ಕನ್ನಡ ಕಿರುತೆರೆ ಲೋಕದಲ್ಲಿ ಎಷ್ಟೇ ಧಾರವಾಹಿಗಳು ಬಂದು ಹೋದರೂ ಟಿ.ಎನ್.ಸೀತಾರಾಮ್ ನಿರ್ದೇಶನದ ಧಾರವಾಹಿಗಳ ಪ್ರಭಾವ,ಜನಪ್ರಿಯತೆ ಹಾಗೂ ಪ್ರೇಕ್ಷಕ ವರ್ಗವೇ ಬೇರೆ. ಇದೀಗ ತಮ್ಮ ಅಭಿಮಾನಿಗಳಿಗೆ ಟಿ.ಎನ್.ಎಸ್ ಸಿಹಿಸುದ್ದಿ ನೀಡಿದ್ದಾರೆ.

ಮಗಳು ಜಾನಕಿ ಬಳಿಕ ಸೀತಾರಾಮ್ ನಿರ್ದೇಶನದ ಧಾರಾವಾಹಿಗಳನ್ನು ಮಿಸ್‌ಮಾಡಿಕೊಳ್ತಿದ್ದ ಪ್ರೇಕ್ಷಕರು ಹೊಸ ಧಾರಾವಾಹಿ ಯಾವಾಗ ಆರಂಭ ಅಂತ ಕೇಳುತ್ತಲೇ ಇದ್ದರು.ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸದ್ಯದಲ್ಲೇ ಟಿ.ಎನ್.ಸೀತಾರಾಮ್ ಹೊಸ ಧಾರಾವಾಹಿ ಆರಂಭಿಸಲಿದ್ದು ಯುಗಾದಿ ಬಳಿಕ ಶೂಟಿಂಗ್ ಆರಂಭಗೊಳ್ಳಲಿದೆ.

ಮೂಲಗಳ ಮಾಹಿತಿ ಪ್ರಕಾರ ಈ ಭಾರಿಯೂ ಕಲರ್ಸ್‌ಕನ್ನಡದಲ್ಲೇ ಸೀತಾರಾಮ್ ಧಾರಾವಾಹಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

ನಂದಿನಿ ಗೌಡ,ಚೈತ್ರಾ,ಶ್ರೀನಿವಾಸ್ ಪ್ರಭು,ಪ್ರವೀಣ್ ಡಿ ರಾವ್ ಮುಖ್ಯಭೂಮಿಕೆಯಲ್ಲಿರುವ ಈ ಧಾರಾವಾಹಿ ಸೀತಾರಾಮ್ ಅವರ ಎಲ್ಲ ಧಾರಾವಾಯಿಯಂತೆ ಪ್ರಚಲಿತ ಸಮಾಜದ ಸಮಸ್ಯೆಗಳು ಹಾಗೂ ಹೋರಾಟಗಳ ಮೇಲೆ ಬೆಳಕು ಚೆಲ್ಲಲಿದೆ ಎನ್ನಲಾಗುತ್ತಿದೆ.

ಎಂದಿನಂತೆ ಟಿ.ಎನ್.ಸೀತಾರಾಮ್ ತಮ್ಮ ಧಾರಾವಾಹಿಯಲ್ಲಿ ಕೋರ್ಟ್ ಸೀನ್ ನಲ್ಲಿ ಮಿಂಚುವ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಒಟ್ಟಾರೆ ಸೀತಾರಾಮ ಧಾರಾವಾಹಿಗಳ ಪ್ರಿಯರಿಗೆ ಯುಗಾದಿ ಬಳಿಕ ಹೋಳಿಗೆ ಊಟ ಪಕ್ಕಾ ಎಂಬಂತಾಗಿದ್ದು ಸಂಭ್ರಮದಲ್ಲಿದ್ದಾರೆ.