ಭಾನುವಾರ, ಏಪ್ರಿಲ್ 27, 2025
HomeBreakingನಾರ್ಮಲ್‌ ಡೆಲಿವರಿ ಬಯಸುವವರು ಈ ಟಿಪ್ಸ್‌ ಫಾಲೋ ಮಾಡಿ

ನಾರ್ಮಲ್‌ ಡೆಲಿವರಿ ಬಯಸುವವರು ಈ ಟಿಪ್ಸ್‌ ಫಾಲೋ ಮಾಡಿ

- Advertisement -

ಹೆರಿಗೆ ಅನ್ನೋದು ಹೆಣ್ಣಿಗೆ ಮರು ಜನ್ಮ. ಹೆರಿಗೆಯ ಸಂದರ್ಭದಲ್ಲಿ ಹೆಂಗಸರು ಆರೋಗ್ಯವನ್ನು ಬಹಳಷ್ಟು ಚೆನ್ನಾಗಿ ಕಾಪಾಡಿಕೊಳ್ಳ ಬೇಕು. ಯೋಗ್ಯವಾದ ಆಹಾರದ ಜೊತೆಯಲ್ಲಿ ಸ್ವಲ್ಪ ಯೋಗ, ವ್ಯಾಯಾಮವು ಮುಖ್ಯ. ಆದರೂ ಹೆರಿಗೆ ಸಂದರ್ಭದಲ್ಲಿ ಹೆಚ್ಚಿನ ಮಹಿಳೆಯರಿಗೆ ಸುಲಭವಾಗಿ ನಾರ್ಮಲ್‌ ಡೆಲಿವರಿ ಆಗಬೇಕು ಎಂದು ಅಂದುಕೊಂಡಿರುತ್ತಾರೆ.

ನಾರ್ಮಲ್‌ ಡೆಲಿವರಿ ಯಾಗಲು ಮುಖ್ಯವಾಗಿ ಮಹಿಳೆಯರಿಗೆ ಮನತ್ಸೈಸ್ಥೈರ್ಯ ಇರಬೇಕು. ನಾರ್ಮಲ್‌ ಡೆಲಿವರಿಯಾಗುವುದು ಹಾಗೂ ಸಿಜರಿನ್ ಆಗೋದು ಆ ಮಹಿಳೆಯ‌ ಧೈರ್ಯದ ಮೇಲೆ ಅವಲಂಬಿಸಿರುತ್ತದೆ. ಹಾಗೂ ಐದನೇ ತಿಂಗಳ ಗರ್ಭಧಾರಣೆ ಇರುವಾಗಲೇ ಬೆಣ್ಣೆಯನ್ನು ತಿನ್ನಲು ಅಭ್ಯಾಸ ಮಾಡಿಕೊಳ್ಳಿ. ಬೆಣ್ಣೆಯಲ್ಲಿ ಒಳ್ಳೆಯ ಕ್ಯಾಲೋರಿಸ್‌ ಇರೋದ್ರಿಂದ ಇದು ನಾರ್ಮಲ್‌ ಡೆಲಿವರಿಗೆ ಸಹಾಯಕ ವಾಗುತ್ತದೆ.

ಇದನ್ನೂ ಓದಿ: ಸಾಂಪ್ರದಾಯಿಕ ಔಷದಿ ಲವಂಗ ದೇಹಕ್ಕೆ ಎಷ್ಟು ಮುಖ್ಯ

ಆದಷ್ಟು ಬಿಸಿನೀರನ್ನು ಕೂಡಿಬೇಕು ಇದು ಮಗುವಿನ ಕಿಡ್ನಿಗಳಿಗೂ ಬಹಳ ಒಳ್ಳೆಯದು. ಅಲ್ಲದೇ ಐದನೇ ತಿಂಗಳು ಪ್ರಾರಂಭದಿಂದಲೇ ಪ್ರತೀ ನಿತ್ಯ ಎಣ್ಣೆ ಸ್ನಾನವನ್ನು ಮಾಡಿ. ಬೆಳಗಿನ ಜಾವದ ಸೂರ್ಯನ ಬಿಸಿಲಿಗೆ ನಿಮ್ಮ ಮೈಯನ್ನು ಒಡ್ಡಿ. ಒಳ್ಳೆಯ ಮೊಳಕೆ ಬರಿಸಿದ ಕಾಳಿನ ಪಲ್ಯ ಅಥವಾ ಮೊಳಕೆ ಬರಿಸಿದ ಕಾಳನ್ನು ಹಸಿಯಾಗಿ ತಿನ್ನಿ ಇದು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ.

ದಿನ ನಿತ್ಯ ದಾಳಿಂಬೆ ಜ್ಯೂಸ್‌ ಅನ್ನು ಸೇವಿಸಿ ಆದಷ್ಟು ನಿಮ್ಮ ದೇಹಕ್ಕೆ ಸ್ಟ್ರೇಂತ್‌ ಬರುವಂತ ಹಾಗೂ ಕ್ಯಾಸಿಯಂ ಇರುವಂತ ಆಹಾರವನ್ನು ಸೇವಿಸಿ. ಪ್ರಣಾಯಾಮವನ್ನು ಪ್ರತಿನಿತ್ಯ ಮಾಡಿ ಉಸಿರಾಡುವ ಯೋಗವನ್ನು ದಿನ ನಿತ್ಯ ಹತ್ತರಿಂದ ಹದಿನೈದು ನಿಮಿಷವಾದರು ಮಾಡಬೇಕು.

ಇದನ್ನೂ ಓದಿ: ಮೊಳಕೆ ಬರಿಸಿದ ಹೆಸರು ಕಾಳು ತಿನ್ನುವುದು ಆರೋಗ್ಯಕ್ಕೆ ಉತ್ತಮವೇ ?

(Those who want normal delivery follow these tips)

RELATED ARTICLES

Most Popular