ಪ್ರಾಣ ಎಂಬುದರ ಅರ್ಥ ಗಾಳಿ, ಗಾಳಿಯನ್ನು ವಿವಿಧ ಆಯಾಮದಲ್ಲಿ ದೇಹದ ಒಳಗೆ ತೆಗೆದುಕೊಳ್ಳವುದು ಹಾಗೂ ಹೊರಗೆ ಬಿಡುವುದನ್ನು ಪ್ರಾಣಾಯಾಮ ಎಂದು ಕರೆಯಲಾಗುತದೆ. ಉಸಿರಾಟದಲ್ಲಿ ಬಹಳಷ್ಟು ವಿಧಗಳಿವೆ. ಉಸಿರಾಟ ಯಾವಾಗಲು ನಿದಾನವಾಗಿ, ಸರಾಗವಾಗಿ, ಸುಲಲಿತವಾಗಿ ಇದ್ದರೇ ಮಾತ್ರ ನಮ್ಮ ಆಯಸ್ಸು ವೃದ್ದಿಸುತ್ತದೆ.

ಸಾಮಾನ್ಯವಾಗಿ ನಾವು ಉಸಿರಾಡುವಾಗ ದೇಹಕ್ಕೆ ಸಿಗುವ ಆಕ್ಸಿಜನ್ 10 ಪಟ್ಟು ಜಾಸಿ ಆಕ್ಸಿಜನ್ ಪ್ರಾಣಾಯಾಮ ಮಾಡುವುದರಿಂದ ದೊರೆಯುತ್ತದೆ. ಅಲ್ಲದೇ ಪ್ರಾಣಾಯಾಮ ಮಾಡುವುದರಂದ ಮನುಷ್ಯನ ದೇಹದಲ್ಲಿ ಉತ್ಸಾಹ ಹೆಚ್ಚಾಗುತ್ತದೆ. ಇದರ ಜೊತೆಯಲ್ಲಿ ಏಕಾಗ್ರತೆಯು ಹೆಚ್ಚುತ್ತದೆ.
ಇದನ್ನೂ ಓದಿ: ದೇಹದ ಬೊಜ್ಜುನ್ನುಬೇಗನೆ ಕರಗಿಸಬೇಕಾ : ಹಾಗಾದ್ರೆ ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರು ಕುಡಿಯಿರಿ

ಇತ್ತೀಚಿನ ದಿನದಲ್ಲಿ ಹೆಚ್ಚಿನ ಜನರನ್ನು ಕಾಡುವಂತದ್ದು ಒತ್ತಡ ಹಾಗೂ ಡಿಪ್ರೆಶನ್. ಒತ್ತಡ ಮತ್ತು ಡಿಪ್ರೆಶನ್ ಅನ್ನು ದೂರಮಾಡಲು ಪ್ರತಿ ನಿತ್ಯ ಪ್ರಾಣಯಾಮವನ್ನು ಮಾಡಬೇಕು ಇದರಿಂದ ನಿಮಗೆ ಎಂತಹದೇ ಒತ್ತಡ ವಿದ್ದರೂ ದೂರವಾಗುತ್ತದೆ. ಅಲ್ಲದೇ ಹಾರ್ಮೋನ್ ಇನ್ ಬ್ಯಾಲನ್ಸ್ ಸಮಸ್ಯೆ ಇರುವವರು ಕೂಡ ಪ್ರಾಣಾಯಾಮ ಮಾಡುವುದರಿಂದ ಹಾರ್ಮೋನ್ ಇನ್ ಬ್ಯಾಲನ್ಸ್ ಸಮಸ್ಯೆ ಪರಿಹಾರವಾಗುತ್ತದೆ.

ಪ್ರತಿ ದಿನಕ್ಕೆ ಒಂದು ಸಲ ಪ್ರಾಣಯಾಮ ಮಾಡುವುದರಿಂದ ಕೆಮ್ಮು, ನೆಗಡಿ, ತ್ರೋಟ್ ಇನ್ಫೆಕ್ಷನ್, ಅಸ್ತಮ, ನಿಮೋನಿಯದಂತಹ ಸಮಸ್ಯೆ ದೂರವಾಗುತ್ತದೆ. ಅಲ್ಲದೇ ಕಫಕ್ಕೆ ಸಂಬಂದ ಪಟ್ಟಂತ ಕಾಯಿಲೆಯನ್ನು ಅಂದರೇ ನಮ್ಮ ಶ್ವಾಸಕೋಶಕ್ಕೆ ಸಂಬಂಧಪಟ್ಟಂತ ಯಾವುದೇ ಈತಿಯ ಕಾಯಿಲೆಗಳನ್ನು ದೂರ ಮಾಡಬಹುದು.
ಇದನ್ನೂ ಓದಿ: ಸಾಂಪ್ರದಾಯಿಕ ಔಷದಿ ಲವಂಗ ದೇಹಕ್ಕೆ ಎಷ್ಟು ಮುಖ್ಯ
(Pranayama has many benefits)