Benne Dhosa : ಬಾಯಲ್ಲಿ ನೀರೂರಿಸುತ್ತೆ ಸಾಂಪ್ರದಾಯಿಕ ದಾವಣಗೆರೆ ಬೆಣ್ಣೆ ದೋಸೆ

ಕರ್ನಾಟಕದ ದಾವಣಗೆರೆ ಮೂಲದ ಸಾಂಪ್ರದಾಯಿಕ ದೋಸೆ ಪಾಕವಿಧಾನವೇ ದಾವಣಗೆರೆ ಬೆಣ್ಣೆ ದೋಸೆ. ದೋಸಾ ಹಿಟ್ಟು ಹೆಚ್ಚುವರಿ ಮೃದುತ್ವಕ್ಕಾಗಿ ಅಕ್ಕಿ, ಉದ್ದಿನ ಬೇಳೆಯೊಂದಿಗೆ ತಯಾರಿಸಲಾಗುತ್ತದೆ. ದೋಸೆಯ ಮೇಲೆ ಬೆಣ್ಣೆಯೊಂದಿಗೆ ಮಸಾಲೆಯುಕ್ತ ಆಲೂಗೆಡ್ಡೆ ಖಾದ್ಯದೊಂದಿಗೆ ಬಡಿಸಲಾಗುತ್ತದೆ. ಇದರ ರುಚಿಗೆ ಮನಸೋಲದವರೇ ಇಲ್ಲಾ.

ದಾವಣಗೆರೆ ಬೆಣ್ಣೆ ದೋಸೆ ಬೇಕಾಗುವ ಸಾಮಾಗ್ರಿಗಳು: ಉದ್ದಿನಬೇಳೆ – 1 ಕಪ್, ಮೆಂತೆ ಬೀಜ – 2 ಚಮಚ, ದೋಸೆ ಅಕ್ಕಿ – 3 ಕಪ್, ದಪ್ಪ ಅವಲಕ್ಕಿ – ಅರ್ಧ ಕಪ್, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – 1 ಚಮಚ, ಬೆಣ್ಣೆ – ದೋಸೆ ಹುಯ್ಯಲು ಬೇಕಾದಷ್ಟು, ಹಸಿಮೆಣಸು – 2, ತೆಂಗಿನ ತುರಿ-ಅರ್ಧ ಚಮಚ, ಚಕ್ಕೆ ಚೂರು – 2, ಲವಂಗ – 2, ಶುಂಠಿ-ಅರ್ಧ ಚಮಚ, ಉಪ್ಪು – ರುಚಿಗೆ ತಕ್ಕಷ್ಟ.

ಇದನ್ನೂ ಓದಿ: Idli recipe: ಮೃದುವಾದ, ರುಚಿಯಾದ ತಟ್ಟೆ ಇಡ್ಲಿ ರೆಸಿಪಿ

ದೋಸೆ ಮಾಡುವ ವಿಧಾನ: ಉದ್ದನ್ನು ಒಂದು ಪಾತ್ರೆಯಲ್ಲಿ 4 ಗಂಟೆಗಳ ಕಾಲ ನೆನೆಸಿಡಿ. ಅಂತೆಯೇ ಇನ್ನೊಂದು ಪಾತ್ರೆಯಲ್ಲಿ ಅಕ್ಕಿ ಮತ್ತು ಮೆಂತೆ ಬೀಜವನ್ನು ಜೊತೆಗೆ ನೆನೆಸಿಟ್ಟುಕೊಳ್ಳಿ. ಅವಲಕ್ಕಿಯನ್ನು ರುಬ್ಬುವ 1 ಗಂಟೆ ಮುಂಚೆ ಪ್ರತ್ಯೇಕವಾಗಿ ನೆನೆಸಿಟ್ಟುಕೊಳ್ಳಿ. ನಂತರ ನೆನೆಸಿದ ಅಕ್ಕಿ – ಬೇಳೆ – ಅವಲಕ್ಕಿಯನ್ನು ಚೆನ್ನಾಗಿ ತೊಳೆದು, ನೀರನ್ನು ಬಸಿದುಕೊಳ್ಳಿ.

ಮೊದಲು ಉದ್ದನ್ನು ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ. ನಂತರ ಅಕ್ಕಿ, ಮೆಂತೆ ಬೀಜ ಮತ್ತು ಅವಲಕ್ಕಿಯನ್ನು ಜೊತೆಗೆ ನುಣ್ಣಗೆ ರುಬ್ಬಿ. ರುಬ್ಬಿದ ಹಿಟ್ಟುಗಳನ್ನು ಒಂದೇ ಪಾತ್ರೆಗೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಹಿಟ್ಟನ್ನು 10 ರಿಂದ 12 ಗಂಟೆಗಳ ತನಕ ಹುಳಿಯಾಗಲು ಬಿಡಿ.ಹುಳಿಯಾದ ಹಿಟ್ಟಿಗೆ ಉಪ್ಪು ಹಾಕಿ ಕಲಕಿದರೆ ದೋಸೆ ಹಿಟ್ಟು ರೆಡಿ.

ಇದನ್ನೂ ಓದಿ: Capsicum Bath Recipe : ಒಮ್ಮೆ ಆದ್ರೂ ಟ್ರೈ ಮಾಡಿ ʼಕ್ಯಾಪ್ಸಿಕಂ ಬಾತ್ʼ

ಕಾವಲಿಯನ್ನು ಚೆನ್ನಾಗಿ ಬಿಸಿ ಮಾಡಿ ಅದರ ಮೇಲೆ ಸ್ವಲ್ಪ ನೀರು ಚಿಮುಕಿಸಿ ಒಂದು ಶುಭ್ರ ಬಟ್ಟೆಯಿಂದ ಒರೆಸಿ ತೆಗೆಯಿರಿ.ಮಾಡಿಟ್ಟ ದೋಸೆ ಹಿಟ್ಟನ್ನು ಅಗಲವಾಗಿ ಹರಡಿ. ಪ್ರತಿ ಬಾರಿ ದೋಸೆ ಮಾಡುವ ಮುಂಚೆ ಹಿಟ್ಟನ್ನು ಚೆನ್ನಾಗಿ ಕಲಕಿಕೊಳ್ಳಬೇಕು. ಇಲ್ಲವಾದಲ್ಲಿ ಉದ್ದಿನ ಅಂಶ ಮೇಲ್ಗಡೆ ಉಳಿದು ಬಿಡುತ್ತದೆ. ದೋಸೆ ಹುಯ್ದ ಮೇಲೆ ಮೇಲ್ಗಡೆ ಸಾಕಷ್ಟು ಬೆಣ್ಣೆ ಹಾಕಿ. ಬೆಣ್ಣೆ ಹಾಕಿ ಮಾಡಿದ ದೋಸೆಯ ರುಚಿಯೇ ಅದ್ಭುತ. ದೋಸೆಯನ್ನು ಆಲೂಗಡ್ಡೆಯ ಪಲ್ಯ ಮತ್ತು ಚಟ್ನಿ ಜೊತೆ ಬಿಸಿ ಬಿಸಿಯಾಗಿ ತಿನ್ನಿ.

(Mouthwatering Traditional Davanagere Butter Dosa)

Comments are closed.