ಭಾನುವಾರ, ಏಪ್ರಿಲ್ 27, 2025
HomeBreakingಅಧಿಕ ಕೊಲೆಸ್ಟ್ರಾಲ್ ನಿಂದ ಬಳಲುತ್ತಿದ್ದೀರಾ ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

ಅಧಿಕ ಕೊಲೆಸ್ಟ್ರಾಲ್ ನಿಂದ ಬಳಲುತ್ತಿದ್ದೀರಾ ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

- Advertisement -

ಅಧಿಕ ಕೊಲೆಸ್ಟ್ರಾಲ್ (High cholesterol tips) ಎನ್ನುವುದು ಒಂದು ಸ್ಥಿತಿಯಾಗಿದ್ದು, ಕಾಲಾನಂತರದಲ್ಲಿ ಇದು ಹೃದಯಾಘಾತ ಅಥವಾ ಸ್ಟ್ರೋಕ್‌ನಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಾಮಾನ್ಯವಾಗಿ ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲ್ಪಡುವ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (LDL) ಕೊಲೆಸ್ಟರಾಲ್‌ ಸಾಂದ್ರತೆಯು ತುಂಬಾ ಅಧಿಕವಾಗಿದ್ದರೆ, ಅದು ನಿಮ್ಮ ಅಪಧಮನಿಗಳ ಗೋಡೆಗಳಲ್ಲಿ ಕಾಣಿಸಿಕೊಂಡು, ಪ್ಲೇಕ್ ಅನ್ನು ರೂಪಿಸುತ್ತದೆ. ಈ ಪ್ಲೇಕ್‌ಗಳು ಅಪಧಮನಿಯನ್ನು ಛಿದ್ರಗೊಳಿಸಿದರೆ, ರಕ್ತ ಹೆಪ್ಪುಗಟ್ಟುವಿಕೆ ರೂಪುಗೊಳ್ಳುತ್ತದೆ. ಇದ್ದರಿಂದಾಗಿ ದೇಹದಲ್ಲಿ ರಕ್ತದ ಹರಿವನ್ನು ತಡೆಯುತ್ತದೆ ಮತ್ತು ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಹೀಗಾಗಿ ಅಧಿಕ ಕೊಲೆಸ್ಟ್ರಾಲ್‌ ನಿಯಂತ್ರಣಕ್ಕಾಗಿ ಒಂದಷ್ಟು ಒಳ್ಳೆಯ ಆಹಾರ ಕ್ರಮಗಳನ್ನು ಈ ಕೆಳಗೆ ತಿಳಿಸಲಾಗಿದೆ.

ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಆಹಾರಗಳ ವಿವರ :

ದಾಲ್ ಮತ್ತು ಬ್ರೌನ್ ರೈಸ್ :
ದಾಲ್ ಭಾರತೀಯ ಪಾಕಪದ್ಧತಿಯಲ್ಲಿ ಪ್ರಧಾನವಾಗಿದ್ದು, ಅಧಿಕ ಫೈಬರ್‌ನಿಂದ ತುಂಬಿರುತ್ತದೆ. ಇದು ಎಲ್‌ಡಿಎಲ್ ಕೊಲೆಸ್ಟ್ರಾಲ್ (ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಸಾಮಾನ್ಯವಾಗಿ ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ಬ್ರೌನ್ ರೈಸ್ ಧಾನ್ಯಗಳ ಉತ್ತಮ ಮೂಲವಾಗಿದ್ದು, ಇದು ಹೃದ್ರೋಗದ ಅಪಾಯವನ್ನು ಶೇ. 20ರಷ್ಟು ಕಡಿಮೆ ಮಾಡುತ್ತದೆ ಎಂದು ತೋರಿಸಲಾಗಿದೆ.

ಬಾರ್ಲಿ, ಓಟ್ಸ್ ಮತ್ತು ಇತರ ಧಾನ್ಯಗಳು :
ಓಟ್ಸ್ ಮತ್ತು ಓಟ್ ಹೊಟ್ಟು, ಬಾರ್ಲಿ ಮತ್ತು ಇತರ ಧಾನ್ಯಗಳು ಮುಖ್ಯವಾಗಿ ಅವು ಕರಗುವ ಫೈಬರ್ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸುಲಭವಾದ ಮೊದಲ ಹಂತವೆಂದರೆ ಓಟ್ ಮೀಲ್ ಅಥವಾ ಕೋಲ್ಡ್ ಓಟ್-ಆಧಾರಿತ ಧಾನ್ಯಗಳಾದ ಚೀರಿಯೊಸ್ ಉಪಹಾರಕ್ಕಾಗಿ ಬಳಸಬಹುದು.

ಬಾದಾಮಿ ಮತ್ತು ಮೊಸರು :
ಬಾದಾಮಿಯು ಹೃದಯ ಆರೋಗ್ಯಕ್ಕೆ ಮೊನೊಸಾಚುರೇಟೆಡ್ ಕೊಬ್ಬುಗಳು ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇದು ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನು ಮೊಸರು ತಿನ್ನುವುದರಿಂದ ಒಟ್ಟು ಕೊಲೆಸ್ಟ್ರಾಲ್ ಮಟ್ಟವನ್ನು ಶೇ. 4 ರಷ್ಟು ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೊಬ್ಬಿನ ಮೀನು :
ಆಂಚೊವಿಗಳು, ಕಪ್ಪು ಕಾಡ್, ಮ್ಯಾಕೆರೆಲ್ ಅಥವಾ ಸಾಲ್ಮನ್‌ಗಳಂತಹ ಕೊಬ್ಬಿನಾಂಶದಿಂದ ಮೀನುಗಳನ್ನು ತಿನ್ನುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಅನ್ನು ಹಲವಾರು ವಿಧಗಳಲ್ಲಿ ಕಡಿಮೆ ಮಾಡಬಹುದು. ಮೊದಲನೆಯದಾಗಿ, ಕೊಬ್ಬಿನ ಮೀನುಗಳನ್ನು ಬಹಳಷ್ಟು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ಇತರ ಪ್ರೋಟೀನ್ ಮೂಲಗಳಿಗೆ ಬದಲಿಯಾಗಿ ಬಳಸಬಹುದು. ಎರಡನೆಯದಾಗಿ, ಕೊಬ್ಬಿನ ಮೀನುಗಳು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಒಳಗೊಂಡಂತೆ ಅಪರ್ಯಾಪ್ತ ಕೊಬ್ಬಿನ ಉತ್ತಮ ಮಿಶ್ರಣವನ್ನು ಹೊಂದಿರುತ್ತವೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಲಾಗಿದೆ.

ಇದನ್ನೂ ಓದಿ : ಮಧುಮೇಹ ಇದ್ದವರು ಮಾವಿನಹಣ್ಣು ತಿನ್ನಬಹುದೇ? ಇಲ್ಲಿದೆ ಮಾಹಿತಿ

ಬಿಳಿಬದನೆ, ಬೆಂಡೆಕಾಯಿ ಮತ್ತು ಬೀನ್ಸ್ :
ಈ ಎರಡು ಕಡಿಮೆ ಕ್ಯಾಲೋರಿ ತರಕಾರಿಗಳು ಕರಗುವ ಫೈಬರ್‌ನ ಉತ್ತಮ ಮೂಲಗಳಾಗಿವೆ. ಬೀನ್ಸ್ ವಿಶೇಷವಾಗಿ ಕರಗುವ ಫೈಬರ್ನನಿಂದ ಕೂಡಿದೆ. ಇದು ನಮ್ಮ ದೇಹದಲ್ಲಿ ಜೀರ್ಣಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅಂದರೆ ಊಟದ ನಂತರ ನೀವು ಹೆಚ್ಚು ಸಮಯದವರೆಗೂ ಹೊಟ್ಟೆ ತುಂಬಿದಂತೆ ಇರುತ್ತದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಜನರಿಗೆ ಬೀನ್ಸ್ ಒಂದು ಉಪಯುಕ್ತ ಆಹಾರವಾಗಿದೆ.

High cholesterol tips : Are you suffering from high cholesterol? So follow these tips

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular