ದೇಶದಾದ್ಯಂತ ಎರಡನೇ ಹಂತದ ಕೊರೋನಾ ಲಸಿಕೆ ವಿತರಣೆ ಅಭಿಯಾನ ೨.೦ ಆರಂಭವಾದ ಬೆನ್ನಲ್ಲೇ ನಟ ಹಾಗೂ ರಾಜಕೀಯ ಮುಖಂಡ ಕಮಲ್‌ಹಾಸನ್ ಕೋವಾಕ್ಸಿನ್ ಲಸಿಕೆಪಡೆದಿದ್ದಾರೆ.

ಸಧ್ಯ ತಮಿಳುನಾಡು ಚುನಾವಣೆಗೆ ಸಜ್ಜಾಗುತ್ತಿರುವ ಕಮಲ್‌ಹಾಸನ್ ಮಂಗಳವಾರ ಚೆನೈನ ಶ್ರೀರಾಮಚಂದ್ರ್ ಆಸ್ಪತ್ರೆಯಲ್ಲಿ ಲಸಿಕೆಪಡೆದುಕೊಂಡಿದ್ದಾರೆ.

ಮಾರ್ಚ್ ೧ ರಿಂದ ಎರಡನೇ ಹಂತದ ಅಭಿಯಾನ ಆರಂಭವಾಗಿದ್ದು ಇದರಲ್ಲಿ ೬೦ ವರ್ಷ ಮೇಲ್ಪಟ್ಟವರಿಗೆ ಹಾಗೂ ಆರೋಗ್ಯ ಸಮಸ್ಯೆ ಉಳ್ಳ ೪೫ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ೬೬ ವರ್ಷದ ಕಮಲ್‌ಹಾಸನ್ ಲಸಿಕೆ ಪಡೆದುಕೊಂಡಿದ್ದಾರೆ. ಮಕ್ಕಳ್ ನೀದಿ ಮಯ್ಯಂ ಪಕ್ಷದ ಮೂಲಕ ತಮಿಳುನಾಡಿನ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವ ಕಮಲ್ ಹಾಸನ್ ನಾಳೆಯಿಂದ ಅಧಿಕೃತ ಪ್ರಚಾರ ಆರಂಭಿಸಲಿದ್ದಾರೆ ಎನ್ನಲಾಗಿದೆ.ಖುದ್ದು ಕಮಲ್‌ಹಾಸನ್ ಹಾಗೂ ಅವರ ಪಕ್ಷದ ಅಭ್ಯರ್ಥಿಗಳು ತಮಿಳುನಾಡಿನ ೨೩೪ ವಿಧಾನಸಭಾ ಕ್ಷೇತ್ರದಲ್ಲೂ ಸ್ಪರ್ಧಿಸಲಿದ್ದಾರೆ ಎಂದು ಕಮಲ್‌ಹಾಸನ್ ಹೇಳಿದ್ದಾರೆ.

ಈ ಮಧ್ಯೆ ತಾವು ಕೊರೋನಾ ವಾಕ್ಸಿನ್ ಪಡೆದ ಸಂಗತಿಯನ್ನು ಟ್ವೀಟ್ ಮಾಡಿರೋ ಕಮಲ ಹಾಸನ್, ತಮ್ಮ ಬಗ್ಗೆ ಮಾತ್ರವಲ್ಲದೇ ಇತರರ ಬಗ್ಗೆಯೂ ಕಾಳಜಿ ವಹಿಸುವವರು ಇದನ್ನು ಸಹಿಸಿಕೊಳ್ಳಲೇ ಬೇಕು. ಸದ್ಯಕ್ಕೆ ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಳ. ಮುಂದಿನ ತಿಂಗಳು ಭ್ರಷ್ಟಾಚಾರದ ವಿರುದ್ಧ ಲಸಿಕೆ ಹಾಕುವುದು. ತಯಾರಾಗಿ ಎಂದು ಬರೆದುಕೊಂಡಿದ್ದಾರೆ.ಏಪ್ರಿಲ್ ೬ ರಂದು ತಮಿಳು ನಾಡಿನಲ್ಲಿ ಚುನಾವಣೆ ನಡೆಯಲಿದ್ದು ಜಿದ್ದಾಜಿದ್ದಿ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ.