KGF-2 : ವರಮಹಾಲಕ್ಷ್ಮೀ ಹಬ್ಬದಂದು ಹೊರಬಿತ್ತು ಸಿಹಿಸುದ್ದಿ: ಝೀ ವಾಹಿನಿಗೆ ಕೆಜಿಎಫ್-2 ಸ್ಯಾಟ್ಲೈಟ್ ಹಕ್ಕು!

ಕನ್ನಡದ ಬಹುನೀರಿಕ್ಷಿತ ಚಿತ್ರ ಕೆಜಿಎಫ್-2 ರಿಲೀಸ್ ಗೆ ಮುನ್ನವೇ ಹಲವು ದಾಖಲೆ ಬರೆದಿದೆ. ಇದೀಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿರುವ ಕೆಜಿಎಫ್-2 ಸಿನಿಮಾದ ಬಗ್ಗೆ ಹೊಂಬಾಳೆ ಫಿಲ್ಸ್ಮಂ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ.

ಕೆಜಿಎಫ್-2 ಸ್ಯಾಟ್ ಲೈಟ್ ರೈಟ್ಸ್ ಭಾರಿ ಮೊತ್ತಕ್ಕೆ ಝಿ ವಾಹಿನಿಗೆ ಮಾರಾಟವಾಗಿದೆ. ಈ ವಿಚಾರವನ್ನು ವರಮಹಾಲಕ್ಷ್ಮೀ ಹಬ್ಬದಂದೇ ಹೊಂಬಾಳೆ ಫಿಲ್ಸ್ಮಂನ ವಿಜಯ್ ಕಿರಂಗದೂರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಭಾರಿ ಮೊತ್ತಕ್ಕೆ ಕೆಜಿಎಫ್-2 ಸ್ಯಾಟ್ ಲೈಟ್ ರೈಟ್ಸ್ ಝೀ ಕನ್ನಡ ವಾಹಿನಿಗೆ ಮಾರಾಟವಾಗಿದ್ದು, ಈ ಸಂಬಂಧ ಒಪ್ಪಿಗೆ ಪತ್ರಕ್ಕೆ ಝೀ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹಾಗೂ ವಿಜಯ್ ಕಿರಂಗದೂರು ಸಹಿ ಹಾಕಿದ್ದಾರೆ.

ವಿಜಯ್ ಕಿರಂಗದೂರು ಹಾಗೂ ರಾಘವೇಂದ್ರ ಒಪ್ಪಿಗೆ ಪತ್ರ ಹಸ್ತಾಂತರಿಸುವ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಶುಭಹಾರೈಸಿದ್ದಾರೆ.

https://m.facebook.com/story.php?story_fbid=391448802341408&id=100044288746675

ಕೇವಲ ಕನ್ನಡ ಮಾತ್ರವಲ್ಲದೇ ತಮಿಳು,ತೆಲುಗು,ಮಲೆಯಾಳಂ ಭಾಷೆಯಗಳ ಸ್ಯಾಟ್ ಲೈಟ್ ಹಕ್ಕನ್ನು ಝೀ ವಾಹಿನಿ ಪಡೆದುಕೊಂಡಿದೆ. ಸ್ಯಾಟ್ ಲೈಟ್ ಝೀ ವಾಹಿನಿಗೆ ಮಾರಾಟವಾಗಿದ್ದರೇ , ಸಿನಿಮಾ ಆಡಿಯೋ ರೈಟ್ಸ್ ನ್ನು ಲಹರಿ ಸಂಸ್ಥೆ ಪಡೆದುಕೊಂಡಿದೆ.

Comments are closed.