ಬೆಂಗಳೂರು : ಅಯ್ಯೋ ನಾನು ಎಲ್ಲರಿಗೂ ಎಣ್ಣೆ ಕುಡಿಸೋ ಮಂತ್ರಿಯಾಗಬೇಕಾ. ಎಲ್ಲರಿಗೂ ಕುಡಿಸೋದಕ್ಕೆ ನಾನು ಮಂತ್ರಿ ಸ್ಥಾನ ತ್ಯಾಗ ಮಾಡಬೇಕಿತ್ತಾ. ನನಗೆ ಆದಾಯ ಬರೋದು ಬೇಕಿಲ್ಲ. ಎಣ್ಣೆ ಮಿನಿಸ್ಟರ್ ಆಗಲ್ಲ. ಅದರಿಂದ ನಮ್ಮ ಕುಟುಂಬ ಬೆಳೆಯೋದು ನನಗೆ ಬೇಡ ಎಂದು ಸಚಿವ ಎಂಟಿಬಿ ನಾಗರಾಜ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆಯ ಬೆನ್ನಲ್ಲೇ ಅಸಮಾಧಾನ ಬಗುಲೆದ್ದಿದೆ. ಅಸಮಾಧಾನಿತ ಸಚಿವರ ಜೊತೆಗೆ ಸಚಿವ ಆರ್.ಅಶೋಕ್ ಬೆಂಗಳೂರಿನ ರೆಸ್ ಕೋರ್ಸ್ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಎಂಟಿಬಿ ನಾಗರಾಜ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ನನಗೆ ಅಬಕಾರಿ ಖಾತೆ ಬೇಡ. ಜನರಿಗೆ ಎಣ್ಣೆ ಕುಡಿಸಿ ಅದರಿಂದ ಆದಾಯ ಬರೋದು ಬೇಡ. ನನ್ನ ಹತ್ತಿರವೇ ಸಾಕಷ್ಟು ಆದಾಯವಿದೆ. ಎಲ್ಲರಿಗೂ ಕುಡಿಸುವ ಪಾಪ ನನಗೆ ಬೇಡ. ನನಗೆ ಅಬಕಾರಿ ಖಾತೆ ನೀಡಿದ್ದಾರೆ. ಆದರೆ ಆ ಖಾತೆಯೇ ನನಗೆ ಇಷ್ಟವಿಲ್ಲ. ಅಬಕಾರಿ ತಗೊಂಡು ನಾನು ಏನ್ ಕೆಲಸ ಮಾಡೋದಿದೆ ಎಂದು ಪ್ರಶ್ನಿಸಿದ್ದಾರೆ. ವಸತಿ ಖಾತೆಗೆ ರಾಜೀನಾಮೆ ಕೊಟ್ಟು ಬಂದಿದ್ದೇನೆ. ಆದರೆ ಈಗ ಕೆಲಸವಿಲ್ಲದ ಖಾತೆಯನ್ನು ನನಗೆ ಕೊಟ್ಟಿದ್ದಾರೆ. ಅದನ್ನು ತಗೊಂಡು ನಾನು ಏನ್ ಮಾಡ್ಲಿ ಎಂದು ಕಿಡಿಕಾರಿದ್ದಾರೆ.