ತಮಿಳು ನಾಡಿನ ಫೌಲ್ಟ್ರಿ ಕಂಪೆಯಲ್ಲಿ 300 ಕೋಟಿ ತೆರಿಗೆ ವಂಚನೆ

ದೆಹಲಿ : ಇತ್ತೀಚಿನ ದಿನಗಳಲ್ಲಿ ತೆರಿಗೆ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಐಟಿ ಅಧಿಕಾರಿಗಳು ಹಲವು ರಾಜ್ಯದ ಕಾರ್ಯಚರಣೆ ನಡೆಸುತ್ತಿರುವಾಗ ತಮಿಳುನಾಡಿನ ಮೂಲದ ಪೌಲ್ಟ್ರಿ ಕಂಪನಿ ಒಂದು 300 ಕೋಟಿ ತೆರಿಗೆ ವಂಚನೆ ಮಾಡಿರುವುದು ಪತ್ತೆಯಾಗಿದೆ. ಸೆಂಟ್ರಲ್‌ ಬೊರ್ಡ್‌ ಆಪ್‌ ಡೈರೆಕ್ಟ್‌ ಮಾಹಿತಿಯನ್ನು ನೀಡಿದೆ.

ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ 40 ಸ್ಥಳಗಳಲ್ಲಿ ಐಟಿ ತನ್ನ ಬಲೆ ಬೀಸಿದೆ. ಈ ದಾಳಿ ನಡೆದ ವೇಳೆ ಕಂಪನಿಯು ಅಧಿಕ ವೆಚ್ಚ ತೋರಿಸುವ ಮೂಲಕ ಮಾರಾಟ ಬೆಲೆಯನ್ನು ಕಡಿಮೆ ತೋರಿಸಿ 300 ಕೋಟಿ ತೆರಿಗೆ ವಂಚಿಸಿದೆ. ಈ ರೀತಿ ತೆರಿಗೆ ನೀಡದೇ ವಂಚಿಸಿದ ಹಣವನ್ನು ಸ್ಥಿರಾಸ್ತಿ ಖರೀದಿಸಲು ಬಳಸಿಕೊಳ್ಳಲಾಗಿದೆ.

ಇದನ್ನೂ ಓದಿ; Covid Certificate ನಿಂದ PM ನರೇಂದ್ರ ಮೋದಿ ಪೋಟೋ ತೆಗೆಯಲು ಬೇಡಿಕೆ ಇಟ್ಟವನಿಗೆ ತಿರುಗೇಟು ಕೊಟ್ಟ ಕೇರಳ ಹೈಕೋರ್ಟ್‌

ಈ ದಾಳಿ ನಡೆದ ಸಮಯದಲ್ಲಿ ಲೆಕ್ಕ ಇರದ 3.3 ಕೋಟಿ ರೂ ನಗದು ಕೂಡ ಪತ್ತೆಯಾಗಿದೆ. ಅಕ್ಟೋಬರ್‌ 27 ರಂದು ಐಟಿ ಅಧಿಕಾರಿಗಳು ಕುಕ್ಕುಟ ಉದ್ಯಮ ಖಾದ್ಯ ತೈಲ, ಪಶು ಆಹಾರ ವಲಯದಲ್ಲಿ ತೊಡಗಿಸಿಕೊಂಡಿರುವ ಎಸ್‌ ಕೆ ಎಂ ಗ್ರೂಪ್‌ ಆಫ್‌ ಕಂಪನಿಗಳ (SKM Group of companies) ಮೇಲೆ ದಾಳಿ ನಡೆಸಿ ಹಲವಾರು ದಾಕಲೆಯನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Dengue fever : ಹೆಚ್ಚುತ್ತಿದೆ ಡೆಂಗ್ಯೂ ಅಬ್ಬರ, ಕೇಂದ್ರದಿಂದ 9 ರಾಜ್ಯಗಳಿಗೆ ತಜ್ಞರ ತಂಡ ನಿಯೋಜನೆ

(300 crore tax evasion in Foultry Kampe, Tamil Nadu)

Comments are closed.