ಮಂಗಳವಾರ, ಏಪ್ರಿಲ್ 29, 2025
HomeBreakingHealthy herbal tea: ಚಳಿಗಾಲದಲ್ಲಿ ಆರೋಗ್ಯವಾಗಿರಲು ಕುಡಿಯಿರಿ ಈ 5 ಆರೋಗ್ಯಕರ ಗಿಡಮೂಲಿಕೆ ಚಹಾ

Healthy herbal tea: ಚಳಿಗಾಲದಲ್ಲಿ ಆರೋಗ್ಯವಾಗಿರಲು ಕುಡಿಯಿರಿ ಈ 5 ಆರೋಗ್ಯಕರ ಗಿಡಮೂಲಿಕೆ ಚಹಾ

- Advertisement -

(Healthy herbal tea) ಪ್ರಪಂಚದಾದ್ಯಂತ ಜನರು ನಿಧಾನವಾಗಿ ಉತ್ತಮ ಆರೋಗ್ಯದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಕೆಲವು ಸಂದರ್ಭದಲ್ಲಿ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳ ಅಗತ್ಯವಿರುತ್ತದೆ. ನಮ್ಮ ದೈನಂದಿನ ಬಳಕೆಗಳಲ್ಲಿ ಚಹಾ, ಪಾನೀಯಗಳು ಕೂಡ ದೇಹದ ಆರೋಗ್ಯದಲ್ಲಿ ಬಹಳಷ್ಟು ವ್ಯತ್ಯಾಸವನ್ನು ಮಾಡಬಹುದು. ಆದರೆ ಬೇರೆ ಪಾನೀಯಗಳಿಗಿಂತ ನಾವು ಹೆಚ್ಚು ಚಹಾಗೆ ಆದ್ಯತೆ ನೀಡುತ್ತೇವೆ. ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅಥವಾ ಯಾವುದೇ ಅನಾರೋಗ್ಯ ಅಥವಾ ಒತ್ತಡವನ್ನು ನಿರ್ವಹಿಸಲು ನೀವು ಬಯಸುತ್ತೀರಾ? ಹಾಗಿದ್ದರೆ ನಿಮ್ಮ ಪ್ರತಿ ಆರೋಗ್ಯದ ಸಮಸ್ಯೆಗೆ ಹಾಗೂ ನಿಮಗೆ ಅಗತ್ಯವಿರುವ ಪರಿಹಾರವನ್ನು ಈ ಐದು ಆರೋಗ್ಯಕರ ಗಿಡಮೂಲಿಕೆ ಚಹಾಗಳು ನೀಡುತ್ತವೆ.

  1. ಅರಿಶಿನ ಚಹಾಗಳು

ಅರಿಶಿನವು ಉರಿಯೂತದ ಗುಣಲಕ್ಷಣಗಳನ್ನು ಗುಣಪಡಿಸುವ ಸೂಪರ್‌ಫುಡ್ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಇದರ ಪ್ರಯೋಜನಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿವೆ. ಅರಿಶಿನದ ಚಹಾವನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು ಮತ್ತು ಇದು ಕೆಫೀನ್-ಮುಕ್ತ ಪಾನೀಯವಾಗಿದೆ.

  1. ಕ್ಯಾಮೊಮೈಲ್ ಚಹಾಗಳು

ವಿವಿಧ ಕಾರಣಗಳಿಗಾಗಿ ಕ್ಯಾಮೊಮೈಲ್ ಅನ್ನು ಶಿಫಾರಸು ಮಾಡುತ್ತಾರೆ. ಇದು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ. ಇದು ಮುಟ್ಟಿನ ನೋವು, ಆಸ್ಟಿಯೊಪೊರೋಸಿಸ್ ಮತ್ತು ಶೀತದ ಲಕ್ಷಣಗಳಿಗೆ ಸಹ ಸಹಾಯ ಮಾಡುತ್ತದೆ. ಹೀಗಾಗಿ ಮಧ್ಯಾಹ್ನದ ಸಮಯದಲ್ಲಿ ಅಥವಾ ಮಲಗುವ ಕೆಲವು ಗಂಟೆಗಳ ಮೊದಲು ಒಂದು ಕಪ್ ಕ್ಯಾಮೊಮೈಲ್ ಚಹಾವನ್ನು ಸೇವಿಸಬಹುದು.

  1. ಹೈಬಿಸ್ಕಸ್ ಚಹಾ

ದಾಸವಾಳದ ಚಹಾವು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಲ್ಲದೇ ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳುವಲ್ಲಿ ಸಹ ಸಹಾಯಕವಾಗಬಹುದು.

  1. ಊಲಾಂಗ್ ಚಹಾ

ಊಲಾಂಗ್ ಚಹಾವು ಪಾಲಿಫಿನಾಲ್‌ಗಳನ್ನು ಹೊಂದಿದ್ದು, ಇದು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಹೃದಯದ ಕಾರ್ಯವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಚಳಿಗಾಲದಲ್ಲಿ ಒಮ್ಮೆ ಊಲಾಂಗ್‌ ಚಹಾವನ್ನು ತಯಾರಿಸಿ ಕುಡಿಯಿರಿ.

  1. ಶುಂಠಿ ಟೀ
    ಅನಾರೋಗ್ಯಕ್ಕೆ ಒಳಗಾದಾಗ ಮೊದಲು ನೆನಪಿಗೆ ಬರುವುದು ಶುಂಠಿ ಚಹಾ. ನೋಯುತ್ತಿರುವ ಗಂಟಲು, ಕೆಮ್ಮು ಮತ್ತು ನೆಗಡಿಗೆ ಚಿಕಿತ್ಸೆ ನೀಡಲು ಪ್ರತಿಯೊಬ್ಬರ ಮನೆಯಲ್ಲಿ ಶುಂಠಿ ಚಹಾವನ್ನು ತಯಾರಿಸಿ ನೀಡುತ್ತಾರೆ. ಶುಂಠಿ ಚಹಾವು ಅಜೀರ್ಣ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ : ಚಳಿಗಾಲದಲ್ಲಿ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಈ 5 ಅಡುಗೆ ಪದಾರ್ಥ

Healthy herbal tea: Drink these 5 healthy herbal teas to stay healthy in winter

RELATED ARTICLES

Most Popular