ಆಸ್ಟ್ರೆಲಿಯಾ ಲಿಬರಲ್ ಪಾರ್ಟಿ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಕನ್ನಡತಿ…! ಖ್ಯಾತಿಗೆ ಪಾತ್ರವಾದ ಉಡುಪಿಯ ಶಿಲ್ಪಾ ಹೆಗ್ಡೆ….!!

ವಿದೇಶದಲ್ಲಿ ಭಾರತೀಯರು ಒಂದೊಂದೆ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಿರುವ ಬೆನ್ನಲ್ಲೇ ಆಸ್ಟ್ರೇಲಿಯಾದ ಲಿಬರಲ್ ಪಾರ್ಟಿಯ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಭಾರತದ ಅದರಲ್ಲೂ ಕರ್ನಾಟಕ ಮೂಲಕ ಮಹಿಳೆ ಶಿಲ್ಪಾ ಹೆಗ್ಡೆ ಆಯ್ಕೆಯಾಗಿ ಕನ್ನಡಿಗರ ಗೌರವ ಹೆಚ್ಚಿಸಿದ್ದಾರೆ.

2013 ರಲ್ಲಿ ನಡೆದ ಆಸ್ಟ್ರೇಲಿಯಾದ ಫೆಡರಲ್ ಚುನಾವಣೆಯಲ್ಲಿ ಮೆಲ್ಬರ್ನ್ ನ ವೀಲ್ಸ್ ನಿಂದ ಸ್ಪರ್ಧಿಸಿದ್ದ ಶಿಲ್ಪಾ ಹೆಗ್ಡೆ ಆಯ್ಕೆಯಾಗಿದ್ದರು. ಈಗ ಅವರನ್ನು ಚುನಾವಣೆ ಸೇರಿದಂತೆ ಹಲವು ಪಾರ್ಟಿಯ ವಿಚಾರಗಳಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳುವ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ.

ಶಿಲ್ಪಾ ಹೆಗ್ಡೆ ಈ ಸ್ಥಾನದ ಅಲಂಕರಿಸಿದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೂ ಪಾತ್ರವಾಗಿದ್ದಾರೆ. ಕರ್ನಾಟಕದ ಉಡುಪಿ ಪೆರ್ಡೂರು ಮೂಲದ ಶಿಲ್ಪಾ ಮೋಹನ್ ದಾಸ್ ಹೆಗ್ಡೆ  ನಿಟ್ಟೆಯ ಎನ್ಎಮ್ ಎ ಎಮ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಂಗಮಾಡಿದ್ದು ಕಳೆದ 20 ವರ್ಷದಿಂದ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ.

ಶಿಲ್ಪಾ ಹೆಗ್ಡೆ ಪತಿ ದಯಾನಂದ ಶೆಟ್ಟಿ ಆಸ್ಟ್ರೇಲಿಯಾದಲ್ಲಿ ಸ್ವಂತ ಉದ್ಯಮ ಹೊಂದಿದ್ದು, ಶಿಲ್ಪಾ ಅಲ್ಲಿನ ಐಟಿ ಕಂಪನಿಯ ಉದ್ಯೋಗಿ.

2022 ರಲ್ಲಿ ಆಸ್ಟ್ರೇಲಿಯಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಹೀಗಾಗಿ ಕಾರ್ಯಕಾರಿ ಸಮಿತಿ ಅತ್ಯಂತ ಮಹತ್ವಪಡೆದುಕೊಂಡಿದೆ. ಈ ಸಾಧನೆ ಬಗ್ಗೆ ಮಾತನಾಡಿರುವ ಶಿಲ್ಪಾ ನಮ್ಮ ಪಕ್ಷ ಆಸ್ಟ್ರೇಲಿಯಾ ವಲಸಿಗರ ಅಭಿವೃದ್ಧಿಗೆ ಶ್ರಮಿಸಲಿದೆ ಎಂದಿದ್ದಾರೆ.

Comments are closed.