ಭಾನುವಾರ, ಏಪ್ರಿಲ್ 27, 2025
HomeBreakingRashmika mandanna: ಗುಡ್ ಬೈ ಪಾರ್ಟಿಯಲ್ಲಿ ಕಿರಿಕ್ ಬೆಡಗಿ…! ರಶ್ಮಿಕಾ ಸಖತ್ ಡ್ಯಾನ್ಸ್ ಪೋಟೋ ವೈರಲ್…!!

Rashmika mandanna: ಗುಡ್ ಬೈ ಪಾರ್ಟಿಯಲ್ಲಿ ಕಿರಿಕ್ ಬೆಡಗಿ…! ರಶ್ಮಿಕಾ ಸಖತ್ ಡ್ಯಾನ್ಸ್ ಪೋಟೋ ವೈರಲ್…!!

- Advertisement -

ಕೊಡಗಿನ ಕುವರಿ ರಶ್ಮಿಕಾ ಮಾಯಾನಗರಿ ಮುಂಬೈನಲ್ಲೂ ತಮ್ಮ ಸಿನಿಜರ್ನಿ ಶುಭಾರಂಭ ಮಾಡಿದ್ದು, ಮೊದಲ ಚಿತ್ರದಲ್ಲೇ ಬಿಗ್ ಬಿ ಮಗಳಾಗಿ ನಟಿಸುವ ಮೂಲಕ ಒಳ್ಳೆಯ ಅವಕಾಶ ಪಡೆದಿದ್ದಾರೆ. ಇಷ್ಟೇ ಅಲ್ಲ ಸಿನಿಮಾ ತಂಡದ ಪಾರ್ಟಿಯಲ್ಲಿ ಪಾಲ್ಗೊಂಡ ರಶ್ಮಿಕಾ ಸಖತ್ ಹೆಜ್ಜೆ ಹಾಕಿ ಮನಸೆಳೆದಿದ್ದಾರೆ.

ಕಳೆದ ಕೆಲದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣರದ್ದೇ ಸುದ್ದಿ. ಮುಂಬೈನಲ್ಲಿ ಪೋಟೋಗೆ ಸ್ಟೈಲಿಸ್  ಪೋಸ್ ನೀಡಿದ ರಶ್ಮಿಕಾ  ಈಗ ಪಾರ್ಟಿಯಲ್ಲಿ ಮಸ್ತ ಸ್ಟೆಪ್ ಹಾಕಿ ಕುಣಿದು  ಸುದ್ದಿಯಾಗಿದ್ದಾರೆ.

ಬಾಲಿವುಡ್ ನಲ್ಲಿ ಸಖತ್ ಬ್ಯುಸಿಯಾಗಿರೋ ರಶ್ಮಿಕಾ, ಮುಂಬೈನಲ್ಲಿ ಲಾಕ್ ಡೌನ್ ತೆರವಾಗುತ್ತಿದ್ದಂತೆ ಮುಂಬೈಗೆ ಪ್ರಯಾಣಿಸಿದ್ದು, ಅಲ್ಲಿ ಫ್ಲ್ಯಾಟ್ ಕೂಡ ಖರೀದಿಸಿದ್ದಾರೆ. ಬಿಗ್ ಬಿ ಜೊತೆಗಿನ ಗುಡ್ ಬೈ ಸಿನಿಮಾದಲ್ಲಿ ನಟಿಸುತ್ತಲೇ ಮತ್ತೆರಡು ಚಿತ್ರಗಳಿಗೆ  ಸಹಿ ಮಾಡಿದ ರಶ್ಮಿಕಾ ಚಿತ್ರೀಕರಣದಲ್ಲಿ  ಬ್ಯುಸಿಯಾಗಿದ್ದಾರೆ.

ಈ ಮಧ್ಯೆ ಚಿತ್ರತಂಡದ ಜೊತೆ ನಡೆದ ಪಾರ್ಟಿಯಲ್ಲಿ ಸಖತ್ ಡ್ಯಾನ್ಸ್ ಮಾಡಿದ ರಶ್ಮಿಕಾ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟ ಪವೇಲ್ ರಶ್ಮಿಕಾ ಡ್ಯಾನ್ಸ್ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಗುಡ್ ಬೈ ಚಿತ್ರೀಕರಣ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರತಂಡ ಪಾರ್ಟಿ ಆಯೋಜಿಸಿದ್ದು, ಇದರಲ್ಲಿ ರಶ್ಮಿಕಾ ಮೈಮರೆತು ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಪಾರ್ಟಿಯಲ್ಲಿ ರಶ್ಮಿಕಾ ಮಾತ್ರವಲ್ಲ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಪಾಲ್ಗೊಂಡಿದ್ದರು ಎನ್ನಲಾಗಿದೆ.

ನಟ ಪವೇಲ್ ಪಾರ್ಟಿ ಪೋಟೋ ಹಂಚಿಕೊಂಡಿದ್ದು, ಬಿಗ್ ಬಿ ಡಿಜೆಯಾಗಿದ್ದರು ಎಂದಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಬಾಲಿವುಡ್ ನಲ್ಲೂ ಮೋಡಿ ಮಾಡಲಾರಂಭಿಸಿದ್ದಾರೆ.

RELATED ARTICLES

Most Popular