ನಿತ್ಯಭವಿಷ್ಯ : 02-01-2021

ಮೇಷರಾಶಿ
ಆತಂಕದಿಂದಲೇ ಕಾರ್ಯಸಿದ್ಧಿಯಾಗಲಿದ, ಭೂಮಿ ಮತ್ತು ವಾಹನ ಖರೀದಿಗೆ ಮನಸ್ಸು, ಖಚಿತ ನಿರ್ಧಾರಕ್ಕೆ ಬರಲಾಗದಂತಹ ಪರಿಸ್ಥಿತಿ, ಮಾನಸಿಕ ನೋವು, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಧ್ಯವರ್ತಿ ಯಾಗಬೇಕಾದ ಸಂದಿಗ್ದ ಪರಿಸ್ಥಿತಿ, ಆಪ್ತೇಷ್ಠರ ವಲಯದಲ್ಲಿ ನಿಮಗೆ ಮಾನ್ಯತೆ ಸಿಗಲಿದೆ.

ವೃಷಭರಾಶಿ
ಉದ್ಯೋಗ ವ್ಯವಹಾರದಲ್ಲಿ ಪ್ರಗತಿ ಇರುತ್ತದೆ, ಆರ್ಥಿಕ ಅಡಚಣೆ ನಡುವೆಯೇ ಇಚ್ಛಿತ ನಿರ್ಧಾರವು ಕಾರ್ಯರೂಪಕ್ಕೆ ಬರಲಿದೆ, ಗೃಹದಲ್ಲಿ ಶುಭಮಂಗಲ ಕಾರ್ಯನಿಮಿತ್ತ ಸಂಭ್ರಮ, ಆತ್ಮೀಯರಿಂದ ಪ್ರಶಂಸೆ, ಪತ್ರ ವ್ಯವಹಾರಗಳಿಂದ ಅನುಕೂಲ, ಅಧಿಕ ಧನ ಸಂಪಾದನೆ, ಉತ್ತಮ ಹೆಸರು ಕೀರ್ತಿ ಸಂಪಾದಿಸುವಿರಿ.

ಮಿಥುನರಾಶಿ
ಕೌಟುಂಬಿಕ ನೆಮ್ಮದಿ ಪ್ರಾಪ್ತಿ, ಮೋಜು ಮಸ್ತಿಗಾಗಿ ಮನಸ್ಸು, ಪ್ರೀತಿ-ಪ್ರೇಮದಲ್ಲಿ ಸಿಲುಕುವಿರಿ, ವಿಶೇಷವಾದ ಆಸಕ್ತಿಯಿಂದ ಕೆಲಸ, ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ, ಸಕಾಲದಲ್ಲಿ ಸರಿಯಾದ ನಿರ್ಧಾರದಿಂದ ಮನತೃಪ್ತಿ, ಬಂಧುಮಿತ್ರರ ಆಗಮನದಿಂದ ಖರ್ಚುವೆಚ್ಚ ಹೆಚ್ಚಾಗಲಿದೆ.

ಕಟಕರಾಶಿ
ಆರ್ಥಿಕ ಸಂಕಷ್ಟ, ಆಸೆ ಆಕಾಂಕ್ಷೆಗಳಿಗೆ ಬಲಿ, ಮಕ್ಕಳಿಂದ ಮನೋವ್ಯಥೆ, ಋಣ ಪರಿಹಾರಾರ್ಥ ಪ್ರಗತಿಪರ ಚಟುವಟಿಕೆಗಳು ಕಂಡುಬಂದಾವು, ಅಜೀರ್ಣ, ಉದರ ಉಪದ್ರವಗಳು ನಿಮ್ಮನ್ನು ಕಾಡಲಿದೆ, ಆತ್ಮೀಯರ ಆಕಸ್ಮಿಕ ಭೇಟಿಯಿಂದ ಸಂತಸವಾದೀತು, ದಿನಾಂತ್ಯ ಶುಭವಿದೆ.

ಸಿಂಹರಾಶಿ
ಸ್ವಯಂಕೃತ ಅಪರಾಧಗಳಿಂದ ನಷ್ಟ, ಕುಟುಂಬ ಸಂಕಷ್ಟಕ್ಕೆ ಸಿಲುಕುವುದು, ವಿಲಾಸೀ ಸಾಮಾಗ್ರಿಗಳ ಖರೀದಿಯಿಂದ ಸಂತೃಪ್ತಿ,. ಮನೋಕಾಮನೆ ಪೂರೈಕೆಯಿಂದ ಮನಸ್ಸಿಗೆ ಸಮಾಧಾನ ದೊರಕಲಿದೆ, ಗೃಹ ಖರೀದಿ, ಯಾ ನಿವೇಶನ ಖರೀದಿಯು ಕಂಡುಬಂದೀತು, ಮುನ್ನಡೆಯಿರಿ. ಸ್ತ್ರೀಯರಿಂದ ನೋವು, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ.

ಕನ್ಯಾರಾಶಿ
ಆತ್ಮೀಯರಿಂದ ನೆರವಿನ ಹಸ್ತ ಕಂಡುಬರಲಿದೆ, ವೃತ್ತಿರಂಗದಲ್ಲಿ ನಿರೀಕ್ಷಿತ ಬಾಹ್ಯ ನೆರವು ಲಭ್ಯವಾಗಲಿದೆ, ಕೀಳರಿಮೆ, ದೌರ್ಬಲ್ಯಗಳಿಂದ ಚೇತರಿಸಿಕೊಳ್ಳಲಿರುವ ಸೂಚನೆ ಕಂಡುಬಂದು ಸಮಾಧಾನ, ವ್ಯವಹಾರಸ್ಥರಿಗೆ ಅನುಕೂಲ, ಸಹೋದರಿಯಿಂದ ಧನಸಹಾಯ, ಹೆಣ್ಣುಮಕ್ಕಳಿಂದ ಉತ್ತಮ ಹೆಸರು ಪ್ರಾಪ್ತಿ.

ತುಲಾರಾಶಿ
ಮಾನಸಿಕ ನೆಮ್ಮದಿ ಪ್ರಾಪ್ತಿ, ಸ್ವಂತ ಉದ್ಯಮದವರಿಗೆ ಅನುಕೂಲ, ಉಲ್ಲಾಸದಾಯಕ ಕನಸು. ಲಾಭಯುಕ್ತ – ವ್ಯವಹಾರದಲ್ಲಿ ಜಯಶೀಲ ರಾಗುವಿರಿ. ಕುಟುಂಬದಲ್ಲಿ ಶುಭ ಮಂಗಲ ಕಾರ್ಯದ ಚಟುವಟಿಕೆ ಕಂಡುಬರಲಿದೆ, ಅಚ್ಚರಿಯ ರೀತಿಯಲ್ಲಿ ಅಧಿಕಾರಿಗಳ ವಕ್ರ ದೃಷ್ಟಿಯಿಂದ ಪಾರಾಗುವಿರಿ.

ವೃಶ್ಚಿಕರಾಶಿ
ಅದೃಷ್ಟ ಒಲಿದು ಬಂದರೂ ನಷ್ಟ, ಬಂಧು ಬಾಂಧವರಿಂದ ತೊಂದರೆ, ತಾಂತ್ರಿಕ ಕ್ಷೇತ್ರದವರಿಗೆ ಅನುಕೂಲ. ಅಜಾಗ್ರತೆಯಿಂದ ಅಮೂಲ್ಯ ವಸ್ತು ಕಳೆದು ಕೊಳ್ಳುವ ಸಾಧ್ಯತೆ ಕಂಡುಬರಲಿದೆ, ಅನಗತ್ಯವಾದ ವೆಚ್ಚವನ್ನು ಕಡಿಮೆ ಮಾಡಿರಿ, ಮಾನಸಿಕವಾಗಿ ನಿಮಗೆ ಕಿರಿಕಿರಿ ಕಂಡುಬಂದೀತು, ನೆಮ್ಮದಿಗಾಗಿ ಪ್ರಾರ್ಥಿಸಿರಿ.

ಧನಸುರಾಶಿ
ಟ್ಯಾಕ್ಸಿ ಚಾಲಕರು ಎಚ್ಚರಿಕೆಯಿಂದಿರಿ, ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ. ಅಸಮರ್ಥನೆಯ ಭಾವನೆಯಿಂದ ಮನೋಚಾಂಚಲ್ಯ ಕಾಡಲಿದೆ, ಧೈರ್ಯದಿಂದ ಪರಿಸ್ಥಿತಿ ಯನ್ನು ಎದುರಿಸುವುದು ಮುಖ್ಯ, ನಿರೀಕ್ಷಿತ ಮೂಲಗಳಿಂದ ಧನಾಗಮನವು ಕಂಡುಬಂದೀತು, ಕಿರು ಪ್ರಯಾಣವಿದೆ.

ಮಕರರಾಶಿ
ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಇಷ್ಟಾರ್ಥ ಈಡೇರುವ ಸಂದರ್ಭ, ಸ್ನೇಹಿತರು ಶತ್ರುಗಳಾಗುವರು, ಅನಗತ್ಯವಾದ ವಿಷಯಗಳಲ್ಲಿ ನಿಮ್ಮ ಆಗಮನ ಬೇಡ, ದೈಹಿಕ ಶ್ರಮ ಕಂಡು ಬರುವುದು, ನಿಮ್ಮ ಭಾವನೆಗಳಿಗೆ ಒಳ್ಳೆಯ ಬೆಲೆ ಬರಲಿದೆ. ಮಕ್ಕಳ ಶಿಕ್ಷಣಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಚರ್ಚೆ.

ಕುಂಭರಾಶಿ
ದುಡಿದ ಹಣ ಸಾಲಗಾರರ ಪಾಲು, ಸ್ಥಿರಾಸ್ತಿ ವ್ಯವಹಾರದಿಂದ ನಷ್ಟ, ಮಕ್ಕಳಿಂದ ನಷ್ಟ. ಹೊರೆಯಾಗಲಿರುವ ಹೊಣೆಗಾರಿಕೆಯಿಂದ ಮನಸ್ಸು ರೋಸಿ ಹೋದೀತು, ವೃತ್ತಿರಂಗದಲ್ಲಿ ಪರಿಸ್ಥಿತಿ ಅನುಗುಣವಾಗಿ ಚರ್ಚಿಸಬೇಕಾದ ಸಂದಿಗ್ದತೆ, ಅಧಿಕಾರದಲ್ಲಿರುವ ಮಿತ್ರರಿಂದ ಉಪಯುಕ್ತ ಕೊಡುಗೆ ಸಿಗಲಿದೆ.

ಮೀನರಾಶಿ
ನೆರೆಹೊರೆಯವರೊಡನೆ ಒಳ್ಳೆಯ ಬಾಂಧವ್ಯ, ಆಕಸ್ಮಿಕ ಭೂಮಿ ಮತ್ತು ವಾಹನ ಯೋಗ, ದಾರಿ ತಪ್ಪುವ ಸಂಭವ, ಪ್ರಯಾಣದಿಂದ ತೊಂದರೆ, ಕುಟುಂಬದಲ್ಲಿ ಶುಭ ಕಾರ್ಯ ನಿಮಿತ್ತ ಸಂತಸವಾಗಲಿದೆ, ವಿವಾದದಲ್ಲಿ ತಟಸ್ಥ ನಿಲುವು ತಾಳಿರಿ. ಅನುಕಂಪ ಗಳಿಸುವ ಯತ್ನದಲ್ಲಿ ಹಾಸ್ಯಕ್ಕೆ ಗುರಿಯಾಗಬೇಕಾದ ಸನ್ನಿವೇಶ ಎದುರಾಗಲಿದೆ, ಜಾಗ್ರತೆ ಮಾಡಿರಿ.

Comments are closed.