ಸೋಮವಾರ, ಏಪ್ರಿಲ್ 28, 2025
HomeBreakingಶವವಾಗಿ ಪತ್ತೆಯಾದ ಬಿಜೆಪಿ ಸಂಸದ…! ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ…!!

ಶವವಾಗಿ ಪತ್ತೆಯಾದ ಬಿಜೆಪಿ ಸಂಸದ…! ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ…!!

- Advertisement -

ನವದೆಹಲಿ: ಬಿಜೆಪಿ ಸಂಸದರೊಬ್ಬರ ಶವ ಅವರ ನಿವಾಸದಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನ ಮೂಡಿಸಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಶವವಾಗಿ ಪತ್ತೆಯಾದ ಬಿಜೆಪಿ ಸಂಸದ.

ದೆಹಲಿಯ ಆರ್.ಎಂ.ಎಲ್ ಆಸ್ಪತ್ರೆ ಸನಿಹದಲ್ಲಿರುವ ಗೋಮ್ಟಿ ಅಪಾರ್ಟಮೆಂಠ್ ನಲ್ಲಿ ರಾಮ್ ಸ್ವರೂಪ್ ಶರ್ಮಾ ಶವ ಪತ್ತೆಯಾಗಿದೆ. ದೆಹಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರು ಫ್ಲ್ಯಾಟ್ ಗೆ ಭೇಟಿ ನೀಡಿದಾಗ ರಾಮ್  ಸ್ವರೂಪ್ ಶರ್ಮಾ ಶವ ನೇಣುಬಿಗಿದ ಸ್ಥಿತಿಯಲ್ಲಿ ಇತ್ತು ಎನ್ನಲಾಗಿದೆ. ಮಂಡಿ ಮೂಲದ ಸಂಸದರು ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಬಂದಿತ್ತು. ಸ್ಥಳಕ್ಕೆ ಹೋದಾಗ ಶವ ನೇಣುಬಿಗಿದ ಸ್ಥಿತಿಯಲ್ಲಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರ ಮಾಹಿತಿ ನೀಡಿದ್ದಾರೆ.

62 ವರ್ಷದ ರಾಮ್ ಸ್ವರೂಪ್ ಶರ್ಮಾ, ಮಂಡಿ ಜಿಲ್ಲೆಯ ಜಲ್ ಪೇಹರ್ ಗ್ರಾಮದವರಾಗಿದ್ದು, 2014 ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಲೋಕಸಭೆ ಪ್ರವೇಶಿಸಿದ್ದರು. 2019 ರ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾದ ರಾಮ್ ಸ್ವರೂಪ್ ವಿದೇಶಾಂಗ ವ್ಯವಹಾರಗಳ ಕಮಿಟಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಮೃತ ಸಂಸದರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.ಆತ್ಮಹತ್ಯೆಗೆ ಶರಣಾದ ರಾಮ್ ಸ್ವರೂಪ್ ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

RELATED ARTICLES

Most Popular