ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಕೇಂದ್ರ ಲೋಕಸೇವಾ ಆಯೋಗವುಯುಪಿಎಸ್ ಸಿ ಪರೀಕ್ಷೆಗಳನ್ನು ಮುಂದೂಡಿದೆ. ಜೂನ್ 27 ರಂದು ನಡೆಯಬೇಕಿದ್ದ ಪರೀಕ್ಷೆಗಳು ಅಕ್ಟೋಬರ್ 10 ರಂದು ನಡೆಯಲಿದೆ.

ಭಾರತೀಯ ನಾಗರಿಕ ಸೇವೆಗಳ ಪ್ರಿಲಿಮನರಿ ಪರೀಕ್ಷೆ ಜೂನ್ 27 ರಂದು ನಡೆಯಬೇಕಿತ್ತು. ಆದರೆ ಕೊವೀಡ್-19 ಪರಿಸ್ಥಿತಿ ಬಿಗಡಾಯಿಸುತ್ತಿರುವ ಕಾರಣಕ್ಕೆ ಈ ಸಂದರ್ಭದಲ್ಲಿ ಪರೀಕ್ಷೆ ಸೂಕ್ತವಲ್ಲ ಎಂದು ಆಯೋಗ ಪರೀಕ್ಷೆ ಮುಂದೂಡಿದೆ.

ಜೂನ್ 27 ರಂದು ನಡೆಯುವ ಪರೀಕ್ಷೆಗಳನ್ನು ಅಭ್ಯರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಅಕ್ಟೋಬರ್ 10 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಲೋಕಸೇವಾ ಆಯೋಗ ಗುರುವಾರ ಪ್ರಕಟಿಸಿದೆ.

ಕೇಂದ್ರ ಲೋಕಸೇವಾ ಆಯೋಗವೂ ಭಾರತೀಯ ಆಡಳಿತಾತ್ಮಕ ಸೇವೆ, ಭಾರತೀಯ ವಿದೇಶಾಂಗ ಸೇವೆ , ಭಾರತೀಯ ಪೊಲೀಸ್ ಸೇವೆ, ಹಾಗೂ ಇತರ ಅಧಿಕಾರಿಗಳ ನೇಮಕಕ್ಕೆ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸುತ್ತದೆ.

ಇದೀಗ ಯುಪಿಎಸ್ ಸಿ ಪರೀಕ್ಷೆಗಳನ್ನು ಮುಂದೂಡಿದ್ದು, ಎರಡನೇ ಅಲೆಯ ಪ್ರಭಾವಕ್ಕೆ ಈಗಾಗಲೇ ವಿವಿಗಳ ಪರೀಕ್ಷೆ ಮುಂದೂಡಿಕೆಯಾದ ಬೆನ್ನಲ್ಲೇ ಯುಪಿಎಸ್ಸಿ ಪರೀಕ್ಷೆಯೂ ಈ ಸಾಲಿಗೆ ಸೇರಿದೆ.
