ಸ್ಟೇಡಿಯಂ ಹೊರಗೂ ದಾಖಲೆ ಬರೆದ ಕೊಹ್ಲಿ….! ಇನ್ ಸ್ಟಾಗ್ರಾಂನಲ್ಲಿ 10 ಕೋಟಿ ಫಾಲೋವರ್ಸ್ ಹೊಂದಿದ ಮೊದಲ ಭಾರತೀಯ…!!

ಸದಾ ಕಾಲ ಬ್ಯಾಟ್ ಹಿಡಿದು ಕ್ರೀಡಾಂಗಣದ ಒಳಗೆ ಹೊಸ ಹೊಸ ದಾಖಲೆ ಬರೆಯೋ ಭಾರತೀಯ ಕ್ರಿಕೆಟಿಗ ಹಾಗೂ ಟೀಂ ಇಂಡಿಯಾ ನಾಯಕ ಸ್ಟೇಡಿಯಂ ಹೊರಗೂ ಹೊಸ ದಾಖಲೆ ಬರೆದಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ 10 ಕೋಟಿಗೂ ಅಧಿಕ  ಫಾಲೋವರ್ಸ್ ಹೊಂದಿದ ಕೊಹ್ಲಿ ಈ ಸಾಧನೆಗೈಯ್ದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ತಮ್ಮ ವೈಯಕ್ತಿಕ ಬದುಕಿನ ವಿಚಾರಗಳಿಂದ ಆರಂಭಿಸಿ ಕ್ರೀಡಾ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳೋ ವಿರಾಟ್ ಕೊಹ್ಲಿಗೆ 10 ಕೋಟಿ ಗೂ ಅಧಿಕ ಪಾಲೋವರ್ಸ್ ಗಳಿದ್ದಾರೆ. ಹೀಗಾಗಿ ಇನ್ ಸ್ಟಾಗ್ರಾಂನಲ್ಲಿ ಇಷ್ಟೊಂದು ಅನುಯಾಯಿಗಳನ್ನು ಹೊಂದಿರುವ ಮೊದಲ ಭಾರತೀಯ ಎಂಬ ಖ್ಯಾತಿಗೆ ಕೊಹ್ಲಿ ಭಾಜನರಾಗಿದ್ದಾರೆ.

ಈ ಸಾಧನೆಗೈಯ್ದ ಮೊದಲ ಭಾರತೀಯ ಮಾತ್ರವಲ್ಲ ಮೊದಲ ಭಾರತೀಕ ಕ್ರಿಕೆಟಿಗ ಎಂಬುದು ಕೊಹ್ಲಿ ಸಾಧನೆ. ಇದುವರೆಗೂ ನಾಲ್ಕು ಕ್ರೀಡಾಪಟುಗಳಷ್ಟೇ 10 ಕೋಟಿಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಪೋರ್ಚುಗಲ್ ನ ಕ್ರಿಸ್ಟಿಯಾನೋ ರೋನಾಲ್ಡೋ 26.6ಕೋಟಿ ಫಾಲೋವರ್ಸ್ ಹೊಂದಿದ್ದರೇ, ಅರ್ಜೆಂಟಿನಾದ ಲಿಯೋನಲ್ ಮೆಸ್ಸಿ 18.8 ಕೋಟಿ ಹಿಂಬಾಲಕರ ಜೊತೆ ಎರಡನೇ ಸ್ಥಾನದಲ್ಲಿದ್ದಾರೆ.

ಇನ್ನು ಬ್ರೆಜಿಲ್ ನ ನೇಯ್ಮರ್ 14.7 ಕೋಟಿ ಅನುಯಾಯಿಗಳನ್ನು ಹೊಂದಿದ್ದರೇ, ನಾಲ್ಕನೇ ಸ್ಥಾನದಲ್ಲಿ 10 ಕೋಟಿ ಹಿಂಬಾಲಕರ ಜೊತೆ ಕೊಹ್ಲಿ ನಿಂತಿದ್ದಾರೆ. ಆಯ್ ಸಿಸಿ ಈ ಸಂಗತಿಯನ್ನು ಟ್ವೀಟ್ ಮೂಲಕ ಹಂಚಿಕೊಂಡಿದೆ.

ಇನ್ನು ಇನ್ ಸ್ಟಾಗ್ರಾಂನಲ್ಲಿ ಸಿನಿಮಾ ನಟ-ನಟಿಯರು ಹೆಚ್ಚಿನ ಹಿಂಬಾಲಕರನ್ನು ಹೊಂದೋದು ವಾಡಿಕೆ. ಆದರೆ ಕೊಹ್ಲಿ ಕೂಡ ಅಪಾರ ಅಭಿಮಾನಿಗಳನ್ನು ಹೊಂದುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಅಲ್ಲದೇ ಈ ಸಾಲಿನಲ್ಲಿ ಅತಿ ಹೆಚ್ಚು ಪಾಲೋವರ್ಸ್ ಹೊಂದಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಫ್ರಾ ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

Comments are closed.