ಸೋಮವಾರ, ಏಪ್ರಿಲ್ 28, 2025
HomeBreakingಸುಮಧುರ ಕಂಠದ ಗಾಯಕಿ ಕೊಟ್ರು ಸಿಹಿಸುದ್ದಿ…! ಶ್ರೇಯಾದಿತ್ಯ ಆಗಮನವಾಗುತ್ತಿದೆ ಎಂದ ಶ್ರೇಯಾಘೋಷಾಲ್…!!

ಸುಮಧುರ ಕಂಠದ ಗಾಯಕಿ ಕೊಟ್ರು ಸಿಹಿಸುದ್ದಿ…! ಶ್ರೇಯಾದಿತ್ಯ ಆಗಮನವಾಗುತ್ತಿದೆ ಎಂದ ಶ್ರೇಯಾಘೋಷಾಲ್…!!

- Advertisement -

ಸಾರೆಗಮಪಾ ರಿಯಾಲಿಟಿ ಶೋ ಮೂಲಕ ಗಾಯನ ಲೋಕಕ್ಕೆ ಎಂಟ್ರಿ ಕೊಟ್ಟು ಇದುವರೆಗೂ 21 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ ಸುಮಧುರ ಕಂಠದ ಗಾಯಕಿ ಶ್ರೇಯಾ ಘೋಷಾಲ್ ಸಿಹಿಸುದ್ದಿ ನೀಡಿದ್ದಾರೆ. ಮದುವೆಯಾದ ಐದು ವರ್ಷದ ಬಳಿಕ ತಾಯ್ತನದ ಸುದ್ದಿ ನೀಡಿದ ಗಾಯಕಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ತಾಯಿಯಾಗುತ್ತಿರುವ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋ ಶ್ರೇಯಾ ಘೋಷಾಲ್ ಅದಕ್ಕಾಗಿ ಕ್ರಿಯೆಟಿವ್ ಪೋಸ್ಟ್ ವೊಂದನ್ನು ಹಾಕಿದ್ದಾರೆ.  

ಮಗು ಶ್ರೇಯಾದಿತ್ಯ ಆಗಮಿಸುತ್ತಿದೆ.  ಶಿಲಾದಿತ್ಯ ಹಾಗೂ ನಾನು ಈ ಸಿಹಿಸುದ್ದಿಯನ್ನು ಹಂಚಿಕೊಳ್ಳಲು ಬಹಳ ರೋಮಾಂಚಿತಗೊಂಡಿದ್ದೇವೆ.

ಈ ಅಧ್ಯಾಯಕ್ಕೆ  ನಾವು ಸಿದ್ಧರಾಗಲು ನಿಮ್ಮ ಶುಭಹಾರೈಕೆ ಹಾಗೂ ಆಶೀರ್ವಾದ ಬೇಕಿದೆ ಎಂದು ಶ್ರೇಯಾ ಹೇಳಿದ್ದು, ಇದಕ್ಕಾಗಿ ಲಕ್ಷಾಂತರ ಅಭಿಮಾನಿಗಳು ಕಮೆಂಟ್ ಮೂಲಕ ಶುಭಹಾರೈಸಿದ್ದಾರೆ.

ಸಿಂಗರ್ ಶ್ರೇಯಾ 2015 ರಲ್ಲಿ ಶಿಲಾದಿತ್ಯ ಮುಖ್ಯೋಫಾಧ್ಯಾಯ ಅವರನ್ನು ವರಿಸಿದ್ದರು. 10 ವರ್ಷಗಳ ಪ್ರೀತಿ ಮದುವೆಯಲ್ಲಿ ಸುಖಾಂತ್ಯ ಕಂಡಿತ್ತು. ಇದೀಗ ಶ್ರೇಯಾ ತಾಯಿಯಾಗುತ್ತಿರುವ ಸಿಹಿಸುದ್ದಿ ನೀಡಿದ್ದಾರೆ.

ಭಾರತದ ಹಲವು ಭಾಷೆಗಳಲ್ಲಿ ಸಿನಿಮಾ ಹಾಡು ಸೇರಿದಂತೆ 21 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿರುವ ಶ್ರೇಯಾ ಘೋಷಾಲ್ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಹಾಡಿನ ಜೊತೆ ಜೊತೆಗೆ ತಮ್ಮ ಸೌಂದರ್ಯದಿಂದಲೂ ಶ್ರೇಯಾ ಮೆಚ್ಚುಗೆ ಗಳಿಸಿದ್ದಾರೆ.  

RELATED ARTICLES

Most Popular