ಮಂಗಳವಾರ, ಏಪ್ರಿಲ್ 29, 2025
HomeBreakingದಾಳಿಂಬೆಯಲ್ಲಿ ಅಡಗಿದೆ ಪೌಷ್ಟಿಕಾಂಶ

ದಾಳಿಂಬೆಯಲ್ಲಿ ಅಡಗಿದೆ ಪೌಷ್ಟಿಕಾಂಶ

- Advertisement -

ದಾಳಿಂಬೆ ತಿನ್ನಲು ರುಚಿಕರವಾಗಿರುತ್ತೆ. ಆದರೆ ಈ ದಾಳಿಂಬೆ ಹಣ್ಣು ತಿನ್ನಲು ರುಚಿ ಮಾತ್ರವಲ್ಲದೇ ಹಲವು ಆರೋಗ್ಯಕರ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಕಫನಾಶಕ ಹಾಗೂ ಪಿತ್ತ ಶಮನಕಾರಿಯಾಗಿದೆ. ಪೌಷ್ಟಿಕಾಂಶಗಳ ಆಗರವಾಗಿರುವ ದಾಳಿಂಬೆ ಹಣ್ಣಿನ ಕೆಲವೊಂದು ಪ್ರಯೋಜನಗಳು ನಿಮಗಾಗಿ.

ಹೃದಯ ಆರೋಗ್ಯ : ಅರ್ಧ ಕಪ್ ದಾಳಿಂಬೆ ಹಣ್ಣಿನ ಕಾಳುಗಳಿಗೆ ಚಿಟಿಕೆ ಉಪ್ಪು, ಕಾಲು ಚಮಚ ಕರಿಮೆಣಸಿನ ಕಾಳಿನ ಪುಡಿ ಬೆರೆಸಿ ಸೇವಿಸುವುದರಿಂದ ಆಯಾಸ ಪರಿಹಾರವಾಗುವುದರೊಂದಿಗೆ ಹೃದಯ ಬಲವರ್ಧಕವಾಗುವುದು.

ಇದನ್ನೂ ಓದಿ: ಅರಿಶಿನ ನಿಮ್ಮ ಸೌಂದರ್ಯವನ್ನು ಹೇಗೆಲ್ಲಾ ಕಾಪಾಡುತ್ತೆ ಗೊತ್ತಾ ?

ಹೆಚ್ಚುತ್ತೆ ರೋಗ ನಿರೋಧಕ ಶಕ್ತಿ : 2 ವಾರಗಳ ಕಾಲ ನಿಯಮಿತವಾಗಿ ದಾಳಿಂಬೆ ರಸದ ಸೇವನೆಯಿಂದ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿ ಇರಿಸುತ್ತದೆ. ದಾಳಿಂಬೆ ಹಣ್ಣಿನ ಕಾಳುಗಳನ್ನು ಕೋಸಂಬರಿ ಹಾಗೂ ಸಾಲಡ್ ಗಳ ಜೊತೆ ಬೆರೆಸಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ನೆನಪಿನ ಶಕ್ತಿ ಹಾಗೂ ಮೂತ್ರಪಿಂಡ ಆರೋಗ್ಯ : ದಾಳಿಂಬೆಯ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ನೆನಪಿನ ಶಕ್ತಿ ಚುರುಕಾಗುತ್ತದಲ್ಲದೆ, ಮೂತ್ರಪಿಂಡದ ಸಮಸ್ಯೆಗಳು ದೂರವಾಗುತ್ತವೆ. ಇಷೇ ಅಲ್ಲದೇ ಇನ್ನೂ ಹಲವಾರು ರೀತಿಯ ಆರೋಗ್ಯಕರ ಪ್ರಯೋಜನಗಳು ನಮ್ಮ ದೇಹಕ್ಕೆ ದಾಳಿಂಬೆ ಹಣ್ಣು ತಿನ್ನುವುದರಿಂದ ದೊರಕುತ್ತದೆ.

ಇದನ್ನೂ ಓದಿ: Ghee Benefits : ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತೆ ತುಪ್ಪ : ನಿತ್ಯ ಬಳಕೆಯಿಂದ ಹಲವು ಅನುಕೂಲ

(The nutrition that lies in the pomegranate)

RELATED ARTICLES

Most Popular