ಸರಕಾರಿ ನೌಕರರಿಗೆ ಬಿಗ್ ಗಿಫ್ಟ್ : ನಿವೃತ್ತಿ ವಯಸ್ಸು61ಕ್ಕೆ ಏರಿಕೆ, ಶೇ.30ರಷ್ಟು ವೇತನ ಹೆಚ್ಚಳ

ಹೈದರಾಬಾದ್ : ಸರಕಾರಿ ನೌಕರರಿಗೆ ತೆಲಂಗಾಣ ಸರಕಾರ ಭರ್ಜರಿ ಗಿಫ್ಟ್ ಘೋಷಣೆ ಮಾಡಿದ್ದು, ವೇತನದಲ್ಲಿ ಶೇ.30ರಷ್ಟು ಹೆಚ್ಚಳ ಮಾಡುವುದರ ಜೊತೆಗೆ ನಿವೃತ್ತಿ ವಯಸ್ಸನ್ನು 61 ವರ್ಷಕ್ಕೆ ಏರಿಕೆ ಮಾಡಿದೆ.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ವಿಧಾನಸಭೆಯಲ್ಲಿ ಈ ಘೋಷಣೆ ಮಾಡಿದ್ದಾರೆ. ಒಟ್ಟು 9.17 ಲಕ್ಷ ಸರ್ಕಾರಿ ಉದ್ಯೋಗಿಗಳಿದ್ದು, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೂ ಇದು ಅನ್ವಯಿಸಲಿದೆ. ಈಗಾಗಲೇ ಶೇ. 80ರಷ್ಟು ಅರ್ಹ ಉದ್ಯೋಗಗಳಿಗೆ ಬಡ್ತಿ ನೀಡಲಾಗಿದ್ದು, ಉಳಿದ ನೌಕರರಿಗೂ ಶೀಘ್ರವೇ ಬಡ್ತಿ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ವೇತನ ಆಯೋಗ ಸರಕಾರಿ ನೌಕರರ ವೇತನವನ್ನು ಶೇ.7.5 ರಷ್ಟು ವೇತನ ಹೆಚ್ಚಳ ಮಾಡುವಂತೆ ಶಿಫಾರಸ್ಸು ಮಾಡಿತ್ತು. ಆದರೆ ರಾಜ್ಯ ಸರಕಾರ ಬರೋಬ್ಬರಿ ಶೇ.30ರಷ್ಟು ಏರಿಕೆ ಮಾಡಿ ಸರಕಾರಿ ನೌಕರರಿಗೆ ಸಿಹಿ ನೀಡಿದೆ. ವೇತನ ಹೆಚ್ಚಳದಿಂದಾಗಿ ರಾಜ್ಯ ಸರಕಾರಕ್ಕೆ 8 ಸಾವಿರ ಕೋಟಿ ರು ಹೊರೆಯಾಗಲಿದೆ.

https://kannada.newsnext.live/kannada-smallscreen-serial-magalujanaki-tnseetaram-newserial-shooting/

ತೆಲಂಗಾಣದಲ್ಲಿ ಪ್ರಸ್ತುತ ಸರಕಾರಿ ನೌಕರರ ನಿವೃತ್ತಿಯ ವಯಸ್ಸು 58 ಇದ್ದು, ಇದೀಗ ಸರಕಾರ ನಿವೃತ್ತಿಯ ವಯಸ್ಸನ್ನು 2 ವರ್ಷ ಹೆಚ್ಚಳ ಮಾಡುವ ಮೂಲಕ 61ಕ್ಕೆ ಏರಿಕೆ ಮಾಡಿದೆ. ಇನ್ನು ಖಾಲಿ ಉಳಿದಿರುವ ಹುದ್ದೆಗಳನ್ನೂ ಕೂಡ ಶೀಘ್ರದಲ್ಲಿಯೇ ಭರ್ತಿ ಮಾಡುವ ಕುರಿತು ಆದೇಶ ಹೊರಡಿಸುವುದಾಗಿಯೂ ತಿಳಿಸಿದ್ದಾರೆ.

Comments are closed.