ಕಿರುತೆರೆಯ ಗಿಣಿರಾಮ ಸೀರಿಯಲ್ ನ ನಾಯಕಿ ಹಾಗೂ ಕಿರುತೆರೆ ನಟಿ ನಯನಾ ನಾಗರಾಜ್, ಇತ್ತೀಚಿಗಷ್ಟೇ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಮಾರಕ ಸೋಂಕಿನಿಂದ ಹೊರಬಂದು ಸಾಕಷ್ಟು ಒಳ್ಳೆಯ ಟಿಪ್ಸ್ ನೀಡಿದ್ದ ನಯನಾ ಇದೀಗ ಒಂದು ಹೆಜ್ಜೆ ಮುಂದೇ ಹೋಗಿ ಮತ್ತೊಂದು ಒಳ್ಳೆಯ ಕೆಲಸ ಮಾಡಿದ್ದಾರೆ.

ಗಿಣಿರಾಮ ಸೀರಿಯಲ್ ನ ನಾಯಕಿ ನಯನಾ ನಾಗರಾಜ್ ಇತ್ತೀಚಿಗಷ್ಟೇ ಕೊರೋನಾ ವೈರಸ್ ಗೆ ತುತ್ತಾಗಿದ್ದರು. ಮನೆಯಲ್ಲೇ ಐಷೋಲೇಟ್ ಆಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ನಯನಾ ಸಾಕಷ್ಟು ವಿಚಾರಗಳನ್ನು ಜನರೊಂದಿಗೆ ಹಂಚಿಕೊಂಡಿದ್ದರು.
https://instagram.com/stories/nayana.nagarajofficial/2575362435326340907?igshid=1s7e1v9qkp7ko
ಕೊರೋನಾವನ್ನು ಎದುರಿಸಲು ನಾವೆಲ್ಲರೂ ಮನೆಯಲ್ಲಿ ಎರಡು ವಸ್ತುಗಳನ್ನು ಇಟ್ಟುಕೊಳ್ಳಲೇ ಬೇಕೆಂದಿದ್ದ ನಯನಾ, ಥರ್ಮಾಮೀಟರ್ ಹಾಗೂ ಆಕ್ಸಿಜನ್ ಪಲ್ಸ್ ಮೀಟರ್ ಮಹತ್ವವನ್ನು ವಿಡಿಯೋ ಮಾಡಿ ವಿವರಿಸಿದ್ದರು.

ಅಲ್ಲದೇ ಕೊರೋನಾ ಅಥವಾ ಜ್ವರದ ಸಂದರ್ಭದಲ್ಲಿ ಥರ್ಮಾಮೀಟರ್ ಹಾಗೂ ಆಕ್ಸಿ ಪಲ್ಸ್ ಮೀಟರ್ ನ್ನು ಹೇಗೆ ಬಳಸಬೇಕು. ಯಾವಾಗ ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯತೆ ಇದೆ ಎಂಬುದನ್ನು ವಿವರಿಸಿದ್ದರು.

ಇದೀಗ ಕೊರೋನಾ ಹಾಗೂ ಸುಸ್ತಿನಿಂದ ಚೇತರಿಸಿಕೊಂಡ ನಯನಾ ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ಪ್ಲಾಸ್ಮಾ ದಾನಕ್ಕೆ ಮುಂದಾಗಿದ್ದಾರೆ. ಕೊರೋನಾದಿಂದ ಚೇತರಿಸಿಕೊಂಡ ರೋಗಿಗಳು ಪ್ಲಾಸ್ಮಾ ದಾನ ಮಾಡಿದರೇ ಅದರಿಂದ ಇತರ ಕೊರೋನಾ ರೋಗಿಗಳ ಚಿಕಿತ್ಸೆಗೆ ನೆರವಾಗುತ್ತದೆ.

ಹೀಗಾಗಿ ಒಂದೊಳ್ಳೆ ಕೆಲಸಕ್ಕಾಗಿ ನಯನಾ ರಕ್ತದಾನ ಮಾಡಿದ್ದು, ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಯನಾ ನಾಗರಾಜ್ ಈ ಒಳ್ಳೆಯ ಕೆಲಸಕ್ಕೆ ಎಲ್ಲೆಡೆಯಿಂದ ಶ್ಲಾಘನೆ ಹಾಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
