ಬುಧವಾರ, ಏಪ್ರಿಲ್ 30, 2025
HomeBreakingP.T.Usha: ಅಥ್ಲೀಟ್ ಪಿ.ಟಿ.ಉಷಾ ಕೋಚ್ ಒಎಂ ನಂಬಿಯಾರ್ ಇನ್ನಿಲ್ಲ!

P.T.Usha: ಅಥ್ಲೀಟ್ ಪಿ.ಟಿ.ಉಷಾ ಕೋಚ್ ಒಎಂ ನಂಬಿಯಾರ್ ಇನ್ನಿಲ್ಲ!

- Advertisement -

ಕೇರಳ:  ದೇಶಕ್ಕೆ ಪಿ.ಟಿ.ಉಷಾರಂತನ ಕ್ರೀಡಾಪಟುವನ್ನು ಕೊಡುಗೆಯಾಗಿ ಕೊಟ್ಟ ಕೋಚ್ ಹಾಗೂ ನಿವೃತ್ತ ಸೇನಾ ಅಧಿಕಾರಿ ಒಎಂನಂಬಿಯಾರ್ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ನಂಬಿಯಾರ್ ಅವರಿಗೆ 89 ವರ್ಷ ವಯಸ್ಸಾಗಿತ್ತು.

ಕೇರಳದ ಕೊಳಿಕ್ಕೋಡ ಜಿಲ್ಲೆಯ ವಡಕರಾದ ಸ್ವಗೃಹದಲ್ಲಿ  ಒಎಂನಂಬಿಯಾರ್ ನಿಧನರಾಗಿದ್ದು, ಪತ್ನಿ,ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ದ್ರೋಣಾಚಾರ್ಯ ಪ್ರಶಸ್ತಿ ಹಾಗೂ ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿಯಿಂದ ನಂಬಿಯಾರ್ ಪುರಸ್ಕೃತರಾಗಿದ್ದರು.

ವಾಯುಸೇನೆಯ ಅಧಿಕಾರಿಯಾಗಿದ್ದ ನಂಬಿಯಾರ್, ಸೇನೆ ಸೇರಿದ ಬಳಿಕವೂ ಕ್ರೀಡಾಪಟುವಾಗಿ ಮುಂದುವರೆದಿದ್ದು, 15 ವರ್ಷಗಳ ಕಾಲ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಂಬಿಯಾರ್ ಬಳಿಕ ನಿವೃತ್ತಿ ಪಡೆದು ಪೂರ್ಣಪ್ರಮಾಣದಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

ಒಲಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದ ಪಿ.ಟಿ.ಉಷಾ ಮಾತ್ರವಲ್ಲದೇ, ಶೈನಿ ವಿಲ್ಸನ್ ಹಾಗೂ ವಂದನಾ ರಾವ್ ಸೇರಿದಂತೆ ಹಲವು ಅಥ್ಲೀಟ್ ಗಳಿಗೆ ನಂಬಿಯಾರ್ ತರಬೇತಿ ನೀಡಿದ್ದರು. ತಮ್ಮ ಕೋಚ್ ನಿಧನದ ಬಗ್ಗೆ ಪ್ರತಿಕ್ರಿಯಿಸಿರುವ ಪಿ.ಟಿ.ಉಷಾ ಇದು ನನಗೆ ಆಘಾತ ತಂದಿದೆ ಎಂದಿದ್ದಾರೆ.

ಇದು ನನಗೆ ಅತಿದೊಡ್ಡ ನಷ್ಟ. ನನಗೆ ಅವರು ತಂದೆಯ ಸ್ಥಾನದಲ್ಲಿದ್ದರು. ಪಾರ್ಕಿಸನ್ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ವಾರವಷ್ಟೇ ಭೇಟಿ ಮಾಡಿದ್ದೆ. ನಾನು ಹೇಳುವುದನ್ನು ಅವರು ಅರ್ಥೈಸಿಕೊಳ್ಳುತ್ತಿದ್ದರು. ಆದರೆ ಮಾತನಾಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

RELATED ARTICLES

Most Popular