ನವದೆಹಲಿ: ಕೊರೋನಾ ಹೊಸ ವರ್ಷದ ಆಚರಣೆಯ ಅಬ್ಬರವನ್ನು ಕಸಿದಿದ್ದರೂ ಖುಷಿಯನ್ನು ಕಸಿದಿಲ್ಲ. ಜನರು ಮನೆಯಲ್ಲೇ ಕುಳಿತು ಕುಡಿದು ತಿಂದು ಮೋಜು ಮಾಡಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಆನ್ ಲೈನ್ ಫುಡ್ ಸಪ್ಲೈ ಆ್ಯಪ್ ಜೊಮಾಟೊ ನಿಮಿಷಕ್ಕೆ ಸರಾಸರಿ 4100 ದಷ್ಟು ಆರ್ಡರ್ ಪಡೆದುಕೊಂಡಿದೆ.

ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ನಿಮ್ಮಿಷ್ಟದ ಆಹಾರ ತಲುಪಿಸುವ ಸೇತುವೆಯಾಗಿ ಕೆಲಸ ನಿರ್ವಹಿಸುತ್ತಿರುವ ಜೊಮಾಟೊನಿನ್ನೆ ಸಂಜೆ 6 ಗಂಟೆಯಿಂದ ಮಧ್ಯರಾತ್ರಿಯವರೆಗೆ ತನ್ನ ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿದು ಪ್ರತಿ ನಿಮಿಷಕ್ಕೆ ಅಂದಾಜು 4100 ಆರ್ಡರ್ ಗಳನ್ನು ಪಡೆದುಕೊಂಡಿದೆ.
ಜೊಮೋಟಾ ಸಿಇಓ ದೀಪಿಂದರ್ ಗೋಯಲ್ ಈ ಅಂಕಿಅಂಶಗಳನ್ನು ಹಂಚಿಕೊಂಡಿದ್ದು ತಮ್ಮ ಮೇಲೆ ವಿಶ್ವಾಸ ಇಟ್ಟ ಜನತೆಗೆ ಧನ್ಯವಾದ ಕೂಡ ಹೇಳಿದ್ದಾರೆ.
ಈ ಆರ್ಡರ್ ಗಳನ್ನು ಅಂದಾಜು 10 ಸಾವಿರ ಡೆಲಿವರಿ ಬಾಯ್ಸ್ ಗಳ ಸಹಾಯದಿಂದ ಪೊರೈಸಲಾಯಿತು ಎಂಬುದನ್ನು ದೀಪಿಂದರ್ ಹಂಚಿಕೊಂಡಿದ್ದು ಸಂಜೆ 6 ರಿಂದ ಆರಂಭವಾದ ಆರ್ಡರ್ ಗಳ ಕುರಿತಾದ ಅಂಕಿ ಅಂಶಗಳನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಒಟ್ಟು 1.4 ಲಕ್ಷ ಕ್ಕೂ ಅಧಿಕ ಮೊತ್ತದ ಆರ್ಡರ್ ಗಳನ್ನು ಜೊಮಾಟೊ ಪೊರೈಸಿದ್ದು, ಇದರಲ್ಲಿ ಬಿರಿಯಾನಿ,ಪಿಜ್ಜಾ ಹೆಚ್ಚಿನ ಆರ್ಡರ್ ಆಗಿತ್ತು ಅನ್ನೋದನ್ನು ದೀಪಿಂದರ್ ಗೊಯಲ್ ಹೇಳಿದ್ದಾರೆ.ಸಂಜೆ 6 ಗಂಟೆ ವೇಳೆಗೆ 2500 ಆರ್ಡರ್ ನಿಂದ ಆರಂಭವಾದ ಬುಕ್ಕಿಂಗ್ ಸುರಿಮಳೆ, ರಾತ್ರಿ 8.30 ರ ವೇಳೆಗೆ ನಿಮಿಷಕ್ಕೆ 4100 ತಲುಪಿತ್ತು.
ಮಹಾರಾಷ್ಟ್ರ, ಓರಿಸ್ಸಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಬ್ರಿಟನ್ ಕೊರೋನಾ ಹಿನ್ನೆಲೆಯಲ್ಲಿ ನೈಟ್ ಕರ್ಪ್ಯೂ ಜಾರಿಯಾಗಿರೋದು ಕೂಡ ಜೊಮಾಟೊ ಈ ಸಾಧನೆಗೆ ಕಾರಣವಾಗಿದೆಯಂತೆ. ಭಾರತ ಪಾಕ್ ಕ್ರಿಕೆಟ್ ಪಂದ್ಯದ ವೇಳೆ ಹೊರತು ಪಡಿಸಿದ್ರೇ ಈ ಸಾಧನೆ ಸಾಧ್ಯವಾಗಿದ್ದು ಹೊಸ ವರ್ಷಾಚರಣೆಗೆ ಎಂದಿದ್ದಾರೆ ದೀಪಿಂದರ್ ಗೊಯಲ್