ನೈಸರ್ಗಿಕವಾಗಿ ಸಿಗೋ ಜೇನುತುಪ್ಪ ಔಷಧಿಗೆ ಸಮಾನ. ಜೇನು ತುಪ್ಪ ಹಲವಾರು ರೀತಿಯಲ್ಲಿ ಆರೋಗ್ಯ ಲಾಭಗಳನ್ನು ತರುತ್ತದೆ. ಜೇನು ತುಪ್ಪ ಸೇವನೆಯಿಂದ ಅನಾರೋಗ್ಯ ಬಾರದಂತೆ ಮುನ್ನೆಚ್ಚರಿಕೆಯನ್ನು ವಹಿಸಬಹುದಾಗಿದೆ. ಅನಾಧಿಕಾಲದಿಂದಲೂ ಭಾರತೀಯರು ಜೇನು ತುಪ್ಪವನ್ನು ಸೇವನೆಯಿಂದ ಹಲವು ಲಾಭಗಳನ್ನು ಪಡೆಯುತ್ತಿದ್ದಾರೆ.

ಅದ್ರಲ್ಲೂ ರಾತ್ರಿ ಮಲಗುವ ಮೊದಲು ಜೇನುತುಪ್ಪವನ್ನು ಸೇವಿಸಿದರೆ ಅದರಿಂದ ಅದ್ಭುತವಾಗಿರುವ ಆರೋಗ್ಯ ಲಾಭಗಳು ದೇಹಕ್ಕೆ ಸಿಗಲಿದೆ. ಜೇನು ತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುವುದರಿಂದ ಗಾಯವನ್ನು ಬೇಗನೆ ಶಮನಗೊಳಿಸುವ ಮತ್ತು ಉರಿಯೂತವನ್ನು ಶಮನಕಾರಿ ಮಾಡುವ ಗುಣಗಳಿವೆ.

ಜೇನು ತುಪ್ಪದಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ತಗ್ಗಿಸುವ ಗುಣವನ್ನು ಹೊಂದಿರುವುದರಿಂದ ಮಧುಮೇಹಿಗಳಿಗೆ ರಾಮಬಾಣ. ಸಾಮಾನ್ಯ ಶೀತ ಮತ್ತು ಕೆಮ್ಮಿನ ನಿವಾರಣೆಗೆ ಹೆಚ್ಚು ಪರಿಣಾಮಕಾರಿ ಯಾಗಿದ್ದು, ಶ್ವಾಸಕೋಶದ ಮೇಲ್ಭಾಗದಲ್ಲಿ ಉಂಟಾಗುವ ಸೋಂಕನ್ನು ನಿವಾರಣೆ ಮಾಡುತ್ತದೆ. ಅದ್ರಲ್ಲು ರಾತ್ರಿ ಮಲಗುವ ಮೊದಲು ಜೇನು ತುಪ್ಪ ಸೇವಿಸಿದರೆ ಏನೆಲ್ಲಾ ಲಾಭಗಳಿವೆ ಅನ್ನೋದನ್ನು ತಿಳಿದುಕೊಳ್ಳಿ.

ರಾತ್ರಿ ಮಲಗುವ ಮೊದಲು ಜೇನುತುಪ್ಪ ಸೇವಿಸುವುದು ತುಂಬಾ ಒಳ್ಳೆಯದು, ಇದು ನಿದ್ರೆ ಬರುವ ಹಾರ್ಮೋನ್ ಬಿಡುಗಡೆ ಮಾಡುವುದು. ಜೇನುತುಪ್ಪ ಇನ್ಸುಲಿನ್ ಮಟ್ಟ ಸ್ವಲ್ಪ ಹೆಚ್ಚಿಸುವುದು, ಇನ್ಸುಲಿನ್ ಮೆದುಳಿನಲ್ಲಿ ಟ್ರೈಫ್ಟೋಪಾನ್ ಬಿಡುಗಡೆಗೆ ಉತ್ತೇಜಿಸುವುದು, ಟ್ರೈಫ್ಟೋಪಾನ್ ಸೆರೊಟೊನಿನ್ ಆಗಿ ಪರಿವರ್ತನೆಗೊಂಡು ಆರಾಮ ಮತ್ತು ಒಳ್ಳೆಯ ಮನಸ್ಥಿತಿ ನೀಡುವುದು ಇದರಿಂದ ನಿದ್ರೆ ಚೆನ್ನಾಗಿ ಬರುವುದು.

ಜೇನು ತುಪ್ಪವು ಯಕೃತ್ ಗೆ ಇಂಧನ ನೀಡುವ ಕಾರ್ಯವನ್ನು ಮಾಡುತ್ತದೆ. ಇದರಿಂದ ಯಕೃತ್ ಗ್ಲೂಕೋಸ್ ಬಿಡುಗಡೆ ಮಾಡುತ್ತದೆ, ರಾತ್ರಿ ಮಲಗುವ ಮೊದಲು ಜೇನು ತುಪ್ಪ ಸೇವಿಸಿದರೆ ದೇಹವು ಹೆಚ್ಚಿನ ಕೊಬ್ಬನ್ನು ದಹಿಸುತ್ತದೆ. ಒಂದು ಕಚ್ಚಾ ಜೇನುತುಪ್ಪದಲ್ಲಿ ಕೇವಲ 64 ಕ್ಯಾಲರಿ ಮಾತ್ರ ಇರುವುದರಿಂದ ರಾತ್ರಿ ಇಡೀ ಹೊಟ್ಟೆ ತುಂಬಿದ ಅನುಭವವಾಗುವುದು.

ಸಾಮಾನ್ಯ ಶೀತ ಮತ್ತು ಕೆಮ್ಮು ನಿವಾರಣೆ ಮಾಡಲು ಜೇನುತುಪ್ಪವು ಒಳ್ಳೆಯ ಮನೆ ಮದ್ದು. ಮಕ್ಕಳಲ್ಲಿ ರಾತ್ರಿ ವೇಳೆ ಬರುವಂತಹ ಕೆಮ್ಮಿನ ನಿವಾರಣೆ ಮಾಡಲು ಮಕ್ಕಳಿಗೆ ಜೇನು ತುಪ್ಪ ನೀಡಿ, ಮಲಗುವ ಅರ್ಧ ಗಂಟೆಗೆ ಮೊದಲು ಜೇನು ತುಪ್ಪ ಸೇವಿಸಿದರೆ ಕೆಮ್ಮು ನಿವಾರಣೆಯಾಗುವುದು.

ದೇಹದ ಜೀರ್ಣಕ್ರಿಯೆಯ ವ್ಯವಸ್ಥೆಯಲ್ಲಿ ಜಮೆಯಾಗಿರುವಂತಹ ವಿಷಕಾರಿ ಅಂಶಗಳನ್ನು ಹೊರ ತೆಗೆಯಲು ರಾತ್ರಿ ಮಲಗುವ ಮೊದಲು ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯಿರಿ. ಕಚ್ಛಾ ಜೇನು ತುಪ್ಪದಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೊಟ್ಟೆಯಲ್ಲಿರುವ ಹಾನಿಕಾರಕ ರೋಗಕಾರಕಗಳನ್ನು ಕೊಂದು ಹಾಕುವುದು.

ಬಿಸಿ ನೀರಿಗೆ ನಿಂಬೆ ರಸ ಹಾಕಿಕೊಂಡು ಅದಕ್ಕೆ ಜೇನುತುಪ್ಪ ಹಾಕಿ ಕುಡಿದರೆ ಬೊಜ್ಜು ಹೊಟ್ಟೆ ಕರಗುವುದು. ಆರೋಗ್ಯಕರ ಚರ್ಮಕ್ಕೆ ಜೇನು ತುಪ್ಪ ಆಂಟಿ ಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿರುವಂತಹ ಜೇನು ತುಪ್ಪವು ಆರೋಗ್ಯಕರ ಚರ್ಮಕ್ಕೆ ಅದ್ಭುತ ಔಷಧಿ.ರಾತ್ರಿ ಮಲಗುವ ಮೊದಲು ಇದರ ಸೇವನೆ ಮಾಡಿದರೆ ಕಾಂತಿ ಹಾಗೂ ನಯವಾದ ಚರ್ಮ ನಿಮ್ಮದಾಗುವುದು.

ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಕಚ್ಚಾ ಜೇನು ತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿದ್ದು,ಇದರಿಂದ ಪ್ರತಿರೋಧಕ ಶಕ್ತಿ ಮೇಲೆ ದಾಳಿ ಮಾಡಿ ಹಲವಾರು ಕಾಯಿಲೆಗಳನ್ನು ಇದು ತಡೆಯುವುದು .ಜೇನುತುಪ್ಪದಲ್ಲಿ ಇರುವಂತಹ ಪಾಲಿಫಿನಾಲ್ ಎನ್ನುವ ಆ್ಯಂಟಿ ಆಕ್ಸಿಡೆಂಟ್ ಹೃದಯ ಸಂಬಂಧಿ ಕಾಯಿಲೆ ಮತ್ತು ಕ್ಯಾನ್ಸರ್ ಅನ್ನು ಸಹ ತಡೆಯುವುದು.