ಬೀಚ್ ಗೆ ತೆರಳಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

ವಿಜಯವಾಡ : ಸ್ನೇಹಿತನ ಜೊತೆಗೆ ಬೀಚ್ ಗೆ ತೆರಳಿದ್ದ ಯುವತಿಯ ಮೇಲೆ ಮೂರು ಮಂದಿ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ವೆಸಗಿದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ‌.

ಸುಮಾರು 21 ವರ್ಷ ಪ್ರಾಯದ ಯುವತಿ ಇತ್ತೀಚೆಗೆ ತನ್ನ ಸಂಬಂಧಿಕ ರ ಮನೆಗೆ ಬಂದಿದ್ದು, ತನ್ನ ಸ್ನೇಹಿತನ ಜೊತೆ ಕೊಮರಗಿರಿ ಪಟ್ಟಣಂನಲ್ಲಿ ರುವ ಬೀಚ್ ಗೆ ತೆರಳಿದ್ದಾರೆ. ಈ ವೇಳೆಯಲ್ಲಿ ಪಾನನತ್ತರಾಗಿದ್ದ ಮೂವರು ಕಾಮುಕರು ಯುವತಿಯ ಸ್ನೇಹಿತನನ್ನು ಕಟ್ಟಿಹಾಕಿ ಯುವತಿ ಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.

ಮಾತ್ರವಲ್ಲ ಕಾಮುಕರು ಯುವತಿಯ ಅಶ್ಲೀಲ ಪೋಟೋಗಳನ್ನು ಕ್ಲಿಕ್ಕಿಸಿದ್ದರು. ಯುವತಿ ಸ್ನೇಹಿತನ ಜೊತೆಗೆ ಮನೆಗೆ ಮರಳಿದ್ದಳು. ಆದರೆ 15 ದಿನಗಳ ನಂತರ ಕಾಮುಕನೊರ್ವ ಯುವತಿಗೆ ಸಿಕ್ಕಿ, ಮತ್ತೊಮ್ಮೆ ಆಸೆ ಪೂರೈಸುವಂತೆ ಬೆದರಿಕೆಯೊಡ್ಡಿದ್ದ. ಇಲ್ಲವಾದ್ರೆ ಆಕೆಯ ಅಶ್ಲೀಲ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ.

ನಂತರ ಯುವತಿ‌ ಮನೆಯವರಿಗೆ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಕೂಡಲೇ ಪೋಷಕರು ಪೊಲೀಸ್ ಠಾಣೆಗೆ‌‌ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಉಳಿದ ಕಾಮುಕರಿ ಗಾಗಿ ಹುಡುಕಾಟಕ್ಕಾಗಿ ಬಲೆ ಬೀಸಿದ್ದಾರೆ.

Comments are closed.