ಸಿಡ್ನಿ : ಮಹಿಳೆಯರು ಟಿ20 ವಿಶ್ವಕಪ್ ನಲ್ಲಿ ಭಾರತದ ವನಿತೆಯರು ಶುಭಾರಂಭ ಮಾಡಿದ್ದಾರೆ. ಸಿಡ್ನಿಯ ಶೋ ಗ್ರೌಂಡ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 18 ರನ್ ಗಳ ಅಂತರದಿಂದ ಬಗ್ಗು ಬಡಿದಿರುವ ಭಾರತ ಮೊದಲ ಜಯ ದಾಖಲಿಸಿದೆ.

ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತ್ತು. ಭಾರತ ಪರ ದೀಪ್ತಿ ಶರ್ಮಾ 49, ಶಫಾಲಿ ವರ್ಷ 29 ಹಾಗೂ ರೋಡ್ರಿಗಸ್ 26 ರನ್ ಗಳಿಸಿದ್ರು.

ಭಾರತ ನೀಡಿದ 132 ರನ್ ಬೆನ್ನಿತ್ತ ಆಸ್ಟ್ರೇಲಿಯಾ ಭಾರತೀಯ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿ ಹೋಗಿತ್ತು. ಪೂನಂ ಯಾದವ್ ಹ್ಯಾಟ್ರಿಕ್ ವಿಕೆಟ್ ಕಬಳಸಿದ್ರು.

4 ಓವರ್ ಗಳಲ್ಲಿ 19 ರನ್ ನೀಡಿ 4 ವಿಕೆಟ್ ಪಡೆದುಕೊಂಡ್ರೆ, ಶಿಖಾ ಪಾಂಡೆ 3.5 ಓವರ್ ಗಳಲ್ಲಿ 14 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ರಾಜೇಶ್ವರಿ ಗಾಯಕ್ ವಾಡ್ 1 ವಿಕೆಟ್ ಪಡೆದುಕೊಂಡ್ರು.

ಹೇಲಿ 51 ಹಾಗೂ ಗಾರ್ಡನರ್ 31 ರನ್ ಗಳಿಸಿದ್ರು, ಬಿಟ್ರೆ ಉಳಿದ ಆಸ್ಟ್ರೇಲಿಯಾ ಆಟಗಾರರು ಭಾರತದ ಬೌಲರ್ ಗಳ ದಾಳಿಗೆ ಪರದಾಡಿದ್ರು.