Malpe Beach :‌ ಮಲ್ಪೆ ಬೀಚ್ ನಲ್ಲಿ ಬೋಟಿಂಗ್‌ ತಾತ್ಕಾಲಿಕ ಸ್ಥಗಿತ

ಉಡುಪಿ : ಮಲ್ಪೆ (Malpe Beach) ಕರಾವಳಿಯ ಪ್ರಮುಖ ಬೀಚ್‌ಗಳಲ್ಲಿ ಒಂದು. ನಿತ್ಯವೂ ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಸೈಂಟ್‌ ಮೇರಿಸ್‌ ದ್ವೀಪದ ಜೊತೆಗೆ ಮಲ್ಪೆ ಬೀಚ್‌, ಸೀವಾಕ್‌ ಪ್ರದೇಶದಲ್ಲಿ ಬೋಟಿಂಗ್‌ ನಡೆಸುವ ಮೂಲಕ ಪ್ರವಾಸಿಗರು ವಿಹರಿಸುತ್ತಿದ್ದರು. ಆದ್ರೀಗ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಬೋಟಿಂಗ್‌ಗೆ ತಾತ್ಕಾಲಿಕ ಬ್ರೇಕ್‌ ಬಿದ್ದಿದೆ.

ಉಡುಪಿ ಜಿಲ್ಲೆಯ ಮಲ್ಪೆ ಬಂದರು ವ್ಯಾಪ್ತಿಯ ಮಲ್ಪೆ ಬೀಚ್ ಹಾಗೂ ಸೀವಾಕ್ ಪ್ರದೇಶಗಳಲ್ಲಿ ಪ್ರವಾಸಿ ಬೋಟ್ ಚಟುವಟಿಕೆಗಳು ಹಾಗೂ ಸೈಂಟ್ ಮೇರೀಸ್ ದ್ವೀಪಕ್ಕೆ ತೆರಳುವ ಪ್ರವಾಸಿ ಬೋಟ್ ಸಂಚಾರವನ್ನು ಮೇ 16 ರಿಂದ ಸೆಪ್ಟಂಬರ್ 15 ರ ವರೆಗೆ ಸ್ಥಗಿತಗೊಳಿಸಿ ನಗರಸಭೆಯ ಪೌರಾಯುಕ್ತರು ಹಾಗೂ ಮಲ್ಪೆ ಅಭಿವೃದ್ದಿ ಸಮಿತಿಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹಕಾರ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವರ್ಷಂಪ್ರತಿ ಮಳೆಗಾಲದ ಅವಧಿಯಲ್ಲಿ ಮಲ್ಪೆ ಬೀಚ್‌ (Malpe Beach) ಹಾಗೂ ಸೈಂಟ್‌ ಮೇರಿಸ್‌ ಗೆ ತೆರಳಲು ಪ್ರವಾಸಿಗರಿಗೆ ಅನುಮತಿಯನ್ನು ನಿರಾಕರಿಸಲಾಗುತ್ತಿದೆ. ಜೊತೆಗೆ ಮಲ್ಪೆ ಬೀಚ್‌ನಲ್ಲಿ ವಿಹರಿಸಲು ಕೂಡ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗುತ್ತಿದೆ. ಈ ವರ್ಷ ಮೇ ಎರಡನೇ ವಾರದಿಂದಲೇ ಬೋಟಿಂಗ್‌ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ.

ಇದನ್ನೂ ಓದಿ : top 5 houseboat : ಹೌಸ್‌ಬೋಟ್‌ ಪ್ರವಾಸ ನಿಮಗೆ ಇಷ್ಟಾನಾ; ಭಾರತದ ಟಾಪ್‌ 5 ಹೌಸ್‌ಬೋಟ್‌ ತಾಣಗಳು

ಇದನ್ನೂ ಓದಿ : Mussoorie Winterline : ಮಸ್ಸೂರಿ ವಿಂಟರ್‌ಲೈನ್‌ ಉತ್ಸವ; ಪ್ರಕೃತಿ ಸೌಂದರ್ಯದ ಸೊಬಗು

Comments are closed.