ಕಲಬುರ್ಗಿ : ಹಿರಿಯ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೊದಲ ಮಹಿಳೆಯೆನಿಸಿರುವ ಗೀತಾ ನಾಗಭೂಷಣ್ ವಿಧಿವಶರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಕಲಬುರ್ಗಿಯ ಸ್ವಸ್ತಿಕ ನಗರದಲ್ಲಿ ವಾಸವಿದ್ದ ಅವರಿಗೆ ಭಾನುವಾರ ಸಂಜೆ ಎದೆ ನೋವು ಕಾಣಿಸಿಕೊಂಡಿತ್ತು. ತತ್ಕ್ಷಣವೇ ಅವರನ್ನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಗೀತಾ ನಾಗಭೂಷಣ್ ಹೃದಯಾಘಾತದಿಂದ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. 1942 ಮಾರ್ಚ್ 25ರಂದು ಕಲಬುರ್ಗಿಯ ಸಾವಳಗಿ ಗ್ರಾಮದಲ್ಲಿ ಜನಸಿದ ಗೀತಾ ನಾಗಭೂಷಣ್ ಅವರು 27 ಕಾದಂಬರಿಗಳನ್ನ ಬರೆದಿದ್ದಾರೆ. ಅವರ ಬದುಕು ಕಾದಂಬರಿಗೆ ಕೇಂದ್ರ ಸಾಹಿತಿ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 50 ಸಣ್ಣ ಕಥೆಗಳು ಮತ್ತು 12 ನಾಟಕ ಕೃತಿಗಳನ್ನೂ ಅವರು ರಚಿಸಿದ್ದಾರೆ.

ಕೇಂದ್ರ ಸಾಹಿತಿ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಅವರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಸಾಹಿತಿಯೂ ಹೌದು. ನಾಡೋಜ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ ಎಂಬ ದಾಖಲೆಯೂ ಇದೆ. ಭಾರತೀಯ ಭಾಷಾ ಪರಿಷತ್ನ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿಯೂ ಹೌದು.