ಸೋಮವಾರ, ಏಪ್ರಿಲ್ 28, 2025
HomeBreakingಕ್ಯಾರೆಟ್ ತಿನ್ನಿ ಕಣ್ಣಿನ ಆರೋಗ್ಯ ವೃದ್ದಿಸಿಕೊಳ್ಳಿ !

ಕ್ಯಾರೆಟ್ ತಿನ್ನಿ ಕಣ್ಣಿನ ಆರೋಗ್ಯ ವೃದ್ದಿಸಿಕೊಳ್ಳಿ !

- Advertisement -

ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯವೂ ಒಂದಿಲ್ಲೊಂದು ಆಹಾರ ಸೇವನೆ ಮಾಡುತ್ತೇವೆ. ದೇಹದ ಬಹುಮುಖ್ಯ ಅಂಗವಾಗಿರೋ ಕಣ್ಣಿನ ಆರೋಗ್ಯ ಅತೀ ಮುಖ್ಯ. ಕಣ್ಣಿನ ಆರೋಗ್ಯ ವೃದ್ದಿಗೆ ಕ್ಯಾರೆಟ್ ಅತೀ ಅಗತ್ಯ. ಗ್ರೀಕ್ ಭಾಷೆಯ ಕರಟಾನ್ ಅನ್ನೋ ಪದದಿಂದಲೇ ಕ್ಯಾರೆಟ್ ಹುಟ್ಟಿಕೊಂಡಿದೆ.


ಕ್ಯಾರೆಟ್ ನಲ್ಲಿ ಕ್ಯಾಲೋರಿ, ಕಾರ್ಬೋಹೈಡ್ರೆಟ್, ಪ್ರೋಟಿನ್, ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣಾಂಶ, ವಿಟಮಿನ್ ಇ, ಪೊಟಾಶಿಯಂ, ಮೆಗ್ನೆಶಿಯಂ, ಪೋಲೆಟ್ , ಮ್ಯಾಂಗನೀಸ್, ವಿಟಮಿನ್ ಇ, ಮತ್ತು ಸತುವಿನ ಅಂಶವಿದೆ. ಕ್ಯಾರೆಟ್ ನಲ್ಲಿರುವ ಬೀಟಾ ಕೆರೋಟಿನ್ ಮತ್ತು ಆಂಟಿ ಆಕ್ಸಿಡೆಂಟ್ ಅಂಶ ನಮ್ಮ ದೇಹಕ್ಕೆ ತೀರಾ ಅಗತ್ಯ.

ಕಣ್ಣಿನ ಸೌಂದರ್ಯ, ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ಯಾರೆಟ್ ಅತ್ಯುತ್ತಮ ಆಹಾರ. ಕ್ಯಾರೆಟ್ ನಲ್ಲಿರುವ ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ರಾತ್ರಿ ಹೊತ್ತು ದೃಷ್ಟಿಗೆ ಅಗತ್ಯವಿರುವ ಕೆನ್ನೆರಳೆ ವರ್ಣದ್ರವ್ಯವನ್ನು ಒದಗಿಸುವ ವಿಶೇಷ ಶಕ್ತಿ ಕ್ಯಾರೆಟ್ ಗೆ ಇರುವುದರಿಂದ ಕಣ್ಣಿನ ಪೊರೆ ಸಮಸ್ಯೆ ಬಾರದಂತೆ ಕ್ಯಾರೆಟ್ ರಕ್ಷಣಾ ಕಚನವನ್ನು ಒದಗಿಸುತ್ತದೆ

ಕ್ಯಾರೆಟ್ ಜೂಸ್ ಸೇವನೆಯಿಂದ ಮುಪ್ಪು ಬಾರದಂತೆ ತಡೆಯುತ್ತದೆ. ಕ್ಯಾರೆಟ್ ನಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣ ನಮ್ಮ ತ್ವಜೆಯನ್ನು ಬಿಗಿಯಾಗಿ ಇರಿಸುತ್ತದೆ. ಸೂರ್ಯನ ಕಿರಣಗಳಿಂದ ನಮ್ಮ ಚರ್ಮ ಕಪ್ಪಾಗದಂತೆ ಕಾರ್ಯನಿರ್ವಹಿಸುತ್ತದೆ. ಮಾತ್ರವಲ್ಲ ಸನ್ ಬರ್ನ್ ಗಳನ್ನು ನಿವಾರಿಸುವ ಶಕ್ತಿ ಕ್ಯಾರೆಟ್ ಗೆ ಇದೆ. ಕಾಂತಿಯುಕ್ತ ಚರ್ಮ, ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳಲು ದುಬಾರಿ ಸನ್ ಸ್ಕ್ರೀನ್ ಲೋಶನ್ ಬಳಕೆ ಮಾಡುವ ಬದಲು, ಕ್ಯಾರೆಟ್ ಜ್ಯೂಸ್ ಸೇವಿಸಿ ತ್ವಜೆಯನ್ನು ಕಾಪಾಡಿಕೊಳ್ಳಬಹುದು. ಮಾತ್ರವಲ್ಲ ಕ್ಯಾರೆಟ್ ಜ್ಯೂಸ್ ಸೇವಿಸುವುದರಿಂದ ಲವಲವಿಕೆಯಿಂದ ಇರಲು ಸಹಾಯಕವಾಗಿದೆ.

ಬಾಯಿಗೆ ರುಚಿಯಾಗಿದೆ ಅನ್ನೋ ಕಾರಣಕ್ಕೆ ಹಲವರು ಕ್ಯಾರೆಟ್ ತಿನ್ನುತ್ತಾರೆ, ಇನ್ನೂ ಹಲವರು ಕಣ್ಣಿನ ಆರೋಗ್ಯಕ್ಕೆ ಕ್ಯಾರೆಟ್ ಇಷ್ಟ ಪಡುತ್ತಾರೆ. ಆದರೆ ಕ್ಯಾನ್ಸರ್ ವಿರುದ್ದ ಕೂಡ ಹೋರಾಡುವ ಶಕ್ತಿ ಕ್ಯಾರೆಟ್ ಗೆ ಇದೆ. ಪ್ರಮುಖವಾಗಿ ಕ್ಯಾರೆಟ್ ನಲ್ಲಿರುವ ಫಲ್ಕಾರಿನಾಲ್ ಅನ್ನೋ ನೈಸರ್ಗಿಕ ಔಷಧಿ ಕ್ಯಾರೆಟ್ ನಲ್ಲಿದೆ. ಹೀಗಾಗಿ ಶೀಲಿಂದ್ರಗ ಳಿಂದ ಬರುವ ರೋಗಗಳನ್ನು ಬೇರಿನಿಂದಲೇ ತಡೆಯಲು ಸಹಕಾರಿ ಯಾಗಿದೆ. ಫಲ್ಕಾರಿನಾಲ್ ಶ್ವಾಸಕೋಶದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಮತ್ತು ಸ್ತನ್ ಕ್ಯಾನ್ಸರ್ ಬಾರದಂತೆ ತಡೆಯುವ ಶಕ್ತಿ ಕ್ಯಾರೆಟ್ ಗೆ ಇದೆ.

ಕ್ಯಾರೆಟ್ ತಿನ್ನುವುದು ಅಥವಾ ಜ್ಯೂಸ್ ಕುಡಿಯುವುದರಿಂದ ಮುಪ್ಪು ನಮ್ಮ ಹತ್ತಿರಕ್ಕೂ ಸುಳಿಯೋದೇ ಇಲ್ಲವಂತೆ. ಕ್ಯಾರೆಟ್ ತಿನ್ನುವುದರಿಂದ ಪಚನ ಕ್ರೀಯೆ ವೃದ್ದಿಯಾಗುತ್ತದೆ. ಹೀಗಾಗಿ ಜೀವಕೋಶಗಳು ಲವಲ ವಿಕೆಯಿಂದಿದ್ದು, ದೇಹಕ್ಕೆ ವಯಸ್ಸಾಗದಂತೆ ತಡೆಯುತ್ತದೆ. ನಿರಂತರ ವಾಗಿ ಕ್ಯಾರೆಟ್ ತಿನ್ನುವುದರಿಂದ ಯೌವನ ತುಂಬಿ ಬರುತ್ತದೆ. ಕ್ಯಾರೆಟ್ ಚರ್ಮಕ್ಕೂ ಉತ್ತಮವಾಗಿರೋದ್ರಿಂದ ಮುಖದಲ್ಲಿ ಹೊಳಪು ಕೂಡ ಬರುತ್ತದೆ.

ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುವಲ್ಲಿಯೂ ಕ್ಯಾರೆಟ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕ್ಯಾರೆಟ್ ಸೇವನೆ ಮಾಡುವುದ ರಿಂದ ಹಲ್ಲು, ಒಸಡುಗಳಿಗೆ ರಕ್ಷಣೆಯನ್ನು ನೀಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿಯೂ ಸಹಕಾರಿಯಾಗಿದೆ. ಹಸಿಯ ಕ್ಯಾರೆಟ್, ಇಲ್ಲಾ ಬೇಯಿಸಿದ ಕ್ಯಾರೆಟ್ ಸೇವನೆ ಮಾಡಬಹು ದಾಗಿದೆ. ಅಲ್ಲದೇ ಕ್ಯಾರೆಟ್ ಜ್ಯೂಸ್ ಮಾಡಿ ಕುಡಿಯೋದ್ರಿಂದಲೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular