ಭಾನುವಾರ, ಏಪ್ರಿಲ್ 27, 2025
HomeBreakingಪ್ರತಿಯೊಂದು ಆಹಾರಕ್ಕೂ ಅಲಂಕಾರವಾಗಿ ಬಳಸುವ ಕೊತ್ತಂಬರಿ ಸೊಪ್ಪಿನ ಮಹತ್ವ

ಪ್ರತಿಯೊಂದು ಆಹಾರಕ್ಕೂ ಅಲಂಕಾರವಾಗಿ ಬಳಸುವ ಕೊತ್ತಂಬರಿ ಸೊಪ್ಪಿನ ಮಹತ್ವ

- Advertisement -

ಪ್ರತಿಯೊಂದು ಖಾದ್ಯಕ್ಕೂ ಅಲಂಕಾರವಾಗಿ ಬಳಸುವ ಧನಿಯಾ ಅಥವಾ ಕೊತ್ತಂಬರಿ ಸೊಪ್ಪಿನಲ್ಲಿ ಆರೋಗ್ಯ ಪ್ರಯೋಜನಗಳು ಬಹಳಷ್ಟಿವೆ. ಫ್ರೇಶ್‌ ಆದ ಕೊತ್ತಂಬರಿ ಸೊಪ್ಪು ಮೆಗ್ನೀಸಿಯಮ್, ವಿಟಮಿನ್ ಎ, ಬಿ, ಸಿ, ಕೆ, ರಂಜಕ, ಪೊಟ್ಯಾಸಿಯಮ್, ಸೋಡಿಯಂ ಮತ್ತು ಕ್ಯಾಲ್ಸಿಯಂನ ಸಮೃದ್ಧ ಮೂಲವಾಗಿದೆ. ಕೊತ್ತಂಬರಿ ಸೊಪ್ಪಿನಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣಲಕ್ಷಣಗಳ ಜೊತೆಗೆ ಸೋಂಕುಗಳ ಅಪಾಯವನ್ನು ದೂರವಿಡಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೊತ್ತಂಬರಿ ಸೊಪ್ಪು ಸಹಾಯ ಮಾಡುತ್ತದೆ.

ಹೃದಯ ರೋಗವನ್ನು ದೂರವಿಡುತ್ತದೆ : ಹೃದಯದ ಸಮಸ್ಯೆ ಎಂದರೆ ಅಧಿಕ ರಕ್ತದೊತ್ತಡ ಅಥವಾ ಹೆಚ್ಚಿನ ಕೊಲೆಸ್ಟ್ರಾಲ್ ಇತ್ತೀಚಿನ ದಿನದಲ್ಲಿ ಹೆಚ್ಚಿನ ಜನರನ್ನು ಕಾಡುತ್ತಿದೆ. ಕೊತ್ತಂಬರಿ ಸೊಪ್ಪು ಯುರಿಟಿಕ್ ನಂತೆ ವರ್ತಿಸುವ ಮೂಲಕ ಈ ಸಮಸ್ಯೆಯನ್ನು ದೂರ ಮಾಡುತ್ತದೆ. ಅಲ್ಲದೇ ಇದು ನಿಮ್ಮ ದೇಹದಿಂದ ಹೆಚ್ಚುವರಿ ಸೋಡಿಯಂ ಅನ್ನು ಹೊರಹಾಕುತ್ತದೆ.

ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತ : ಪುನೀತ್ ಸಾವಿನ ಬೆನ್ನಲ್ಲೇ ಹೃದಯ ತಪಾಸಣೆಗೆ ಮುಗಿಬಿದ್ದ ಬೆಂಗಳೂರು ಜನ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ಕೊತ್ತಂಬರಿಯಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ . ಟೆರ್ಪಿನೆನ್, ಕ್ವೆರ್ಸೆಟಿನ್ ಮತ್ತು ಟೊಕೊಫೆರಾಲ್ ಗಳಂತಹ ಸಂಯುಕ್ತಗಳು ಮುಕ್ತ ರಾಡಿಕಲ್ ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಸೋಂಕುಗಳ ಅಪಾಯವನ್ನು ದೂರವಿಡಲು ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕರುಳು ಮತ್ತು ಜೀರ್ಣಕ್ರಿಯೆಗೆ ಸಹಕಾರಿ : ಕೊತ್ತಂಬರಿ ಸೊಪ್ಪಿನಿಂದ ಉತ್ತಮ ಮತ್ತು ವೇಗವಾಗಿ ಜೀರ್ಣಕ್ರಿಯೆ ನಡೆಯುತ್ತದೆ. ಕೊತ್ತೊಂಬರಿ ಸೊಪ್ಪನ್ನು ಆಹಾದಲ್ಲಿ ಸೇರಿಸಿ ಸವಿಯುವುದರಿಂದ ಕರುಳಿನ ಸಮಸ್ಯೆ ಹಾಗೂ ಅಜೀರ್ಣದ ಸಮಸ್ಯೆ ದೂರವಾಗುತ್ತದೆ. ಅಲ್ಲದೇ ಕರುಳಿಗೆ ಸಂಭಂದಿಸಿದ ಸಮಸ್ಯೆಯೂ ಕೂಡ ದೂರವಾಗುತ್ತದೆ.

ಇದನ್ನೂ ಓದಿ: Pranayama : ಪ್ರಾಣಾಯಾಮದಿಂದ ಇದೆ ಹತ್ತಾರು ಪ್ರಯೋಜನ

(Importance of coriander leaves used as decoration for every food)

RELATED ARTICLES

Most Popular