ಒಬ್ಬೊಬ್ಬರ ದಿನಚರಿ ಒಂದೊಂದು ರೀತಿಯಾಗಿರುತ್ತೆ. ಬ್ರೆಶ್ ಮಾಡಿದ ಮೇಲೆ ಚಹಾ ಕುಡಿಯೋದು ಮಾಮೂಲು. ಆದರೆ ಕೆಲವರು ಮಾತ್ರ ಬೆಡ್ ಟೀ ಕುಡಿಯೋ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಅದ್ರಲ್ಲೂ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯೋದು ಹಲವರಿಗೆ ಸಖತ್ ಖುಷಿಯನ್ನು ಕೊಡುತ್ತದೆ.

ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದ್ರೆ ದೇಹಕ್ಕೆ ಉಲ್ಲಾಸ ಬರುತ್ತೆ ಅಂತಾ ಹೇಳೋದನ್ನೂ ಕೇಳಿದ್ದೇವೆ. ಆದ್ರೆ ಖಾಲಿ ಹೊಟ್ಟೆಗೆ ತುಂಬಾ ಬಿಸಿಯಾಗಿರುವಂತಹ ಚಹಾ ಸೇವನೆ ಮಾಡೋದ್ರಿಂದ ಅನ್ನನಾಳದ ಕ್ಯಾನ್ಸರ್ ಬರುತ್ತೆ ಅನ್ನುವುದು ಅಧ್ಯಯನಗಳಿಂದ ದೃಢವಾಗಿದೆ.

ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ ಮಾಡುವುದರಿಂದ ಮನುಷ್ಯನ ದೇಹಕ್ಕೆ ಯಾವೆಲ್ಲ ರೀತಿಯಲ್ಲಿ ಅನುಕೂಲಗಳಾಗುತ್ತೆ ಅನ್ನೋ ಕುರಿತು 2008ರಲ್ಲಿ ಅಧ್ಯಯನವೊಂದನ್ನು ನಡೆಸಲಾಗಿತ್ತು. ಸುದೀರ್ಘ ಅವಧಿಯವರೆಗೂ ನಡೆದ ಸಂಶೋಧನೆಯಿಂದಾಗಿ ತುಂಬಾ ಬಿಸಿಯಾಗಿರುವ (65 ಡಿಗ್ರಿ ಸೆಲ್ಸಿಯಸ್/149 -156 ಡಿಗ್ರಿ ಎಫ್ ಎಚ್) ತನಕ ಬಿಸಿಯಾಗಿರುವ ಚಹಾ ಕುಡಿಯುವವರು ಅನ್ನನಾಳದ ಕ್ಯಾನ್ಸರ್ ಗೆ ತುತ್ತಾಗುವಂತಹ ಸಾಧ್ಯತೆ ಹೆಚ್ಚಾಗಿದೆ ಅನ್ನೋದು ಅಧ್ಯಯನದಿಂದ ಬಯಲಾಗಿದೆ.

ಖಾಲಿ ಹೊಟ್ಟೆಯಲ್ಲಿ ಅತೀಯಾಗಿ ಚಹಾ ಸೇವನೆ ಮಾಡವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ. ದಿನಕ್ಕೆ ಏಳು ಅಥವಾ ಅದಕ್ಕಿಂತ ಹೆಚ್ಚು ಟೀ ಸೇವಿಸುವವರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಅಪಾಯವು ಶೇ.50ರಷ್ಟು ಹೆಚ್ಚಾಗಿರುತ್ತದೆ. ದಿನಕ್ಕೆ 0-3 ಕಪ್ ಚಹಾಕುಡಿಯುವವರಲ್ಲಿ ಇದರ ಅಪಾಯ ತುಂಬಾ ಕಡಿಮೆ ಇದೆ. ದಿನಕ್ಕೆ4-6 ಕಪ್ ಚಹಾಕುಡಿಯುವವರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಹೆಚ್ಚಾಗಿರುತ್ತದೆ ಎಂದು ಅಧ್ಯಯನ ಹೇಳಿದೆ.

ಮಾತ್ರವಲ್ಲ ಅತಿಯಾಗಿ ಚಹಾ ಕುಡಿದ ಪರಿಣಾಮವಾಗಿ ಕೆಲವರಲ್ಲಿ ಮೂಳೆಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಇಂಗ್ಲೇಂಡ್ ನ ಮಹಿಳೆಯೋರ್ವರು ನಿತ್ಯವೂ 100 ರಿಂದ 150 ಬ್ಯಾಗ್ ಟೀ ಕುಡಿಯುತ್ತಿದ್ದರು. ಅತೀಯಾಗಿ ಚಹಾ ಕುಡಿದ ಪರಿಣಾಮ ಮಹಿಳೆಯ ಮೂಳೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಇನ್ನು ಚಹಾ ಮೂತ್ರವರ್ಧಕವಾಗಿರುವುದರಿಂದಾಗಿ ದೇಹದ ನೀರಿನಾಂಶವನ್ನು ಹೊರಗೆ ಹಾಕುತ್ತದೆ. ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಆಗ ನಿರ್ಜಲೀಕರಣವು ಹೆಚ್ಚಾಗುವುದು ಮತ್ತು ಸ್ನಾಯುಗಳ ಸೆಳೆತಕ್ಕೆ ಕಾರಣವಾಗಬಹುದು.

ಚಹಾದಲ್ಲಿ ನೈಸರ್ಗಿಕದತ್ತವಾದ ಕೆಫಿನ್ ಅಂಶವಿದೆ. ಕೆಫಿನ್ ಅಂಶವು ದೇಹಕ್ಕೆ ಶಕ್ತಿಯನ್ನು ಹೆಚ್ಚಿಸುತ್ತದೆ. ಚುರುಕುತನವನ್ನೂ ವೃದ್ದಿಸುವ ಸಾಮರ್ಥ್ಯವಿದೆ. ಆದರೆ ಹೇರಳ ಪ್ರಮಾಣದಲ್ಲಿ ಚಹಾ ಸೇವನೆಯನ್ನು ಮಾಡುವುದರಿಂದ ಅದರಿಂದಾಗುವ ಅಡ್ಡಪರಿಣಾಮಗಳು ಅಧಿಕವಾಗಿವೆ. ಕೆಫಿನ್ ಅಂಶ ಹೆಚ್ಚುವುದರಿಂದ ಹೃದಯ ಸಮಸ್ಯೆ, ಮಾನಸಿಕ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಖಾಲಿಯಾಗಿರುವ ಹೊಟ್ಟೆಗೆ ಚಹಾ ಸೇವನೆ ಮಾಡುವುದರಿಂದ ಅಸಿಡಿಟಿ ಹೆಚ್ಚಾಗುವ ಸಾಧ್ಯತೆ ಅಧಿಕವಾಗಿದ್ದು, ಜೀರ್ಣಕ್ರಿಯೆಗೆ ಅಗತ್ಯವಾಗಿರುವ ರಸದ ಸ್ರವಿಸುವಿಕೆಯ ಮೇಲೂ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುವುದರಿಂದಾಗಿ ಜೀರ್ಣಕ್ರಿಯೆ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

ಹಾಲು, ಚಹಾ ಪುಡಿ ಹಾಗೂ ಸಕ್ಕರೆ ಮಿಶ್ರಿತ ಒಂದು ಕಪ್ ಚಹಾದಲ್ಲಿ ಸುಮಾರು 40-50 ಕ್ಯಾಲರಿ ಇರುತ್ತದೆ. ನಿತ್ಯವೂ 4 ರಿಂದ 5 ಕಪ್ ಚಹಾ ಕುಡಿಯುವುದರಿಂದ ಸುಮಾರು 250-300 ಕ್ಯಾಲರಿ ಸೇವಿಸಿದಂತಾಗುತ್ತದೆ. ಇದರಿಂದ ಬೊಜ್ಜು ಹೆಚ್ಚಾಗುವ ಸಾಧ್ಯತೆಗಳಿವೆ. ಹೀಗಾಗಿ ದಿನಕ್ಕೊಂದು ಕಪ್ ಚಹಾ ಕುಡಿದು ಆರೋಗ್ಯವಂತರಾಗಿರುವುದು ಒಳಿತು.
ಇದನ್ನೂ ಓದಿ : ನೆಲ್ಲಿಕಾಯಿ ತಿನ್ನಿ ಕೊರೊನಾದಿಂದ ದೂರವಿರಿ ! ಹಸಿರು ಹೊನ್ನಿನ ಮಹತ್ವ ನಿಮಗೆ ಗೊತ್ತಾ?
ಇದನ್ನೂ ಓದಿ : ದಿನಕ್ಕೆ ಎಷ್ಟು ಮೊಟ್ಟೆಗಳನ್ನು ಸೇವಿಸಬೇಕು ಗೊತ್ತಾ ?
( Health Tips : Is it the practice of drinking tea on an empty stomach? So beware )