ಸೋಮವಾರ, ಏಪ್ರಿಲ್ 28, 2025
HomeBreakingLemon peel : ಉಪಯೋಗಿಸಿದ ಬಳಿಕ ಲಿಂಬೆ ಸಿಪ್ಪೆ ಎಸೆಯುತ್ತಿದ್ದೀರಾ? ಹಾಗಾದ್ರೇ ಈ ಸ್ಟೋರಿ ನೋಡಲೇ...

Lemon peel : ಉಪಯೋಗಿಸಿದ ಬಳಿಕ ಲಿಂಬೆ ಸಿಪ್ಪೆ ಎಸೆಯುತ್ತಿದ್ದೀರಾ? ಹಾಗಾದ್ರೇ ಈ ಸ್ಟೋರಿ ನೋಡಲೇ ಬೇಕು …!

- Advertisement -

ಲಿಂಬೆಹಣ್ಣನ್ನು ಉಪಯೋಗಿಸಿದ ಬಳಿಕ ಅದರ ಸಿಪ್ಪೆಯನ್ನು ಎಸೆಯುತ್ತಿದ್ದೀರಾ? ನಿಂಬೆಹಣ್ಣಿನ ಸಿಪ್ಪೆಯಿಂದಲೂ ಅನೇಕ ಪ್ರಯೋಜನಗಳಿವೆ ಲಿಂಬೆರಸವನ್ನು ಹಿಂಡಿದ ಬಳಿಕ ಸಿಪ್ಪೆಯನ್ನು ಹೆಚ್ಚಿನವರು ಎಸೆದುಬಿಡುತ್ತಾರೆ. ಲಿಂಬೆ ಹಣ್ಣಿನ ಸಿಪ್ಪೆಯಲ್ಲೂ ಅನೇಕ ಪೋಷಕಾಂಶಗಳಿದೆ ಎನ್ನುವುದನ್ನು ಮರೆಯಬೇಡಿ.ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಡಿ ಲಿಮೊನೈನ್ ಎಂಬ ಫ್ಲ್ಯಾವನೋಯ್ಡ್ ಅಂಶವಿದೆ. ವಿಟಮಿನ್ ಸಿ ಅಂಶವೂ ಕೂಡ ಲಿಂಬೆಯ ಹಣ್ಣಿನಲ್ಲಿ ಸಂಗ್ರಹಗೊಂಡಿದ್ದು ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸಾಬೀತಾಗಿದೆ.

ಬ್ಯಾಕ್ಟೀರಿಯಾದಿಂದ ಬರುವ ಯಾವುದೇ ಚರ್ಮ ಸಂಬಂಧಿತ ವ್ಯಾಧಿಗಳ ನಿವಾರಣೆ ನಿಂಬೆ ಹಣ್ಣು ಉಪಯುಕ್ತವಾಗಿದೆ. ದೇಹದ ಚರ್ಮ ಕೋಶಗಳಿಗೆ ಇದು ಹೊಸ ಚೇತನ ನೀಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಗೂ ಕೂಡ ಲಿಂಬೆ ಹಣ್ಣಿನ ಸಿಪ್ಪೆ ಉಪಯುಕ್ತ ವಾಗಿದೆ. ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಪೆಕ್ಟಿನ್ ಎಂಬ ನಾರಿನ ಅಂಶವಿರುತ್ತದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಲಿಂಬೆ ಹಣ್ಣಿನ ಸಿಪ್ಪೆಯ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತದೆ. ಲಿಂಬೆ ಹಣ್ಣಿನಲ್ಲಿ ಪೊಟ್ಯಾಸಿಯಂ ಮತ್ತು ಕ್ಯಾಲ್ಸಿಯಂ ಅಂಶ ಇರುವುದರಿಂದ ನಮ್ಮ ದೇಹದ ಮೂಳೆಗಳು ಬಲಿಷ್ಠವಾಗುತ್ತದೆ.

ಇದನ್ನೂ ಓದಿ: Egg : ದಿನಕ್ಕೊಂದು ಮೊಟ್ಟೆ ತಿನ್ನುತ್ತೀರಾ ? ಹಾಗಾದ್ರೆ ಈ ಸ್ಟೋರಿ ಓದಲೇ ಬೇಕು

ನಿಂಬೆಹಣ್ಣಿನ ಸಿಪ್ಪೆಯಲ್ಲಿ ಪೊಟಾಶಿಯಂ ಅಂಶ ಹೆಚ್ಚಾಗಿದೆ. ಇದು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡಿ, ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನೇರವಾಗುತ್ತದೆ. ನಿಂಬೆಹಣ್ಣಿನ ಸಿಪ್ಪೆಯನ್ನು ಸೇವಿಸಿದರೆ ಶೀತ, ಕೆಮ್ಮು, ಗಂಟಲು ನೋವಿನಂತಹ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ. ವಸಡಿನಲ್ಲಿ ರಕ್ತ ಸ್ರಾವ ಆಗುತ್ತಿದ್ದರೆ ಲಿಂಬೆ ಹಣ್ಣಿನ ಸಿಪ್ಪೆಯಿಂದ ಲಘುವಾಗಿ ಉಜ್ಜಿ. ಇದರಿಂದ ರಕ್ತಸ್ರಾವ
ನಿಲ್ಲುವುದಲ್ಲದೆ ಬಾಯಿಯ ದುರ್ಗoಧ ಕೂಡ ದೂರವಾಗುತ್ತದೆ.

ನಿಂಬೆ ಹಣ್ಣಿನ ಸಿಪ್ಪೆಯನ್ನು ಪುಡಿ ಮಾಡಿ. ನಂತರ ನಿಮ್ಮ ಸಲಾಡ್ ಅಥವಾ ಪಲ್ಯ, ಪದಾರ್ಥಗಳ ಮೇಲೆ ಅದನ್ನು ಸ್ವಲ್ಪ ಹಾಕಿಕೊಂಡು ಅಥವಾ ಮಿಕ್ಸ್ ಮಾಡಿಕೊಂಡು ಸೇವಿಸಬಹುದು. ನಿಂಬೆಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ನಂತರ ಅದನ್ನು ಪುಡಿ ಮಾಡಿ ಸಕ್ಕರೆ, ಜೇನು ತುಪ್ಪ, ಜ್ಯೂಸ್ ನೊಂದಿಗೆ ಮಿಕ್ಸ್ ಮಾಡಿ ಉಪಯೋಗಿಸಬಹುದು. ನಿಂಬೆ ಹಣ್ಣಿನ ರಸ ಮತ್ತು ನಿಂಬೆ ಹಣ್ಣಿನ ಸಿಪ್ಪೆಯನ್ನು ಮಿಕ್ಸ್ ಮಾಡಿ ಚೆನ್ನಾಗಿ ಅರೆದು ಲಿಮೋನೆಡ್ ತಯಾರಿಸುವುದರ ಮೂಲಕವೂ ಅದರಿಂದ ಇರುವ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನೂ ಓದಿ: ದಿನನಿತ್ಯ ಒಂದು ಚಮಚ ಜೇನುತುಪ್ಪ ಸೇವನೆಯಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ ?

(Are you throwing lemon peel after use? You have to watch this story)

RELATED ARTICLES

Most Popular