ಮಂಜುನಾಥನ ಸನ್ನಿಧಿಯಲ್ಲಿ ಶಿವರಾತ್ರಿ ಸಂಭ್ರಮ : ಧರ್ಮಸ್ಥಳಕ್ಕೆ ಹರಿದು ಬಂದಿದೆ ಭಕ್ತ ಸಾಗರ

0

ಧರ್ಮಸ್ಥಳ : ಧರ್ಮದ ನೆಲೆವೀಡು, ಕುಡುಮಾಪುರದಲ್ಲೀಗ ಶಿವರಾತ್ರಿಯ ವೈಭವ. ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಭಕ್ತರ ದಂಡೇ ಹರಿದು ಬಂದಿದೆ. ಮುಂಜಾನೆಯಿಂದಲೇ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು, ಭಕ್ತರು ಜಾಗರಣೆಯ ಮೂಲಕ ಮಂಜುನಾಥನಿಗೆ ಭಕ್ತಿಯನ್ನ ಸಮರ್ಪಿಸುತ್ತಿದ್ದಾರೆ.

ನವರಾತ್ರಿಯನ್ನು ರಾಜ್ಯದಾದ್ಯಂತ ಶ್ರದ್ದಾಭಕ್ತಿಯಿಂದ ಆಚರಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಶಿವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ.

ಮಂಜುನಾಥನ ದರ್ಶನವನ್ನು ಪಡೆದಿರೋ ಭಕ್ತರು ಭಜನೆ, ಜಾಗರಣೆಯ ಮೂಲಕ ಶಿವವನ್ನು ಆರಾಧಿಸುತ್ತಿದ್ದಾರೆ. ಅನಾದಿ ಕಾಲದಿಂದಲೂ ಮಹಾಶಿವರಾತ್ರಿಯ ದಿನದಂದು ಮಂಜುನಾಥ ದೇಗುಲದ ಮುಂಭಾಗದಲ್ಲಿ ಕುಳಿತು ಜಾಗರಣೆ ಮಾಡುವ ಆಚರಣೆ ನಡೆದುಕೊಂಡು ಬಂದಿದೆ. ಅಂತೆಯೇ ಇಂದೂ ಕೂಡ ಭಕ್ತರು ಭಜನೆಯ ಮೂಲಕ ಜಾಗರಣೆಯನ್ನು ನಡೆಸುತ್ತಿದ್ದಾರೆ.


ಧರ್ಮಸ್ಥಳದಲ್ಲಿ ನೆಲೆಸಿರೊ ಮಂಜುನಾಥ ಸನ್ನಿಧಿಯಲ್ಲಿ ಮಹಾಶಿವರಾತ್ರಿಯ ದಿನದಂದು ತನ್ನನ್ನು ಪೂಜಿಸುವ ಭಕ್ತರಿಗೆ ವಿಶೇಷ ಅನುಗ್ರಹ ನೀಡುತ್ತಾನೆಂಬ ನಂಬಿಕೆ ಭಕ್ತರದಲ್ಲಿದೆ. ಹೀಗಾಗಿ ಇಡೀ ದಿನ ಉಪವಾಸವನ್ನು ಕೈಗೊಳ್ಳೋ ಭಕ್ತರು ರಾತ್ರಿ ಜಾಗರಣೆಯನ್ನು ಮಾಡಿ ಶಿವನನ್ನು ಆರಾಧಿಸಿದ್ರೆ ಇಷ್ಟಾರ್ಥಗಳು ಸಿದ್ದಿಸುತ್ತವೆಂಬ ನಂಬಿಕೆಯಿದೆ.

ಶಿವರಾತ್ರಿಯ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲೂ ಭಕ್ತರು ಪಾದಯಾತ್ರೆಯನ್ನು ಕೈಗೊಳ್ಳುತ್ತಾರೆ.

ಅಂತೆಯೇ ಈ ಬಾರಿಯೂ ಕೂಡ ಧರ್ಮಸ್ಥಳಕ್ಕೆ ಪಾದಯಾತ್ರೆಯ ಮೂಲಕ ಸಾವಿರಾರು ಮಂದಿ ಆಗಮಿಸಿ, ಮಂಜುನಾಥನ ದರ್ಶನ ಪಡೆದಿದ್ದಾರೆ.

ಅದರಲ್ಲೂ ಕಳೆದ 40 ವರ್ಷಗಳಿಂದಲೂ ಪಾದಯಾತ್ರೆಯ ಮೂಲಕ ಧರ್ಮಸ್ಥಳಕ್ಕೆ ಆಗಮಿಸಿದ ಬೆಂಗಳೂರಿನ ಹನುಂತಪ್ಪ ಸ್ವಾಮೀಜಿ ಹಾಗೂ ಶಶಿಕುಮಾರ್ ಅವರನ್ನು ಅವರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸನ್ಮಾನಿಸಿದ್ದಾರೆ.

ವಿಶ್ವಕ್ಕೆ ಮಂಗಳವನ್ನುಂಟು ಮಾಡುವವ ಶಿವ. ಸದಾ ದೋಷಗಳನ್ನು ಕಳಚಿ, ಸಂಕಷ್ಟಗಳ ಪರಿಹಾರಕ್ಕಾಗಿ ಕ್ಷೇತ್ರ ದರ್ಶನ ಮಾಡುತ್ತೇವೆ. ಭಕ್ತರ ದೋಷಗಳನ್ನು ಗ್ರಹಣ ಮಾಡಿ, ಸಂಕಷ್ಟಗಳನ್ನು ಪರಿಹರಿಸುವ ಶಕ್ತಿ ಹೊಂದಿರುವ ಸಾನ್ನಿಧ್ಯಗಳು ತೀರ್ಥಕ್ಷೇತ್ರಗಳಾಗಿ ಬೆಳಗುತ್ತವೆ, ಬೆಳೆಯುತ್ತವೆ.

ಸಾರ್ಥಕ ಬದುಕಿಗೆ ದಾರಿದೀಪವಾಗುತ್ತವೆ. ತಮ್ಮಲ್ಲಿರುವ ಕೋಪ, ದ್ವೇಷ, ಅಸೂಯೆ ಮೊದಲಾದ ಅರಿಷಡ್ವರ್ಗಗಳನ್ನು ಕಳಚಿ, ದುಃಖ, ದುಮ್ಮಾನಗಳನ್ನು ಮರೆಯಲು ಧರ್ಮಸ್ಥಳ ಕ್ಷೇತ್ರಕ್ಕೆ ಭಕ್ತರು ಬರುತ್ತಾರೆ ಎಂದು ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.

ಒಟ್ಟಿನಲ್ಲಿ ಮಂಜುನಾಥನ ಪುಣ್ಯ ಕ್ಷೇತ್ರದಲ್ಲಿ ಶಿವರಾತ್ರಿಯ ವೈಭವ ಕಳೆಗಟ್ಟಿದೆ. ಭಕ್ತರು ಶಿವನನ್ನು ಶ್ರದ್ದಾಭಕ್ತಿಯಿಂದ ಆರಾಧಿಸುತ್ತಿದ್ದಾರೆ. ಧರ್ಮಸ್ಥಳದ ತುಂಬೆಲ್ಲಾ ಭಜನೆಯ ಝೇಂಕಾರ ಮೇಲೈಸಿದ್ದು, ರಾತ್ರಿಯಿಡೀ ಸಹಸ್ರಾರು ಭಕ್ತರು ಜಾಗರಣೆ ಮಾಡುತ್ತಿದ್ದಾರೆ.

                    ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
      ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ. 
     ಸಮಸ್ಯೆಗಳು ಹತ್ತು-ಹಲವಾರು, ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ. 
              ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು. 
                  ಶ್ರೀ ಶ್ರೀ ವಾದಿರಾಜ್ ಭಟ್, ಜ್ಯೋತಿಷ್ಯರು
                     ಮೋ : 9743666601

Leave A Reply

Your email address will not be published.