ್ಯಾಲೆಟ್‌ಗಳ ಮೂಲಕ ಪಾವತಿಸುವ ಮೂಲಕ ಗ್ರಾಹಕರು ರಿಯಾಯಿತಿಯನ್ನ ಪಡೆಯಬಹುದು. ಆನ್‌ಲೈನ್ ಗ್ಯಾಸ್ ಬುಕಿಂಗ್‌ನ ಉತ್ತಮ ವಿಷಯವೆಂದ್ರೆ, ನೀವು ಯಾವುದೇ ಸ್ಥಳದಿಂದ ಪಾವತಿಸಬೋದು. ಆದ್ದರಿಂದ ಸಿಲಿಂಡರ್ ವಿತರಣೆಯ ಸಮಯದಲ್ಲಿ ಮನೆಯಲ್ಲಿ ಹಣ ಇಟ್ಟುಕೊಳ್ಳುವ ತೊಂದರೆಯೂ ತಪ್ಪುತ್ತೆ.