ತೆಲಂಗಾಣ : ಕಬಡ್ಡಿ ಪಂದ್ಯಾವಳಿ ವೇಳೆಯಲ್ಲಿ ಗ್ಯಾಲರಿ ಕುಸಿದು ನೂರಾರು ಮಂದಿ ಪ್ರೇಕ್ಷಕರು ಗಾಯ ಗೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಸೂರ್ಯಪೇಟೆಯಲ್ಲಿ ಎಸ್.ಪಿ.ಕಚೇರಿ ಮೈದಾನದಲ್ಲಿ 47ನೇ ಜೂನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್‌ಶಿಪ್ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಪಂದ್ಯಾವಳಿ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು ಗ್ಯಾಲರಿಯಲ್ಲಿ ಕುಳಿತಿದ್ದರು. ಈ ವೇಳೆಯಲ್ಲಿ ಒಮ್ಮಿಂದೊಮ್ಮೆಲೆ ಗ್ಯಾಲರಿ ಕುಸಿದಿದೆ.
ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಹೈದ್ರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತೆಲಂಗಾಣ ಕಬಡ್ಡಿ ಅಸೋಸಿಯೇಷನ್ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ದೇಶದ ನಾನಾ ಭಾಗಗಳಿಂದ ಆಟಗಾರರು ಆಗಮಿಸಿದ್ದರು.
ಮೈದಾನದಲ್ಲಿ ಮೂರು ವೀಕ್ಷಕರ ಗ್ಯಾಲರಿ ವೇದಿಕೆಗಳನ್ನು ಹಾಕಲಾಗಿತ್ತು. ಪ್ರತಿ ವೇದಿಕೆಯೂ 5000 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿತ್ತು ಎನ್ನಲಾಗಿತ್ತಿದೆ.