ಸಿಲಿಕಾನ ಸಿಟಿಗೆ ಮತ್ತೆ ಕೊರೋನಾ ಭೀತಿ…! 6 ವಲಯಗಳಲ್ಲಿ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ…!!

ಕೊರೋನಾ ಸಾಂಕ್ರಾಮಿಕ ರೋಗದ ಎರಡನೇ ಅಲೆ ಭೀತಿಯಲ್ಲಿರುವ ಬೆಂಗಳೂರಿಗರಿಗೆ ಬಿಬಿಎಂಪಿ ಮತ್ತೊಂದು ಶಾಕ್ ನೀಡಿದ್ದು, ಮಹಾನಗರದ 6 ವಲಯಗಳಲ್ಲಿ ಪ್ರಕರಣ ಹೆಚ್ಚಿದೆ ಎಂಬ ಶಾಕಿಂಗ್ ನ್ಯೂಸ್ ನೀಡಿದೆ. ಅಷ್ಟೇ ಸಕ್ರಿಯ ಪ್ರಕರಣಗಳು ಹೆಚ್ಚಿರುವ ಈ ಪ್ರದೇಶದಲ್ಲಿ ಜನರು ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ಸೂಚಿಸಿದೆ.

ಬೆಂಗಳೂರಿನ ಮಹದೇವಪುರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಪಶ್ಚಿಮವಲಯ,ಆರ್.ಆರ್.ನಗರದ ವ್ಯಾಪ್ತಿಯ ಬೆಳ್ಳಂದೂರು, ಹಗದೂರು,ಬಿಟಿಎಂ ಲೇಔಟ್, ಕೋಣನಕುಂಟೆ,ಜರಗನಹಳ್ಳಿ,ಶಾಂತಲ ನಗರ, ಹೊಸಕೆರೆಹಳ್ಳಿ,ಬಾಣಸವಾಡಿಯಲ್ಲಿ ಪ್ರಕರಣ ಹೆಚ್ಚಿದೆ ಎಂಬ ಅಂಕಿಅಂಶವನ್ನು ಬಿಬಿಎಂಪಿ ಬಿಡುಗಡೆ ಮಾಡಿದೆ.

ಬೆಳ್ಳಂದೂರಿನಲ್ಲಿ ಅತಿ ಹೆಚ್ಚು ಅಂದ್ರೆ 131 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಆರ್.ಆರ್.ನಗರದ ಜ್ಞಾನಭಾರತಿಯಲ್ಲಿ 51 ಪ್ರಕರಣ ದಾಖಲಾಗಿದೆ. ಕಳೆದ 10 ದಿನಗಳಲ್ಲಿ ಈ ವಾರ್ಡ್ ಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ‘ಹೀಗಾಗಿ ಜನರು ಎಚ್ಚರಿಕೆ ವಹಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮನವಿ ಮಾಡಿದ್ದಾರೆ.

ಮಂಗಳವಾರ ಒಟ್ಟು ರಾಜ್ಯದಲ್ಲಿ 1,135 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿಬೆಂಗಳೂರಿನಲ್ಲೇ 710 ಪ್ರಕರಣಗಳು ದಾಖಲಾಗಿವೆ. ಅಲ್ಲಿಗೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 6 ಸಾವಿರಕ್ಕೇರಿದೆ.  ಪ್ರಕರಣಗಳು ಹೆಚ್ಚುತ್ತಿರುವ ವಲಯಗಳಲ್ಲಿ ಜನರು ಹೆಚ್ಚು ಕಾಳಜಿ ವಹಿಸಬೇಕು ಮತ್ತು ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ಆಯುಕ್ತರು ಮನವಿ ಮಾಡಿದ್ದಾರೆ.

ಆರೋಗ್ಯ ಸಚಿವ ಡಾ.ಸುಧಾಕರ್ ಕೂಡ ಜನರಿಗೆ ಎಚ್ಚರಿಕೆ ನೀಡಿದ್ದು, ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

Comments are closed.