ಮಂಗಳವಾರ, ಏಪ್ರಿಲ್ 29, 2025
HomeBreakingನಾವು ಬದುಕೋದು ಬೇಡವಾ…?! ಸಿನಿಮಾದಂತೆ ಜಿಮ್ ಗೂ ಶೇಕಡಾ 50 ರಷ್ಟು ಪ್ರವೇಶಾವಕಾಶ ಕೊಡಿ…!!

ನಾವು ಬದುಕೋದು ಬೇಡವಾ…?! ಸಿನಿಮಾದಂತೆ ಜಿಮ್ ಗೂ ಶೇಕಡಾ 50 ರಷ್ಟು ಪ್ರವೇಶಾವಕಾಶ ಕೊಡಿ…!!

- Advertisement -

ರಾಜ್ಯದಲ್ಲಿ ಒಂದೆಡೆ ಸಿನಿಮಾ ಥೀಯೇಟರ್ ಗೆ ಶೇಕಡಾ 50 ರಷ್ಟು ಪ್ರವೇಶಾವಕಾಶ ನೀಡಿದ್ದಕ್ಕೆ ಅಸಮಧಾನ ಭುಗಿಲೆದ್ದು ನಟ,ನಿರ್ದೇಶಕ,ನಿರ್ಮಾಪಕರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದರೇ, ಜಿಮ್ ಒಕ್ಕೂಟ ಶೇಕಡಾ 50 ರಷ್ಟಾದರೂ ಪ್ರವೇಶಾವಕಾಶ  ಕೊಡಿ ಎಂದು ಬೀದಿಗಿಳಿದಿದೆ.

ನಮಗೂ ಶೇಕಡಾ 50 ರಷ್ಟು ಸಾಮರ್ಥ್ಯದಲ್ಲಿ ಜಿಮ್ ನಡೆಸಲು ಅವಕಾಶ ಕೊಡಿ. ಏಕಾಏಕಿ ಜಿಮ್ ಪಾತ್ರ ಪೂರ್ತಿಯಾಗಿ ಬಂದ್ ಮಾಡಿದ್ದೀರಿ. ಇದರಿಂದ ನಾವು ಬದುಕೋದೇ ಕಷ್ಟವಾಗಿದೆ. ಹೀಗಾಗಿ ಸಿನಿಮಾದಂತೆ ನಮಗೂ ಅರ್ಧದಷ್ಟು ಪ್ರವೇಶಕ್ಕೆ ಅವಕಾಶ ಕೊಡಿ. ನಮಗೊಂದು ನ್ಯಾಯ ಅವರಿಗೊಂದು ನ್ಯಾಯ ಯಾಕೆ ಎಂದು ರಾಜ್ಯ ಜಿಮ್ ಅಸೋಶಿಯೇಶನ್ ಅಧ್ಯಕ್ಷ ಜಿಮ್ ರವಿ ಪ್ರಶ್ನಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಸೋಸಿಯೇಶನ್ ಅಧ್ಯಕ್ಷ ಜಿಮ್ ರವಿ, ಏಕಾಏಕಿ ಜಿಮ್ ನ್ನು ಸಂಪೂರ್ಣವಾಗಿ ಬಂದ್ ಮಾಡಲು ಆದೇಶಿಸಿದರೇ, ಅದನ್ನೆ ನಂಬಿಕೊಂಡ ನಾವು ಏನು ಮಾಡಬೇಕು? ಕಟ್ಟಡದ ಬಾಡಿಗೆ, ಟ್ರೇನರ್ ಗಳ ಸಂಬಳ ಹೇಗೆ ಕೊಡಬೇಕು? ಈ ಹಿಂದೆ ಲಾಕ್ ಡೌನ್ ಘೋಷಿಸಿದಾಗ ನಾವು  ಆದೇಶ ಪಾಲಿಸಿದ್ದೇವೆ. ಈಗ ಜಿಮ್ ನ್ನು ಮಾತ್ರ ಯಾಕೆ ಪೂರ್ತಿ ಬಂದ್ ಮಾಡೋ ಆದೇಶ ನೀಡಲಾಗಿದೆ?

ನಮಗೆ ಹೊಟ್ಟೆಪಾಡು ಇಲ್ಲವೇ? ನಾವು ತೆರಿಗೆ ಕಟ್ಟೋದಿಲ್ಲವೇ? ನಮಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಜಿಮ್ ರವಿ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಜಿಮ್ ಗಳಿವೆ. ಈ ಪೈಕಿ 2 ಸಾವಿರ ಜಿಮ್ ಗಳು ಲಾಕ್ ಡೌನ್ ನಲ್ಲೇ ಬಾಗಿಲು ಮುಚ್ಚಿವೆ.  ಈ ರೀತಿ ಸರ್ಕಾರ ಏಕಾಏಕಿ ನಿರ್ಣಯ ಕೈಗೊಂಡರೆ ನಮ್ಮ ಕತೆ ಏನು ಎಂದು ಜಿಮ್ ರವಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಇದುವರೆಗೂ ಜಿಮ್ ಮಾಡಿದ ಯಾರಿಗೂ ಕೊರೋನಾ ಬಂದ ಉದಾಹರಣೆ ಇಲ್ಲ. ನಿಯಮಿತವಾಗಿ ಜಿಮ್ ನಲ್ಲಿ ವರ್ಕೌಟ್ ಮಾಡೋದರಿಂದ ಫಿಟನೆಸ್ ಕಾಯ್ದುಕೊಳ್ಳಬಹುದು. ಹೀಗಾಗಿ ನಮಗೂ ಅರ್ಧದಷ್ಟು ಜನರಿಗೆ ಪ್ರವೇಶಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ದರೇ ಮುಖ್ಯಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಜಿಮ್ ರವಿ ಎಚ್ಚರಿಸಿದ್ದಾರೆ.

RELATED ARTICLES

Most Popular